• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Lady Singham: ಭಾವಿ ಪತಿ ಬಂಧಿಸಿ ದೇಶದಲ್ಲೇ ಹೆಸರಾಗಿದ್ದ ಲೇಡಿ ಸಿಂಗಂ ಅಪಘಾತದಲ್ಲಿ ಬಲಿ! ಇದು ಕೊಲೆಯೋ? ಅಪಘಾತವೋ?

Lady Singham: ಭಾವಿ ಪತಿ ಬಂಧಿಸಿ ದೇಶದಲ್ಲೇ ಹೆಸರಾಗಿದ್ದ ಲೇಡಿ ಸಿಂಗಂ ಅಪಘಾತದಲ್ಲಿ ಬಲಿ! ಇದು ಕೊಲೆಯೋ? ಅಪಘಾತವೋ?

ಜುನ್ಮೋನಿ ರಾಭಾ

ಜುನ್ಮೋನಿ ರಾಭಾ

ರಾಭಾ ಕೇವಲ 30 ವರ್ಷಕ್ಕೆ ದುರಂತ ಸಾವು ಕಂಡಿದ್ದಾರೆ. ನಾಗೂನ್​ ನಗರದ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಅವರ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 • News18 Kannada
 • 2-MIN READ
 • Last Updated :
 • Guwahati [Gauhati], India
 • Share this:

ಗುವಾಹಟಿ: ಇತ್ತೀಚೆಗಷ್ಟೇ ಭಾವೀ ಪತಿಯನ್ನು (Husband) ಅರೆಸ್ಟ್ (Arrest) ಮಾಡಿದ ದೇಶಾದ್ಯಂತ ಹೆಸರು ಮಾಡಿದ್ದ ಮಹಿಳಾ ಪೊಲೀಸ್ (Police) ಅಧಿಕಾರಿ ಜುನ್ಮೋನಿ ರಾಭಾ (Junmoni Rabha) ಅಪಘಾತದಲ್ಲಿ (Accident) ಮೃತಪಟ್ಟಿದ್ದಾರೆ. ರಾಭಾ ಕೇವಲ 30 ವರ್ಷಕ್ಕೆ ದುರಂತ ಸಾವು ಕಂಡಿದ್ದಾರೆ. ನಾಗೂನ್​ ನಗರದ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಅವರ ಕಾರಿಗೆ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಅವರು ಪೊಲೀಸ್​ ಸಮವಸ್ತ್ರದಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.


ಮೊರಿಕೋಲಾಂಗ್ ಪೊಲೀಸ್ ಔಟ್‌ಪೋಸ್ಟ್‌ ಉಸ್ತುವಾರಿಯಾಗಿದ್ದ ರಾಭಾ ಸೋಮವಾರ ತಡರಾತ್ರಿ ತಮ್ಮ ಖಾಸಗಿ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಉತ್ತರ ಪ್ರದೇಶದಿಂದ ಬರುತ್ತಿದ್ದ ಕಂಟೈನರ್ ವಾಹನ ರಾಭಾ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಜಖಲಬಂಧ ಠಾಣೆ ವ್ಯಾಪ್ತಿಯ ಸರುಭುಗಿಯ ಗ್ರಾಮದಲ್ಲಿ ಘಟನೆ ನಡೆದಿದ್ದು,ರಾಭಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಇದನ್ನೂ ಓದಿ: Lady Singam Arrested: ಭಾವೀ ಪತಿಯನ್ನು ಅರೆಸ್ಟ್ ಮಾಡಿ ಭೇಷ್ ಎನಿಸಿಕೊಂಡಿದ್ದ ಲೇಡಿ ಸಿಂಗಂ ತಾನೇ ಅರೆಸ್ಟ್


ಎಲ್ಲಿಗೆ ಹೋಗುತ್ತಿದ್ದೆಂಬುದರ ಬಗ್ಗೆ ಮಾಹಿತಿ ಇಲ್ಲ


ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ರಾಭಾ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆವರು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವೇಳೆ ರಾಭಾ ಅವರು ಸಿವಿಲ್​ ಡ್ರೆಸ್​ನಲ್ಲಿದ್ದರು, ಆದರೆ ಒಬ್ಬರೇ ಎಲ್ಲಿಗೆ ಹೋಗುತ್ತಿದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾ ಎಸ್ಪಿ ಹೇಳಿದ್ದಾರೆ.
ಉನ್ನತ ತನಿಖೆಗೆ ಕುಟುಂಬಸ್ಥರ ಒತ್ತಾಯ


ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಂಟೈನರ್ ಟ್ರಕ್ ವಶಪಡಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಇನ್ನು ರಾಭಾ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಆಕೆಯ ಕುಟುಂಬಸ್ಥರು ಇದು ಅಪಘಾತವಲ್ಲ, ಕೊಲೆ ಎಂದು ಆರೋಪಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: Marriage: ವಿವಾಹ ಕಾರ್ಯಕ್ರಮಗಳನ್ನು ಬದಿಗೊತ್ತಿ ಪರೀಕ್ಷೆಗೆ ಹಾಜರಾದ ವಧು! ಡೆಡಿಕೇಷನ್ ಅಂದ್ರೆ ಇದೆ ಎಂದ ನೆಟಿಜನ್ಸ್


ಕೊಲೆಯೋ? ಅಥವಾ ಅಪಘಾತವೋ?


ಮೊರಿಕೊಲಾಂಗ್ ಠಾಣೆಯ ಉಸ್ತುವಾರಿ ವಹಿಸಿದ್ದ ಜುನ್ಮೋನಿ ಕಳ್ಳ-ಕಾಕರಿಗೆ ಸಿಂಹಸ್ವಪ್ನವಾಗಿದ್ದರು. ಜೊತೆಗೆ ಲಂಚ ಪಡೆಯುವಾಗ ಸಿಕ್ಕಿಬಿದ್ದು ಅಮಾನತುಗೊಂಡಿದ್ದರು. ಅಮಾನತು ಅವಧಿಯ ನಂತರ ಕರ್ತವ್ಯಕ್ಕೆ ಮರಳಿದ ಜುನ್ಮೋನಿ, ಕಾನೂನಿಗೆ ವಿರುದ್ಧವಾಗಿ ಯಂತ್ರಗಳನ್ನು ಅಳವಡಿಸಿ ಹಳ್ಳಿಗಾಡಿನ ದೋಣಿಗಳನ್ನು ಓಡಿಸುತ್ತಿದ್ದ ಕೆಲವು ದೋಣಿಗಳನ್ನು ವಶಪಡಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಸಾವು ಸಂಭವಿಸಿದೆ. ಆದರೆ ಇದು ಕೊಲೆಯೇ? ಅಥವಾ ಇದು ಅಪಘಾತವೋ? ಎಂದು ಜೋರಾಗಿ ಚರ್ಚೆಯಾಗುತ್ತಿದೆ.


ವಂಚನೆ ಪ್ರಕರಣದಲ್ಲಿ ಬಂಧನ

top videos


  ರಾಭಾ ಅವರು ಲೇಡಿ ಸಿಂಗಂ ಎಂಬ ಹೆಸರು ಪಡೆದರೂ ವಂಚನೆ ಪ್ರಕರಣದಲ್ಲಿ  ಸಿಕ್ಕಿಬಿದ್ದು ಜೈಲು (Jail) ಸೇರಿದ್ದರು.  ಸಬ್ ಇನ್ಸ್‌ಪೆಕ್ಟರ್ ಅವರನ್ನು ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಸೇರಿದಂತೆ ವಿವಿಧ ಆರೋಪಗಳ ಮೇಲೆ ಬಂಧಿಸಲಾಗಿತ್ತು. ಸತತ ಎರಡು ದಿನಗಳ ವಿಚಾರಣೆಯ ನಂತರ, ಎಸ್‌ಐ ಜುನ್ಮೋನಿ ರಾಭಾ ಅವರನ್ನು ಬಂಧಿಸಲಾಗಿತ್ತು.

  First published: