Viral News : ಈ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್ ಕಾರ್ಯಕ್ಕೆ ಸಲಾಂ ಹೇಳಿದ ನೆಟ್ಟಿಗರು!

Viral News : ತಾಯಿ ಪರೀಕ್ಷೆ ಬರೆಯಲು ಎಕ್ಸಾಂ ಹಾಲ್(Exam hall)​ಗೆ ಹೋದರೆ, ಇತ್ತ ಪರೀಕ್ಷಾ ಕೇಂದ್ರಕ್ಕೆ ಸೆಕ್ಯೂರಿಟಿ ನೀಡಲು ಬಂದಿದ್ದ ಮಹಿಳಾ ಪೊಲೀಸ್​ ಆಕೆಯ ಮಗುವನ್ನು ನೋಡಿಕೊಂಡಿದ್ದಾರೆ.

ವೈರಲ್​ ಆದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​

ವೈರಲ್​ ಆದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​

  • Share this:
ಹೆಣ್ಣು ಒಲಿದರೆ ತಾಯಿ(Mother), ಹೆಂಡತಿ(Wife), ಅಕ್ಕ(Sister), ತಂಗಿ ಎಲ್ಲರೂ ಸಿಗುತ್ತಾರೆ. ಅದು ಹೇಗೆ ಅಂತೀರಾ? ಹೌದು, ಹೆಣ್ಣಿ(Women)ಗೆ ನಾವು ಗೌರವ(Respect) ಕೊಟ್ಟರೆ, ಆಕೆ ಎಲ್ಲರ ಪ್ರೀತಿಯನ್ನು ನೀಡುತ್ತಾಳೆ. ಅದಕ್ಕೆ ಭಾರತದಲ್ಲಿ ಹೆಣ್ಣಿಗೆ ಎಲ್ಲರೂ ಗೌರವ ನೀಡುತ್ತಾರೆ. ಆಕೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗುತ್ತಾಳೆ. ಯಾವುದದರೂ ಮಗು(Child) ಅಳುತ್ತಿದ್ದರೆ, ತಾಯಿಯಂತೆ ಎತ್ತಿಕೊಂಡು ಸಮಾಧಾನ ಮಾಡುತ್ತಾಳೆ.  ಅದೇ ರೀತಿ ಒಂದು ಘಟನೆ ಅಸ್ಸಾಂ(Assam)ನಲ್ಲಿ ನಡೆದಿದೆ. ಮಹಿಳಾ ಪೋಲಿಸ್​ ಕಾನ್ಸ್​ಟೇಬಲ್(Women cop) ಕಾರ್ಯವನ್ನು ನೋಡಿ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಾಯಿ ಪರೀಕ್ಷೆ ಬರೆಯಲು ಎಕ್ಸಾಂ ಹಾಲ್(Exam hall)​ಗೆ ಹೋದರೆ, ಇತ್ತ ಪರೀಕ್ಷಾ ಕೇಂದ್ರಕ್ಕೆ ಸೆಕ್ಯೂರಿಟಿ ನೀಡಲು ಬಂದಿದ್ದ ಮಹಿಳಾ ಪೊಲೀಸ್​ ಆಕೆಯ ಮಗುವನ್ನು ನೋಡಿಕೊಂಡಿದ್ದಾರೆ. ತಾಯಿ ಎಕ್ಸಾಂ ಬರೆದು ಮುಗಿಸಿಬರುವವರೆಗೂ, ಮಗುವನ್ನು ತನ್ನ ಸ್ವಂತ ಮಗುವಂತೆ ಆಟವಾಡಿಸಿಕೊಂಡು, ಸಮಾಧಾನ ಮಾಡಿಸಿಕೊಂಡು ಆರೈಕೆ ಮಾಡಿದ್ದಾರೆ. ಈ ಸುದ್ದಿ ಇದೀಗ ಎಲ್ಲೆಡೆ ವೈರಲ್​ ಆಗ್ತಿದೆ. ಮಹಿಳಾ ಪೊಲೀಸ್​ ಕಾರ್ಯಕ್ಕೆ ಎಲ್ಲರೂ ಶಹಬ್ಬಾಸ್​ ತಿಳಿಸುತ್ತಿದ್ದಾರೆ.

ಪರೀಕ್ಷೆ ಬರೆಯಲು ಒಳಗೆ ಹೋದ ತಾಯಿ

ಅಸ್ಸಾಂನ ಕರ್ಬಿ ಆಂಗ್ಲಾಂಗ್​ ಜಿಲ್ಲೆಯ ಬೊಕಜಾನ್​ ಹೈಯರ್​ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾಗಲು ಕಂದಮನನ್ನು ಕೈಯಲ್ಲಿ ಹಿಡಿದು ಮಹಿಳೆಯೊಬ್ಬಳು ಬಂದಿದ್ದಳು. ಅಲ್ಲೆ ಇದ್ದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಕೈಗೆ ತಾಯಿ ಮಗುವನ್ನು ಕೊಟ್ಟು, ಪರೀಕ್ಷೆ ಬರೆದು ಬರುವಾದಗಿ ಹೇಳಿದ್ದಳು. ಇತ್ತ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಸ್ವಂತ ಮಗುವಿನಂತೆ ಶಿಶುವಿನ ಆರೈಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಪೊಲೀಸ್​ ಕಾನ್ಸ್​ಟೇಬಲ್​ ಕಾರ್ಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : ಬೆಲೆ ಗೊತ್ತಿಲ್ಲದೇ ₹20 ಕೋಟಿ ವಜ್ರದ ಉಂಗುರ ಬಿಸಾಡೋಕೆ ಹೊರಟಿದ್ಲು ಮಹಾತಾಯಿ!

ಟ್ವೀಟ್​ ಮಾಡಿದ ಅಸ್ಸಾಂ ಡೆಪ್ಯೂಟಿ ಸ್ಫೀಕರ್​

ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಕಾಚೆ ಬೇಪಿ ಎಂಬುವವರು ತಾಯಿ ಪರೀಕ್ಷೆಯನ್ನು ಮುಗಿಸಿ ಬರುವವರೆಗೂ ಮಗುವನ್ನ ನೋಡಿಕೊಂಡಿದ್ದಾರೆ. ಈ ಬಗ್ಗೆ ಅಸ್ಸಾಂ ವಿಧಾನಸಭೆಯ ಉಪ ಸ್ಪೀಕರ್ ಡಾ. ನುಮಲ್ ಮೊಮಿನ್ ಅವರು ಟ್ವೀಟ್ ಮಾಡಿದ್ದಾರೆ, `ಬೊಕಾಜಾನ್ ಎಚ್‌ಎಸ್ ಶಾಲೆಯ ಟಿಇಟಿ ಪರೀಕ್ಷೆಯಲ್ಲಿ ಟಿಇಟಿ ಪರೀಕ್ಷಾರ್ಥಿಯ ಮಗುವನ್ನು ನೋಡಿಕೊಳ್ಳುವ ಮಹಿಳಾ ಕಾನ್ಸ್‌ಟೇಬಲ್ ಶ್ರೀಮತಿ ಕಚೆ ಬೇಪಿಗೆ ನಾನು ನಮಸ್ಕರಿಸುತ್ತೇನೆ’. ಎಂದು ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲದೇ ಹಲವು ಗಣ್ಯರು, ಹಾಗೂ ಸಿನಿಮಾ ನಟ, ನಟಿಯರು ಮಹಿಳಾ ಪೊಲೀಸ್​ ಕಾನ್ಸ್​​ಟೇಬಲ್ ಫೋಟೋಗಳನ್ನು ತಮ್ಮ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ​


ಇದನ್ನು ಓದಿ : ವಿವಾದಿತ ಮಂಗಳಸೂತ್ರ ಜಾಹೀರಾತು ಹಿಂಪಡೆದ ಸಬ್ಯಸಾಚಿ

`ನಿಮ್ಮ ಕಾರ್ಯಕ್ಕೆ ಹ್ಯಾಟ್ಸ್​ಅಪ್​’

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಕೂಡ ಸಖತ್​ ವೈರಲ್​ ಆಗುತ್ತಿದೆ. ಪೊಲೀಸರು ಅಂದರೆ ಹಣ ಕಿಳುವವರು ಎಂದು ಹೇಳುತ್ತಾರೆ. ಇಂಥವರ ನಡುವೆ ಕಮಲವೊಂದನ್ನು ನೋಡಿದ ಹಾಗೇ ಆಯ್ತು ಅಂತ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ನಿಮ್ಮಂಥ ಒಬ್ಬರು ಇದ್ದರೆ ಸಾಕು ಪೊಲೀಸ್​ ಇಲಾಖೆಗೆ ಆನೆಬಲ ಬಂದಂತೆ ಎಂದು ಮತ್ತೊಬ್ಬ ಕಮೆಂಟ್​ ಮಾಡಿದ್ದಾನೆ. ತಮ್ಮ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬಂದು, ಕರ್ತ್ಯವ್ಯದಲ್ಲಿದ್ದಾಗೆ ಬೇರೆಯವರ ಮಗುವಿಗೆ ನೀವು ಆರೈಕೆ ಮಾಡಿರುವುದು ನಿಜಕ್ಕೂ ಸಂತಸತ ವಿಚಾರ ಅಂತ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಕಾರ್ಯಕ್ಕೆ ಬಹುಪರಾಕ್​ ಹಾಕಿದ್ದಾರೆ. ಕಳೆದ ಶನಿವಾರ ಹಾಗೂ ಭಾನುವಾರ ಅಸ್ಸಾಂನ ಹಲವು ಕಡೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲಾಯಿತು, ಈ ಪರೀಕ್ಷೆ ವೇಳೆ ಈ ಅಪರೂಪದ ಘಟನೆ ನಡೆದಿದೆ.
Published by:Vasudeva M
First published: