10 ದಿನದ ಬಳಿಕ ಅಸ್ಸಾಂನಲ್ಲಿ ಮತ್ತೆ ಇಂಟರ್​ನೆಟ್​ ಸೇವೆ ಆರಂಭ

ಕಾಯ್ದೆ ವಿರೋಧಿಸಿ ಪ್ರತಿಭಟನೆ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ಡಿ.11ರ ಸಂಜೆಯಿಂದ ಮೊಬೈಲ್​ ಮತ್ತು ಬ್ರಾಂಡ್​ಬ್ಯಾಂಡ್​ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

Seema.R | news18-kannada
Updated:December 20, 2019, 11:58 AM IST
10 ದಿನದ ಬಳಿಕ ಅಸ್ಸಾಂನಲ್ಲಿ ಮತ್ತೆ ಇಂಟರ್​ನೆಟ್​ ಸೇವೆ ಆರಂಭ
ಸಿಎಎ ವಿರೋಧಿಸಿ ಜನರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಸಾಂದರ್ಭಿಕ ಚಿತ್ರ.
  • Share this:
ಗುವಾಹಟಿ (ಡಿ.20): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಕಿಚ್ಚು ಹೆಚ್ಚಾದ ಹಿನ್ನೆಲೆ ಅಸ್ಸಾಂ ರಾಜ್ಯಾದ್ಯಂತ ಸ್ಥಗಿತಗೊಳಿಸಲಾಗಿದ್ದ ಇಂಟರ್​​ನೆಟ್​ ಸೇವೆಯನ್ನು ಇಂದಿನಿಂದ ಪುನರಾಂಭಿಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾಯ್ದೆ ಕುರಿತು ಸುಳ್ಳು ಸುದ್ದಿ ಹಬ್ಬಿ ಹೋರಾಟ ಹೆಚ್ಚಬಹುದು ಎಂಬ ಆತಂಕದಲ್ಲಿ ಕಳೆದ 10 ದಿನಗಳ ಹಿಂದೆ ರಾಜ್ಯದಲ್ಲಿ ಇಂಟರ್​ನೆಟ್​ ಸೇವೆ ಬಂದ್​ ಮಾಡಲಾಗಿತ್ತು. ಈ ಸೇವೆಯನ್ನು ಇಂದು ಸಂಜೆ 5 ಗಂಟೆಯಿಂದ ಪುನಾರಂಭ ಮಾಡಬೇಕು ಎಂದು ಗುವಾಹಟಿ ನ್ಯಾಯಾಲಯ ಸೂಚನೆ ನೀಡಿದೆ. ಈ ಆದೇಶದ ಕುರಿತು ರಾಜ್ಯ ಸರ್ಕಾರಗಳು ಮಾತ್ರ ಮೊಬೈಲ್​ ಆಪರೇಟರ್​ಗಳಿಗೆ ಯಾವುದೇ ಸೂಚನೆ ನೀಡಿಲ್ಲ.

ಇಂಟರ್​ನೆಟ್​ ಸೇವೆ ಬಂದ್​ ಮುಂದುವರೆಸುವ ಬಗ್ಗೆ ಸರ್ಕಾರದಿಂದ ಯಾವುದೇ ಮಾಹಿತಿಯನ್ನು ನಾವು ಪಡೆದಿಲ್ಲ. ಹಾಗಾಗಿ ನಮ್ಮ ಗ್ರಾಹಕರಿಗೆ ಸೇವೆಯನ್ನು ಪುನರಾಂಭಿಸುತ್ತೇವೆ ಎಂದು ಏರ್​ಟೆಲ್​ ಖಾಸಗಿ ಆಪರೇಟರ್​ನ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದರ ಜೊತೆಗೆ ರಾಜ್ಯ ಮಾಲೀಕತ್ವದ ಬಿಎಸ್​ಎನ್​ಎಲ್​, ರಿಲಯನ್ಸ್​ ಜಿಯೋ ಮತ್ತು ವೊಡೋಫೋನ್​ಗಳ ಸೇವೆ ಕೂಡ ಆರಂಭವಾಗಲಿದೆ.

ಕಾಯ್ದೆ ವಿರೋಧಿಸಿ ಪ್ರತಿಭಟನೆ ಹೋರಾಟ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆ ಡಿ.11ರ ಸಂಜೆಯಿಂದ ಮೊಬೈಲ್​ ಮತ್ತು ಬ್ರಾಂಡ್​ಬ್ಯಾಂಡ್​ ಇಂಟರ್​ನೆಟ್​ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಇದನ್ನು ಓದಿ: ಬಹುಮತ ಇದೆ ಎಂದು ಮನಬಂದಂತೆ ವರ್ತಿಸಬೇಡಿ: ಕೇಂದ್ರ ಸರ್ಕಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

ಶುಕ್ರವಾರ ಸಂಜೆಯಿಂದ ಮೊಬೈಲ್​ ಇಂಟರ್​ನೆಟ್​ ಸೇವೆ ಆರಂಭಿಸಲಾಗುವುದು ಎಂದು ರಾಜ್ಯ ಹಣಕಾಸು ಸಚಿವ ಹಿಮಾಂತ್​ ಬಿಸ್ವಾ ತಿಳಿಸಿದ್ದಾರೆ.ಅಸ್ಸಾಂ ಎಲ್ಲರಿಗಾಗಿಯೂ ಇರಲಿದೆ. ಈ ಹೊಸ ಕಾನೂನಿನಿಂದ ಭಾಷೆ ಅಥವಾ ತಾಯ್ನೆಲಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಅಸ್ಸಾಂ ಅಸ್ಸಾಮಿಗರಿಗಾಗಿಯೇ ಇರಲಿದೆ. ಅರ್ಜಿಯ ಅಧಿಕಾರವಾಧಿ ಮುಗಿದ ನಂತರ ಸಂಪೂರ್ಣ ಪಟ್ಟಿ ಹೊರಬಿದ್ದಾಗ ಕೆಲವು ಸಂಖ್ಯೆಯ ಜನರಿಗೆ ಪೌರತ್ವ ಸಿಗಲಿದೆ ಎಂದು ಮುಖ್ಯಮಂತ್ರಿ ಸರ್ಬನಂದ ಸೊನೊವಾಲ ತಿಳಿಸಿದ್ದಾರೆ.
First published:December 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ