ಟಿಆರ್​ಎಸ್ ಗೆಲುವಿನ ಗುಟ್ಟೇನು? ಕೆಸಿಆರ್ ಮಾಡಿದ ಜನಪರ ಕೆಲಸಗಳೇನು?

ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಟಿಆರ್​​ಎಸ್ ನಾಯಕ ಚಂದ್ರಶೇಖರ್ ರಾವ್. ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಕೆಸಿಆರ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.

G Hareeshkumar | news18india
Updated:December 11, 2018, 9:24 PM IST
ಟಿಆರ್​ಎಸ್ ಗೆಲುವಿನ ಗುಟ್ಟೇನು? ಕೆಸಿಆರ್ ಮಾಡಿದ ಜನಪರ ಕೆಲಸಗಳೇನು?
ತೆಲಂಗಾಣದಲ್ಲಿ ಕೆಸಿಆರ್ ದಿಗ್ವಿಜಯ
  • Share this:
ತೆಲಂಗಾಣ (ಡಿ.11) :  ನಿರೀಕ್ಷೆಯಂತೆ ಕಲ್ವಕುಂಟ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಹೊಸ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಎರಡನೇ ಭಾರಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಭಾರಿ ಯಶಸ್ಸು ಗಳಿಸಿದೆ

ವಿಧಾನಸಭೆಗೆ ನಡೆದ ಚುನಾವನೆಯಲ್ಲಿ ಕೆಸಿಆರ್ ನೇತೃತ್ವದ ಟಿಆರ್​​ಎಸ್ 88 ಕಾಂಗ್ರೆಸ್ 21 ಬಿಜೆಪಿ 1 ಇತರರು 9 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಇದನ್ನು ಓದಿ : ಮೋದಿಗಿಂತಲೂ ಹೆಚ್ಚು ವರ್ಷ ಸಿಎಂ ಆಗಿದ್ದ ಬಿಜೆಪಿಯ ಈ ಡಾಕ್ಟರ್​ಗೆ ಸೋಲಿನ ಕಹಿ

ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಟಿಆರ್​​ಎಸ್ ನಾಯಕ ಚಂದ್ರಶೇಖರ್ ರಾವ್. ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಕೆಸಿಆರ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಚಂದ್ರಶೇಖರ್​ ಅವರು ಹಮ್ಮಿಕೊಂಡ ಜನಪರ ಯೋಜನೆಗಳು ಅವರನ್ನು ಯಶಸ್ಸಿನತ್ತ ಕೊಂಡೊಯ್ದಿವೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದಲ್ಲದೇ ಚಂದ್ರಶೇಖರ್ ರಾವ್ ಅವರು ತೆಲಂಗಾಣದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ.

ಸಾಲ ಮನ್ನಾ: ರೈತರ ಒಂದು ಲಕ್ಷದ ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಕೆಸಿಆರ್ ಪ್ರಣಾಳಿ ಕೆಯಲ್ಲಿ ಸೂಚಿಸಿದ್ದರು. ರೈತಬಂಧು ಯೋಜನೆಯ ಮೂಲಕ ರೈತ ಸಮುದಾಯದ ಮನ ಗೆದ್ದಿದ್ದ ಕೆಸಿಆರ್ ಅವರು ಸಾಲ ಮನ್ನಾ ಘೋಷಣೆಯ ಮೂಲಕವೂ ರೈತರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ

ಉಚಿತ ವಿದ್ಯುತ್ :  2015ರ ಮಾರ್ಚ್‍ನಲ್ಲಿ ಪ್ರಾರಂಭವಾದ ಕಾಕತೀಯ ವೈಭವ  ಯೋಜನೆಯಡಿ ತೆಲಂಗಾಣ ರಾಜ್ಯದಾದ್ಯಂತ 46 ಸಾವಿರ ಕೆರೆಗಳು, ಕಾಲುವೆಗಳು ನಿರ್ಮಾಣ ಮಾಡಿ ಸುಮಾರು 270 ಟಿಎಂಸಿ ನೀರನ್ನು ಸಂಗ್ರಹಿಸುವುದು ಸರ್ಕಾರದ ಪ್ರಮುಖ ಗುರಿಯಗಿತ್ತು. ಸುಮಾರು 2 ಲಕ್ಷ ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿತ್ತುದ್ದ ಈಗಾಗಲೇ ಸಾಕಷ್ಟು ಗ್ರಾಮಗಳು ಇದರ ಪ್ರಯೋಜನ ಪಡೆದಿವೆ.

ರಾಜ್ಯಕ್ಕೆ 24 ಗಂಟೆಗಳ ಕಾಲ ವಿದ್ಯುತ್ ನೀಡುವ ಮೂಲಕ ರಾಜ್ಯದ ಜನರ ಕೀರ್ತಿಯನ್ನು ಟಿಆರ್​ಎಸ್​ ಗಳಿಸಿತ್ತು. ರಾಜ್ಯಕ್ಕೆ ವಿದ್ಯುತ್ ಸಮಸ್ಯೆ ಬರದಂತೆ ನೋಡಿಕೊಂಡ ಕೆಸಿಆರ್ ಅವರು ಸಮಸ್ಯೆ ಎದುರಾದಾಗ ನೆರೆಯ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ನಾಡಿನ ಜನತೆಗೆ ಪೂರೈಸಿದರು. ಇದು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು.

ರೈತು ಬಂಧು ಯೋಜನೆ : ರೈತ ಬಂಧು ಯೋಜನೆ ಟಿಆರ್​ಎಸ್ ಪಕ್ಷದ ಪ್ರಮುಖ ಯೋಜನೆಯಾಗಿತ್ತು. ಚುನಾವಣೆಗೆ ಹೊಗಬೇಕು ಎನ್ನುವ ಹೊಸ್ತಿಲಲ್ಲೇ ಕೆಸಿಆರ್ ಈ ಯೋಜನೆಗೆ ಚಾಲನೆ ನೀಡಿದ್ದರು. ಸುಮಾರು ಒಂದು ಕೋಟಿ ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಯೋಜನೆ ಪ್ರಾರಂಭಿಸಲಾಗಿತ್ತು ಎನ್ನಲಾಗಿದೆ.

ಈ ಯೋಜನೆಯಲ್ಲಿ ಹಣ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗುತ್ತದೆ. ಇದು ರೈತವರ್ಗವನ್ನು ಆಕರ್ಷಿಸಿತು. ಯೋಜನೆಯಡಿ ಮುಖ್ಯಮಂತ್ರಿಯವರು ಚುನಾವಣೆಗೂ ಮುನ್ನ ಎರಡು ಭಾರಿ ಚೆಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದು ಟಿಆರ್​ ಎಸ್‍ಗೆ ಲಾಭವಾಗಿ ಪರಿಣಮಿಸಿತು.

ಶಾದಿ ಮುಬಾರಕ್ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಧಿ. ವಿವಿಧ ಸಮುದಾಯದವರಿಗೆ ಪ್ರತ್ಯೇಕ ಭವನಗಳ ನಿರ್ಮಾಣ, ಅಲ್ಪಸಂಖ್ಯಾತ ಸಮುದಾಯದವರಿಗೆ `ಶಾದಿ ಮುಬಾರಕ್' ನಂತಹ ಯೋಜನೆಗಳನ್ನು ಕೆಸಿಆರ್ ಜಾರಿಗೊಳಿಸಿದ್ದೂ ಅವರಿಗೆ ವರದಾನವಾಗಿ ಪರಿಣಮಿಸಿತು.

ಬ್ರಾಹ್ಮಣ, ರೆಡ್ಡಿ ಸೇರಿದಂತೆ ರಾಜ್ಯದ ಸುಮಾರು 30ಕ್ಕೂ ಹೆಚ್ಚು ಸಮುದಾಯಗಳಿಗೆ ಸಮುದಾಯ ಭವನಗಳ ನಿರ್ಮಾಣ ಮಾಡಿ ಕೊಡುವ ಭರವಸೆಯನ್ನು ಕೆಸಿಆರ್ ನೀಡಿದ್ದರು. ಇದು ಎಲ್ಲ ವರ್ಗದ ಮತದಾರರನ್ನು ಸೆಳೆಯಿತು.

ಇದನ್ನು ಓದಿ :  ಬಿಜೆಪಿ V/S ಶಿವಸೇನೆ: ಪಂಚರಾಜ್ಯ ಫಲಿತಾಂಶ ಬಿಜೆಪಿ ಸೋಲಿಗೆ ಸ್ಪಷ್ಟ ಸಂದೇಶ- ಸಂಜಯ್​ ರಾವತ್​​

ಚಂದ್ರಶೇಖರ್ ರಾವ್​ ಅವರು ರಾಜಕೀಯ ನೆಲೆಯನ್ನು ಭದ್ರಪಡಿಸಿಕೊಳ್ಳಲು ರಾಜ್ಯದ ಜನರಿಗೆ ಯಾವ ರೀತಿಯ ಯೋಜನೆಗಳು ಅಗತ್ಯವಿದೆಯೋ ಅದನ್ನೆಲ್ಲವನ್ನು ಕೈಗೆತ್ತಿಕೊಳ್ಳಲು ಸಂಕಲ್ಪದೊಂದಿಗೆ ಜನತೆಯ ಬಳಿ ಹೋಗಿದ್ದರು. ಆ ಸಂಕಲ್ಪಗಳು ಅವರಿಗೆ ಯಶಸ್ಸು ತಂದುಕೊಟ್ಟಿದೆ. 

 
First published: December 11, 2018, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading