ತೆಲಂಗಾಣದಲ್ಲಿ ಗೆಲ್ಲುವ, ಸೋಲುವ ಪ್ರಮುಖ ನಾಯಕರು ಯಾರ್ಯಾರು?

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಸುಹಾಸಿನಿ ನಂದಮೂರಿ ಅವರು ಕುಕಟಪಲ್ಲಿ ಕ್ಷೇತ್ರದಲ್ಲಿ ಟಿಆರ್​ಎಸ್​ ಅಭ್ಯರ್ಥಿ ಎಂ.ಕೃಷ್ಣ ರಾವ್​ ವಿರುದ್ಧ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಸುಹಾಸಿನಿ ಆಂಧ್ರದ ನಟ, ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಪುತ್ರಿಯಾಗಿದ್ದಾರೆ. ಟಿಡಿಪಿ ಸಂಸ್ಥಾಪಕ ಎನ್​.ಟಿ.ರಾಮ್​ರಾವ್ ಅವರ ಮೊಮ್ಮಗಳು.

HR Ramesh | news18india
Updated:December 11, 2018, 5:32 PM IST
ತೆಲಂಗಾಣದಲ್ಲಿ ಗೆಲ್ಲುವ, ಸೋಲುವ ಪ್ರಮುಖ ನಾಯಕರು ಯಾರ್ಯಾರು?
ಸುಹಾಸಿನಿ ನಂದಮೂರಿ ಮತ್ತು ಕೆ.ಚಂದ್ರಶೇಖರ ರಾವ್
  • Share this:
ಕೆ.ಚಂದ್ರಶೇಖರ ರಾವ್, ಟಿಆರ್​ಎಸ್​

ಗಜ್ವೆಲ್​ ಕ್ಷೇತ್ರ  - ಮುನ್ನಡೆ

ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ತಮ್ಮ ತವರು ಕ್ಷೇತ್ರ ಗಜ್ವೆಲ್ ಕ್ಷೇತ್ರದಲ್ಲಿ ಭಾರಿ ಮುನ್ನಡೆ ಸಾಧಿಸಿದ್ದು, ಗೆಲುವು ನಿಶ್ಚಿತವಾಗಿದೆ. ಎರಡನೇ ಬಾರಿಗೆ ತೆಲಂಗಾಣದಲ್ಲಿ ಪಕ್ಷವನ್ನು ಅಧಿಕಾರದತ್ತ ಮುನ್ನಡೆಸಿದ್ದಾರೆ.

ಎನ್​.ಉತ್ತಮ ಕುಮಾರ್ ರೆಡ್ಡಿ, ಕಾಂಗ್ರೆಸ್​

ಹುಜುರ್​ನಗರ ಕ್ಷೇತ್ರ - ಮುನ್ನಡೆ

ಕಾಂಗ್ರೆಸ್​ ನಾಯಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿದ್ದ ಉತ್ತಮ್​ಕುಮಾರ್​ ರೆಡ್ಡಿ ಹುಜುರ್​ನಗರ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷದಲ್ಲಿ ಹಿರಿಯ ನಾಯಕರಾಗಿರುವ ಇವರು, ಭಾರತೀಯ ವಾಯುಸೇನೆಯಲ್ಲಿ ಫೈಟರ್​ ಪೈಲೆಟ್​ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತೆಲಂಗಾಣ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಸುಹಾಸಿನಿ ನಂದಮೂರಿ, ಟಿಡಿಪಿಕುಕಟಪಲ್ಲಿ ಕ್ಷೇತ್ರ -  ಹಿನ್ನಡೆ

ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದ ಸುಹಾಸಿನಿ ನಂದಮೂರಿ ಅವರು ಕುಕಟಪಲ್ಲಿ ಕ್ಷೇತ್ರದಲ್ಲಿ ಟಿಆರ್​ಎಸ್​ ಅಭ್ಯರ್ಥಿ ಎಂ.ಕೃಷ್ಣ ರಾವ್​ ವಿರುದ್ಧ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಈ ಕ್ಷೇತ್ರ ಆಂಧ್ರಪ್ರದೇಶದ ಬೃಹತ್​ ಪ್ರಮಾಣದ ಜನರು ಇರುವುದರಿಂದ ಅವರು ಆಶೀರ್ವಾದ ಮಾಡಲಿದ್ದಾರೆ ಎಂದು ಭಾವಿಸಲಾಗಿತ್ತು. ಸುಹಾಸಿನಿ ಆಂಧ್ರದ ನಟ, ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಪುತ್ರಿಯಾಗಿದ್ದಾರೆ. ಟಿಡಿಪಿ ಸಂಸ್ಥಾಪಕ ಎನ್​.ಟಿ.ರಾಮ್​ರಾವ್ ಅವರ ಮೊಮ್ಮಗಳು. ನಂದಮೂರಿ ಕುಟುಂಬದಿಂದ ಚುನಾವಣೆಗೆ ಸ್ಪರ್ಧಿಸಿದ ಎರಡನೆಯವರಾಗಿದ್ದಾರೆ.

ಕೆ.ಟಿ. ರಾಮರಾವ್​, ಟಿಆರ್​ಎಸ್​

ಸಿರ್ಸಿಲ್ಲಾ ಕ್ಷೇತ್ರ -  ಮುನ್ನಡೆ

ಟಿಆರ್​ಎಸ್​​ ಪಕ್ಷದ ಎರಡನೇ ಮುಖ್ಯಸ್ಥ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್​ ಅವರು 70 ಸಾವಿರ ಮತಗಳ ಬೃಹತ್​ ಮತಗಳ ಅಂತರದ ಮತಗಳನ್ನು ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರು ಕೇವಲ 170 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಅಕ್ಬರುದ್ದೀನ್​ ಓವೈಸಿ, ಎಐಎಂಐಎಂ

ಚಂದ್ರಾಯನಗುಟ್ಟಾ ಕ್ಷೇತ್ರ - ಮುನ್ನಡೆ

ನಾಲ್ಕು ಬಾರಿ ಶಾಸಕರಾಗಿರುವ ಓವೈಸಿ  ಚಂದ್ರಾಯನಗುಟ್ಟಾ ಕ್ಷೇತ್ರದಿಂದ 60 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ. ಇದು ಸಾಂಪ್ರದಾಯಕ ಮುಸ್ಲಿಂ ಮತಗಳ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ. ಇವರ ಗೆಲುವನ್ನು ಮೊದಲೇ ನಿರೀಕ್ಷಿಸಲಾಗಿತ್ತು. 1999ರಿಂದ ಇವರು ಈ ಕ್ಷೇತ್ರದಿಂದ ಗೆಲ್ಲುತ್ತಾ ಬಂದಿದ್ದಾರೆ.

ರೇವತಿ ರೆಡ್ಡಿ, ಕಾಂಗ್ರೆಸ್​

ಕೊಡಂಗಲ್ ಕ್ಷೇತ್ರ ​, ಹಿನ್ನಡೆ

ತೆಲಂಗಾಣದ ಕಾಂಗ್ರೆಸ್​ ನಾಯಕ ಮತ್ತು ಮುಖ್ಯಮಂತ್ರಿಯಾಗುವ ಸಂಭವನೀಯ ಅಭ್ಯರ್ಥಿ ಕೂಡ ಆಗಿದ್ದ ರೇವತಿ ರೆಡ್ಡಿ ಟಿಆರ್​ಎಸ್​ ಸ್ಪರ್ಧಿ ಪಿ.ನರೇಂದರ್​ ರೆಡ್ಡಿ ವಿರುದ್ಧ ಭಾರೀ ಹಿನ್ನಡೆ ಅನುಭವಿಸಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಟಿಡಿಪಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದರು. 2017ರಲ್ಲಿ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದರು.

5 ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ

Election Results LIVE: ಮಧ್ಯಪ್ರದೇಶದಲ್ಲಿ ಮತ್ತೆ ಹಾವುಏಣಿ ಆಟ; ಕಾಂಗ್ರೆಸ್​-ಬಿಜೆಪಿ ಸಮಬಲ
First published:December 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ