news18 Updated:November 10, 2020, 1:42 PM IST
ಸಾಂದರ್ಭಿಕ ಚಿತ್ರ
- News18
- Last Updated:
November 10, 2020, 1:42 PM IST
ಬೆಂಗಳೂರು(ನ. 10): ಮಧ್ಯಪ್ರದೇಶದ 28 ಕ್ಷೇತ್ರಗಳು, ಕರ್ನಾಟಕದ 2 ಕ್ಷೇತ್ರಗಳು ಸೇರಿದಂತೆ ದೇಶಾದ್ಯಂತ 59 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುವಂತಿದೆ. ಆರಂಭಿಕ ಹಂತಗಳ ಮತ ಎಣಿಕೆಯಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಧ್ಯ ಪ್ರದೇಶದಲ್ಲಿ ತೆರವಾಗಿರುವ 28 ಕ್ಷೇತ್ರಗಳಲ್ಲಿ ಬಿಜೆಪಿ 20 ಕಡೆ ಮುನ್ನಡೆ ಹೊಂದಿದೆ. ಸರ್ಕಾರವನ್ನು ಉಳಿಸಿಕೊಳ್ಳುವಷ್ಟು ಅವಶ್ಯವಿರುವ ಎಂಟರ ಗಡಿಯನ್ನು ಬಿಜೆಪಿ ಸುಲಭವಾಗಿ ದಾಟುವಂತೆ ಕಾಣುತ್ತಿದೆ. ಕಾಂಗ್ರೆಸ್ ಇಲ್ಲಿ 7 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ.
ಕರ್ನಾಟಕದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಹೊಂದಿದೆ. ಶಿರಾ ಮತ್ತು ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಮುನ್ನಡೆ ಪಡೆದಿದ್ದಾರೆ. ದುರ್ಬಲ ನೆಲೆ ಇದ್ದರೂ ಶಿರಾದಲ್ಲಿ ಬಿಜೆಪಿ ಗೆಲ್ಲುತ್ತಿರುವುದು ಆ ಪಕ್ಷದ ವರ್ಚಸ್ಸು ಇನ್ನಷ್ಟು ಹೆಚ್ಚಾಗಲಿದೆ. ಗುಜರಾತ್ನ 8 ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚೂಕಡಿಮೆ ಕ್ಲೀನ್ ಸ್ವೀಪ್ ಮಾಡುತ್ತಿರುವಂತಿದೆ. ಉತ್ತರ ಪ್ರದೇಶದ 7 ಕ್ಷೇತ್ರಗಳಲ್ಲಿ ಬಿಜೆಪಿ ಆರು ಕಡೆ ಮುನ್ನಡೆ ಪಡೆದಿದೆ. ತೆಲಂಗಾಣದ ದುಬ್ಬಕ್ಕ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಹೊಂದಿರುವುದು ಗಮನಾರ್ಹ. ಇನ್ನು, ಬಿಹಾರದ ಏಕೈಕ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಯು ಮುನ್ನಡೆ ಪಡೆದಿದೆ.
ಇದನ್ನೂ ಓದಿ: Bihar Assembly Election 2020 Results Live: ಬಿಹಾರ ಚುನಾವಣೆ – ಎನ್ಡಿಎ ಮತ್ತು ಮಹಾಘಟಬಂಧನ ಸಮಬಲ ಮುನ್ನಡೆ
ದೇಶಾದ್ಯಂತ ವಿಧಾನಸಭಾ ಉಪಚುನಾವಣೆಗಳ ಫಲಿತಾಂಶ: ಒಟ್ಟು 59
ಬಿಜೆಪಿ 41, ಕಾಂಗ್ರೆಸ್ 11, ಇತರೆ 7
ಮಧ್ಯಪ್ರದೇಶ: 28 (ಬಿಜೆಪಿ 20, ಕಾಂಗ್ರೆಸ್ 7, ಇತರೆ 1)
ಗುಜರಾತ್: 8 (ಬಿಜೆಪಿ 8, ಕಾಂಗ್ರೆಸ್ 0)ಉತ್ತರ ಪ್ರದೇಶ: 7 (ಬಿಜೆಪಿ 6, ಇತರೆ 1)
ಮಣಿಪುರ: 5 (ಬಿಜೆಪಿ 3, ಕಾಂಗ್ರೆಸ್ 1, ಇತರೆ 1)
ಕರ್ನಾಟಕ: 2 (ಬಿಜೆಪಿ 2)
ಒಡಿಶಾ: 2 (ಬಿಜೆಡಿ 1, ಇತರೆ 1)
ಜಾರ್ಖಂಡ್: 2 (ಬಿಜೆಪಿ 1, ಕಾಂಗ್ರೆಸ್ 1)
ನಾಗಾಲ್ಯಾಂಡ್: 2 (ಇತರೆ 2)
ಛತ್ತೀಸ್ಗಡ: 1 (ಕಾಂಗ್ರೆಸ್)
ಹರಿಯಾಣ: 1 (ಕಾಂಗ್ರೆಸ್
ತೆಲಂಗಾಣ: 1 (ಬಿಜೆಪಿ)
Published by:
Vijayasarthy SN
First published:
November 10, 2020, 10:01 AM IST