ಅಸ್ಸಾಂ: ಪೊಲೀಸ್​ ಗುಂಡಿಗೆ ಬಲಿಯಾಗಿದ್ದ ವ್ಯಕ್ತಿಯ ಮೇಲೆ ಅಮಾನವೀಯ ದಾಳಿ ನಡೆಸಿದ್ದ ಛಾಯಾಗ್ರಾಹಕ ಬಂಧನ!

ಮೃತ ವ್ಯಕ್ತಿಯ ಮೇಲೆ ದಾಳಿ ಮಾಡಿ ವಿಕೃತ ಮೆರೆದ ಛಾಯಾಗ್ರಾಹಕನನ್ನು ಬಿಜೋಯ್ ಬೋನಿಯಾ ಎಂದು ಗುರುತಿಸಲಾಗಿದ್ದು, ಅಸ್ಸಾಂ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್  ಆತನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವ ಛಾಯಾಗ್ರಾಹಕ.

ಮೃತ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವ ಛಾಯಾಗ್ರಾಹಕ.

 • Share this:
  ಅಸ್ಸಾಂ (ಸೆಪ್ಟೆಂಬರ್​ 24); ಅಸ್ಸಾಂನ (Assam) ಸಿಪಾಜಾರ್ (Sipajhar) ಭಾಗದಲ್ಲಿ ಗುರುವಾರ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸಿಅವರ ಮನೆಗಳನ್ನು ಖಾಲಿ ಮಾಡಿಸಲು ಪೊಲೀಸರು ಶಸ್ತ್ರಸಜ್ಜಿತರಾಗಿ ತೆರಳಿದ್ದರು. ಈ ವೇಳೆ ಜೊತೆಗೆ ಛಾಯಾ ಗ್ರಾಹಕನೂ (Photographer) ತೆರಳಿದ್ದಾನೆ. ಪೊಲೀಸರ ದಾಳಿಯನ್ನು ವರ್ತನೆಯನ್ನು ಈ ವೇಳೆ ಸ್ಥಳೀಯ ಜನ ಖಂಡಿಸಿ ಪ್ರತಿಭಟಿಸಿದ್ದಾರೆ. ಆದರೆ, ಈ ವೇಳೆ ಗನ್‌ ಮತ್ತು ಲಾಠಿ ಹಿಡಿದು ಶಸ್ತ್ರಸಜ್ಜಿತರಾಗಿ, ಗಲಭೆ ವಿರೋಧಿ ಧಿರಿಸು ಧರಿಸಿದ್ದ ಪೊಲೀಸರ ಗುಂಪನ್ನು, ಕೈಯ್ಯಲ್ಲಿ ಕೋಲು ಹಿಡಿದುಕೊಂಡು ಅಟ್ಟಿಸಿಕೊಂಡು ಬಂದ ವ್ಯಕ್ತಿಯೊಬ್ಬರನ್ನು ಪೊಲೀಸರು ಗುಂಡು ಹಾರಿಸಿ ಕ್ರೂರವಾಗಿ ಕೊಂದಿದ್ದಾರೆ. ಈ ಅಮಾನವೀಯ ದಾಳಿಯ ಜೊತೆಗೆ ಛಾಯಾಗ್ರಾಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಮೃತ ವ್ಯಕ್ತಿಯ ಮೇಲೆ ದಾಳಿ ಮಾಡಿ ವಿಕೃತ ಮೆರೆದ ಛಾಯಾಗ್ರಾಹಕನನ್ನು ಬಿಜೋಯ್ ಬೋನಿಯಾ ಎಂದು ಗುರುತಿಸಲಾಗಿದ್ದು, ಅಸ್ಸಾಂ ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ಮೆಂಟ್  ಆತನ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಘಟನೆಯ ವಿವಿರ!:

  ವೈರಲ್ ಆಗಿರುವ ವಿಡಿಯೋದಲ್ಲಿ ಪೊಲೀಸರ ಗುಂಡೇಟಿಗೆ ವ್ಯಕ್ತಿ ನೆಲಕ್ಕೆ ಉರುಳಿ ನಿಶ್ಚಲವಾದ ನಂತರವು ಪೊಲೀಸರು ಗುಂಪಾಗಿ ಬಂದು ವ್ಯಕ್ತಿಗೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಫೋಟೋ ಪತ್ರಕರ್ತನೊಬ್ಬ ವ್ಯಕ್ತಿಗೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಪೊಲೀಸರು ಅವನನ್ನು ತಡೆದು ದೂರ ಕರೆದುಕೊಂಡು ಬಂದ ನಂತರ ಕೂಡಾ ದೂರದಿಂದ ಮತ್ತೆ ಹಾರಿ ಬಂದು ನಿಶ್ಚಲವಾಗಿ ನೆಲಕ್ಕೆ ಬಿದ್ದಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ್ದಾನೆ.

  ಈ ಭಯಾನಕ ದೃಶ್ಯಗಳು ಅತಿಕ್ರಮಣ ವಿರೋಧಿ ಪ್ರಕ್ರಿಯೆ ನಡೆಯುತ್ತಿದ್ದ ರಾಜ್ಯದ ದರ್‍ರಾಂಗ್‌ ಜಿಲ್ಲೆಯ ಧೋಲ್ಪುದಲ್ಲಿ ಗುರುವಾರ ನಡೆದಿದೆ. ಪೊಲೀಸರು ಈ ಪ್ರಕ್ರಿಯೆಗಾಗಿ ಸಂಪೂರ್ಣ ಗಲಭೆ ವಿರೋಧಿ ಧಿರಿಸು ಧರಿಸಿ, ರೈಫಲ್ ಮತ್ತು ಲಾಠಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

  ಪ್ರಸ್ತುತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಪಿಎಂಎಲ್‌ ಪಾಲಿಟ್‌ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್ ಅವರು, “ಒಬ್ಬ ಏಕಾಂಗಿ ವ್ಯಕ್ತಿ ಕೋಲು ಹಿಡಿದುಕೊಂಡು ಓಡುತ್ತ ಬಂದಾಗ ಎದೆಗೆ ಗುಂಡು ಹಾರಿಸಲು ಯಾವ ಪ್ರೋಟೋಕಾಲ್ ಆದೇಶಿಸುತ್ತದೆ. ಬಹುಶಃ ಸತ್ತು ನೆಲಕ್ಕೆ ಬಿದ್ದಿರುವ ಮನುಷ್ಯನ ದೇಹದ ಮೇಲೆ ರಕ್ತಪಿಪಾಸುವಿನಂತೆ ದ್ವೇಷದಿಂದ ಪದೇ ಪದೇ ಜಿಗಿಯುವ, ಕ್ಯಾಮರಾದೊಂದಿಗಿರುವ ನಾಗರಿಕ ಉಡುಪು ಧರಿಸಿದ ವ್ಯಕ್ತಿ ಯಾರು?” ಎಂದು ಜನ  ಪ್ರಶ್ನಿಸಿದ್ದರು.

  ಘಟನೆಯನ್ನು ಖಂಡಿಸಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, "ಇದು ಯಾವ ನರಕ? ಈ ಹತ್ಯೆಯಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧ ಈಗಲೇ ಕ್ರಮ ಕೈಗೊಳ್ಳಿ. ನತದೃಷ್ಟ ವ್ಯಕ್ತಿಯನ್ನು ಬಂಧಿಸಬಹುದಿತ್ತು. ಅವರನ್ನು ಕೊಲ್ಲಲು ಪೊಲೀಸರಿಗೆ ಅಧಿಕಾರವಿಲ್ಲ. ಒಂದು ಸಮಾಜವಾಗಿ ನಮಗೆ ಅವಮಾನ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಧೋಲ್ಪುದಲ್ಲಿ ನಡೆದ ಅತಿಕ್ರಮಣ ವಿರೋಧಿ ಪ್ರಕ್ರಿಯೆಯಲ್ಲಿ ಒಂಬತ್ತು ಪೊಲೀಸರು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಆದರೆ ಕೆಲವು ಮಾಧ್ಯಮಗಳು, “ತಮ್ಮ ಮನೆಗಳನ್ನು ತೆರವುಗೊಳಿಸುತ್ತಿದ್ದ ಪೊಲೀಸರ ವಿರುದ್ದ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ತಾರಕಕ್ಕೇರಿ, ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಸದ್ದಾಂ ಹುಸೇನ್ ಮತ್ತು ಶೇಖ್ ಫರೀದ್ ಎಂಬ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿ, ಹಲವಾರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ವರದಿ ಮಾಡಿವೆ.

  ಸೋಮವಾರ ಕೂಡಾ ಅತಿಕ್ರಮಣ ವಿರೋಧಿ ಪ್ರಕ್ರಿಯೆಯ ಕಾರ್ಯಾಚರಣೆಯಲ್ಲಿ ಸುಮಾರು 800 ಕುಟುಂಬಗಳನ್ನು ಹೊರಹಾಕಲಾಗಿದೆ. ಸ್ಥಳೀಯರು ಕಲ್ಲುಗಳಿಂದ ದಾಳಿ ಮಾಡಿದ್ದರಿಂದ ಬಲಪ್ರಯೋಗಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.

  "ನಮ್ಮ ಒಂಬತ್ತು ಪೊಲೀಸರು ಗಾಯಗೊಂಡಿದ್ದಾರೆ. ಇಬ್ಬರು ನಾಗರಿಕರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈಗ ಪರಿಸ್ಥಿತಿ ಸಾಮಾನ್ಯವಾಗಿದೆ" ಎಂದು ಇಂದಿನ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

  ಇದನ್ನೂ ಓದಿ: PM Modi America Tour: ಇಂದು ಅಮೇರಿಕಾ, ಜಪಾನ್ ಪಿಎಂಗಳ ಜೊತೆ ಪ್ರಧಾನಿ ಮೋದಿ‌ ದ್ವಿಪಕ್ಷೀಯ ಮಾತುಕತೆ

  ‘"ಘರ್ಷನೆಯ ಪರಿಸ್ಥಿತಿಯಿಂದಾಗಿ ನಾವು ಹೊರಹಾಕುವಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ನಾವು ನಂತರ ಮೌಲ್ಯಮಾಪನ ಮಾಡುತ್ತೇವೆ. ಇಲ್ಲಿಂದ ಈಗಲೇ ಹಿಂದಿರುಗುತ್ತಿದ್ದೇವೆ" ಎಂದು ಘರ್ಷಣೆಯ ಸ್ಥಳದಲ್ಲಿದ್ದ ಹಾಜರಿದ್ದ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

  ಆದರೆ ಸ್ಥಳೀಯರನ್ನು ಹೊಡೆದುರುಳಿಸಿದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, “ಆ ಪ್ರದೇಶವು ದೊಡ್ಡದಾಗಿದ್ದು, ನಾನು ಇನ್ನೊಂದು ಬದಿಯಲ್ಲಿದ್ದೆ. ಈ ಬಗ್ಗೆ ಪರಿಶೀಲಿಸಿ ಪರಿಸ್ಥಿತಿಯನ್ನು ನಿರ್ಣಯಿಸುತ್ತೇನೆ” ಎಂದು ಹೇಳಿದ್ದಾರೆ.

  ಇದನ್ನೂ ಓದಿ: PM Cares ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವೇ ಇಲ್ಲ; ಕೇಂದ್ರ ಸರ್ಕಾರ

  ಕಳೆದ ಸೋಮವಾರ ನಡೆದ ಅತಿಕ್ರಮಣ ವಿರೋಧಿ ಕಾರ್ಯಾಚರಣೆಯ ನಂತರ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "800 ಮನೆಗಳನ್ನು ತೆರವುಗೊಳಿಸುವ ಮೂಲಕ 4500 ಬಿಘಾಗಳನ್ನು ತೆರವುಗೊಳಿಸಿದ್ದಕ್ಕಾಗಿ ದರ್ರಾಂಗ್ ಜಿಲ್ಲಾಡಳಿತ ಮತ್ತು ಅಸ್ಸಾಂ ಪೊಲೀಸರನ್ನು ಅಭಿನಂದಿಸುತ್ತೇನೆ" ಎಂದು ಹೇಳಿದ್ದರು.
  Published by:MAshok Kumar
  First published: