Assam Drugs: 1,920 ಕೋಟಿ ಮೌಲ್ಯದ ಡ್ರಗ್ಸ್ ಸುಟ್ಟು ಹಾಕಿದ ಅಸ್ಸಾಂ ಪೋಲಿಸರು!

ಅಸ್ಸಾಂ ಪೋಲಿಸರು ಡ್ರಗ್ಸ್ ಸುಡುತ್ತಿರುವ ದೃಶ್ಯ

ಅಸ್ಸಾಂ ಪೋಲಿಸರು ಡ್ರಗ್ಸ್ ಸುಡುತ್ತಿರುವ ದೃಶ್ಯ

ಅಸ್ಸಾಂ ಪೋಲಿಸರು 1920 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ನಂತರ ಸುಟ್ಟು ಹಾಕಿದರು. ನಾಶಪಡಿಸಿದ ಮಾದಕವಸ್ತುಗಳ ಪೈಕಿ, ಗಣನೀಯ ಪ್ರಮಾಣದ ಹೆರಾಯಿನ್, ಗಾಂಜಾ ಮತ್ತು ಕಚ್ಚಾ ಮೆಥಾಂಫೆಟಮೈನ್ ಕಂಡು ಬಂದಿದೆ.

  • Share this:

ಕಳೆದ ಒಂದು ವರ್ಷಗಳಿಂದ ದೇಶದಾದ್ಯಂತ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ (Drugs) ವಿಷಯವು ಇದೀಗ ಜೋರಾಗಿ ಸದ್ದು ಮಾಡುತ್ತಿದೆ. ಸುಮಾರು 1,920 ಕೋಟಿ (1920 Crore) ಮೌಲ್ಯದ ಮಾದಕ ವಸ್ತುಗಳನ್ನು ಪೋಲಿಸರು (Police) ಸುಟ್ಟು (Burns) ಹಾಕಿದ ಘಟನೆಯು ಅಸ್ಸಾಂನಲ್ಲಿ ನಡೆದಿದೆ. ಅಜಾದಿ ಕಾ ಅಮೃತ  ಮಹೋತ್ಸವದ (Azadi Ki Amrutha Mahotsav)  ಅಂಗವಾಗಿ ಶನಿವಾರ ಅಸ್ಸಾಂನಲ್ಲಿ ಪೋಲಿಸರು (Assam Police) ಸುಮಾರು 1,920 ಕೋಟಿ ಮೌಲ್ಯದ ಡ್ರಗ್ಸ್ (Drugs) ಅನ್ನು ವಶಪಡಿಕೊಂಡು ನಂತರ ಅದನ್ನು ಸುಟ್ಟು ಹಾಕಿದ್ದಾರೆ. ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಈ ರೀತಿಯಾದ ದಿಟ್ಟ ನಿರ್ಧಾರವು ದೇಶದ ಹಿತ ದೃಷ್ಟಿಯಲ್ಲಿ ಶ್ಲಾಘನೀಯವಾದುದಾಗಿದೆ.


ಅಸ್ಸಾಂ ಪೋಲಿಸರು ಜುಲೈ 30 ಶನಿವಾರದಂದು ಮಾದಕ ವಸ್ತಗಳ ವಿಲೇವಾರಿ ಕಾರ್ಯಾಚರಣೆಯ ಭಾಗವಾಗಿ ಸುಮಾರು 1,920 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಕೊಂಡು ಅದನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದಾರೆ.


ಇದನ್ನೂ ಓದಿ: Richest Women in India: ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ ದೇಶದ 10 ಶ್ರೀಮಂತ ಮಹಿಳೆಯರಿವರು


ಪ್ರಾಗ್ಜ್ಯೋತಿಶಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ನಗರದ ಹೊರ ವಲಯದಲ್ಲಿರುವ ಪ್ರಾಗ್ಜ್ಯೋತಿಶಪುರ ಪೋಲಿಸ್ ಠಾಣಾ ವ್ಯಾಪ್ತಿಯ ಹತಶಿಲಾ ದಂಪರದಲ್ಲಿ ಗುವಾಹಟಿ ಪೋಲಿಸರು ಸಾಮೂಹಿಕವಾಗಿ ಮಾದಕ ವಸ್ತುಗಳ (ಡ್ರಗ್ಸ್) ವಿಲೇವಾರಿ ನಡೆಸಿ ಸುಮಾರು 935 ಕೆ ಜಿ ಗಿಂತಲೂ ಅಧಿಕ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಂಡು ಸುಟ್ಟು ಹಾಕಿದ್ದಾರೆ ಎಂದು ಪೋಲಿಸ್ ಕಮೀಷನರ್ ಹರ್ಮಿತ್ ಸಿಂಗ್ ಮಾಹಿತಿ ನೀಡಿದ್ದಾರೆ.


ಅಧಿಕ ಪ್ರಮಾಣದ ಹೈರಾಯಿನ್
ವಶಪಡಿಸಿಕೊಂಡ ಡ್ರಗ್ಸ್ ನಲ್ಲಿ ಹೈರಾಯಿನ್ ಪ್ರಮಾಣ ಅಧಿಕವಾಗಿದೆ. ಸುಮಾರು 37.07 ಕೋಟಿ ಮೌಲ್ಯದ 6.214 ಕೆಜಿ ಹೈರಾಯಿನ್ ಸೇರಿದಂತೆ 1,751 ಕೋಟಿ ಮೌಲ್ಯದ 683 ಕೆಜಿ ಗಾಂಜಾ, 16.26 ಕೋಟಿ ಮೌಲ್ಯದ 271 ಕೆಜಿ ಕೆಮ್ಮಿನ ಸಿರಪ್ ಬಾಟಲಿಗಳು ಮತ್ತು 120.80 ಕೋಟಿ ಮೌಲ್ಯದ 6.04 ಲಕ್ಷ ಮೆತ್ ಮಾತ್ರೆಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.


ವಶಪಡಿಸಿಕೊಂಡ ಡ್ರಗ್ಸ್ ಗೆ ಬೆಂಕಿ
ಪೋಲಿಸರು ಸಾಮೂಹಿಕವಾಗಿ ವಶಪಡಿಸಿಕೊಂಡ ಡ್ರಗ್ಸ್ ಗೆ ಬೆಂಕಿ ಹಚ್ಚುವ ಮೂಲಕ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ. ಇದರಿಂದಾಗಿ ಮತ್ತೆ ವಶಪಡಿಸಿಕೊಂಡ ಡ್ರಗ್ಸ್ ಕಳ್ಳ ದಾರಿಯಲ್ಲಿ ಬಳಕೆಯಾಗುವುದನ್ನು ತಪ್ಪಿಸಲಾಗಿದೆ. ಗುವಾಹಟಿಯ ಡಿಜಿಪಿ ಮತ್ತು ಜಂಟಿ ಪೋಲಿಸ್ ಕಮಿಷನರ್ ಪಾರ್ಥ ಸಾರಥಿ ಮಹಂತ ಅವರ ನೇತೃತ್ವದಲ್ಲಿ ಡ್ರಗ್ಸ್ ಗೆ ಬೆಂಕಿ ಹಚ್ಚಲಾಯಿತು.


ನಿರಂತರವಾಗಿ ನಡೆಯಲಿದೆ ಕಾರ್ಯಾಚರಣೆ
ಮುಖ್ಯಮಂತ್ರಿಯವರ ಸೂಚನೆಯಂತೆ 2021ರ ಮೇ 10 ರಿಂದ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ಪ್ರಾರಂಭವಾಗಿದ್ದು ಸಂಪೂರ್ಣವಾಗಿ ನಾಶ ಮಾಡುವ ತನಕ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತದೆ ಎಂದು ಡಿಐಜಿ ಕಂಗ್ಕನ್ ಜ್ಯೋತಿ ಸೈಕಿಯಾ ಹೇಳಿದ್ದಾರೆ.


ಅಮಿತ್ ಶಾ ಅವರ ನೇತೃದಲ್ಲಿ ಡ್ರಗ್ಸ್ ನಿಯಂತ್ರಣ ಕಾರ್ಯಾಚರಣೆ
ಮಾದಕ ವಸ್ತುಗಳ ಕಳ್ಳ ಸಾಗಾಣೆಕೆಯು ರಾಷ್ಟ್ರಕ್ಕೆ ಮಾರಕವಾದುದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೇಲ್ವಿಚಾರಣೆಯಲ್ಲಿ ಮಾದಕ ದ್ರವ್ಯ ನಿಯಂತ್ರಣ ಕಾರ್ಯಾಚರಣೆ ನಡೆಯುತ್ತಿದೆ.


ಅಮಿತ್ ಶಾ ನೇತೃತ್ವದಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ ಚಂಡೀಗಢದಿಂದ ವೀಡಿಯೋ ಕಾನ್ಫೇರೆನ್ಸ್ ಮೂಲಕ ನಾಲ್ಕು ಸ್ಥಳಗಳಲ್ಲಿ ವಶಪಡಿಸಿಕೊಂಡ 30,000 ಕೆಜಿ ಗೂ ಅಧಿಕ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ. ಅದರಂತೆ ಶನಿವಾರ ಅಸ್ಸಾಂನಲ್ಲಿ 1,920 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಸುಡಲಾಗಿದೆ.


ಮಾದಕ ದ್ರವ್ಯ ಮುಕ್ತ ಭಾರತದ ನಿರ್ಮಾಣದ ಉದ್ದೇಶ
ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲು ಪ್ರಧಾನಿಯವರ ಕರೆ ಮೇರೆಗೆ, 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ 75,000 ಕೆಜಿ ಮಾದಕ ವಸ್ತುಗಳನ್ನು ನಾಶಪಡಿಸಲು ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ವಾಗ್ದಾನ ಮಾಡಿದೆ.


ಇದನ್ನೂ ಓದಿ: Savitri Jindal: ಏಷ್ಯಾದ ಶ್ರೀಮಂತ ಮಹಿಳೆ, ಭಾರತದ ಸಾವಿತ್ರಿ ಜಿಂದಾಲ್ ಜೀವನ ಹೇಗಿದೆ ಗೊತ್ತೇ?


ಶನಿವಾರ 30,468.784 ಕೆಜಿಗೂ ಹೆಚ್ಚು ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಿದೆ. ಮುಂದೆ ಸತತ ಕಾರ್ಯಾಚರಣೆಯ ಮೂಲಕ ಎನ್‌ಸಿಬಿ ತನ್ನ ಗುರಿಯನ್ನು ಮೀರುತ್ತದೆ. ಮಾದಕ ದ್ರವ್ಯ ಮುಕ್ತ ಭಾರತದ ಹೋರಾಟದಲ್ಲಿ ಇದೊಂದು ದೊಡ್ಡ ಸಾಧನೆಯಾಗಲಿದೆ.

top videos
    First published: