ಅಸ್ಸಾಂನಲ್ಲಿ ರೈಲು ಹರಿದು ಎರಡು ಆನೆ ಸಾವು; ರೈಲ್ವೆ ಎಂಜಿನ್ ವಶಪಡಿಸಿಕೊಂಡ ಅರಣ್ಯ ಅಧಿಕಾರಿಗಳು
ಹೊಜೈನ ನಾಗಾನ್ ದಕ್ಷಿಣ ವಿಭಾಗದ ಅಡಿಯಲ್ಲಿ ಲುಮ್ಡಿಂಗ್ ಅರಣ್ಯ ಶ್ರೇಣಿಯ ಫಾರೆಸ್ಟರ್ -1, ನಳಿನಿ ಕುಮಾರ್ ಕಾಳಿತಾ ಅವರ ಮೇಲ್ವಿಚಾರಣೆಯಲ್ಲಿ ರೈಲ್ವೆ ಇಂಜಿನ್ಗಳ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಮಂಗಳವಾರ ನಡೆಸಲಾಯಿತು.
ಅಸ್ಸಾಂ: ಸೆಪ್ಟೆಂಬರ್ 27 ರಂದು ಇಲ್ಲಿನ ಪಥಾರ್ಖುಲಾ ಮತ್ತು ಲಾಮ್ಸಾಖಾಂಗ್ ನಡುವಿನ ರೈಲ್ವೆ ಹಳಿಯಲ್ಲಿ ನಡೆದ ಅಪಘಾತದಲ್ಲಿ ಎರಡು ಆನೆಗಳು ಮೃತಪಟ್ಟಿದ್ದವು. ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ 2 ಆನೆಗಳನ್ನು ಕೊಂದಿದ್ದಕ್ಕಾಗಿ ಬಾಮುನಿಮೈದನ್ ರೈಲ್ವೆ ಯಾರ್ಡ್ನಿಂದ ಮಂಗಳವಾರ ಅಪಘಾತ ಮಾಡಿದ್ದ ರೈಲ್ವೆ ಇಂಜಿನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ 1 (12 ಬಿ) ನಿಯಮದ ಅಡಿಯಲ್ಲಿ ಗುವಾಹಟಿಯ ಬಮುನಿಮೈದನ್ ರೈಲ್ವೆ ನಿಲ್ದಾಣದಿಂದ ಹಿರಿಯ ಡಿಎಂಇ ಚಂದ್ರ ಮೋಹನ್ ತಿವಾರಿ ಅವರ ಸಮ್ಮುಖದಲ್ಲಿ ರೈಲ್ವೆ ಇಂಜಿನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೊಜೈನ ನಾಗಾನ್ ದಕ್ಷಿಣ ವಿಭಾಗದ ಅಡಿಯಲ್ಲಿ ಲುಮ್ಡಿಂಗ್ ಅರಣ್ಯ ಶ್ರೇಣಿಯ ಫಾರೆಸ್ಟರ್ -1, ನಳಿನಿ ಕುಮಾರ್ ಕಾಳಿತಾ ಅವರ ಮೇಲ್ವಿಚಾರಣೆಯಲ್ಲಿ ರೈಲ್ವೆ ಇಂಜಿನ್ಗಳ ವಶಪಡಿಸಿಕೊಳ್ಳುವ ಕಾರ್ಯಾಚರಣೆಯನ್ನು ಮಂಗಳವಾರ ನಡೆಸಲಾಯಿತು.
ವಶಪಡಿಸಿಕೊಂಡ ಲೋಕೋಮೋಟಿವ್ ಎಂಜಿನ್ ಅನ್ನು ನಂತರ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನಿರ್ವಹಿಸಲು ಮತ್ತೆ ಚಂದ್ರ ಮೋಹನ್ ತಿವಾರಿ ಅವರ ವಶಕ್ಕೆ ಹಿಂತಿರುಗಿಸಲಾಗಿದೆ ಎಂದು ತಿಳಿದುಬಂದಿದೆ.
ತನಿಖೆಯ ನಂತರ, ಅಸ್ಸಾಂನ ಮುಖ್ಯ ವನ್ಯಜೀವಿ ವಾರ್ಡನ್ ಮಹೇಂದ್ರ ಕುಮಾರ್ ಯಾದವ್, “ಸೆಪ್ಟೆಂಬರ್ 27 ರಂದು ಲುಮ್ಡಿಂಗ್ ಆರ್ಎಫ್ನಲ್ಲಿ ಸರಕು ರೈಲು ಎಂಜಿನ್ ಹರಿದು ಒಂದು ಹೆಣ್ಣು ಆನೆ ಮತ್ತು ಅದರ ಕರು ಮೃತಪಟ್ಟಿತ್ತು. ಇದು ತೀವ್ರ ದುಖಃಕರ ಘಟನೆಯಾಗಿದ್ದು, ವನ್ಯಜೀವಿಗಳ ಸಂರಕ್ಷನಾ ಕಾನೂನು 1972ರ ಅಡಿಯಲ್ಲಿ ರೈಲ್ವೆ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಅರಣ್ಯ ಅಧಿಕಾರಿಗಳ ತಂಡ ಬಮುನಿಮೈದಾನ್ ಲೊಕೊ ಶೆಡ್ಗೆ ತೆರಳಿ ಡೀಸೆಲ್ ಲೊಕೊ ಎಂಜಿನ್ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ, ಈಗಾಗಲೇ ಲೋಕೋ ಪೈಲಟ್ ಮತ್ತು ಸಹಾಯಕ ಲೊಕೊ ಪೈಲಟ್ ಅವರ ಆಂತರಿಕ ವಿಚಾರಣೆಯಲ್ಲಿ ರೈಲ್ವೆ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ. ಏತನ್ಮಧ್ಯೆ, ರೈಲ್ವೆ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಇಲಾಖೆ ವಿಫಲವಾಗುವುದಿಲ್ಲ” ಎಂದು ಪರಿಸರ ಮತ್ತು ಅರಣ್ಯ ಸಚಿವ ಪರಿಮಲ್ ಸುಕ್ಲಾಬೈದ್ಯ ಹೇಳಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ