ಅಸ್ಸಾಂ (ಸೆ. 2) ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ (assam Flood) ಸೃಷ್ಟಿಯಾಗಿದ್ದು, ಇಂತಹ ಪ್ರವಾಹದ ನಡುವೆಯೇ ಆರೋಗ್ಯ ಕಾರ್ಯಕರ್ತರು ಲಸಿಕೆ (Covid Vaccination) ವಿತರಣೆ ಕಾರ್ಯ ನಡೆಸಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ದೇಶದಲ್ಲಿ ಸಂಪೂರ್ಣ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿರುವ ಹಿನ್ನಲೆ ಲಸಿಕೆ ವಿತರಣೆಯನ್ನು ಆರೋಗ್ಯ ಕಾರ್ಯಕರ್ತರು ಸವಾಲಾಗಿ ಸ್ವೀಕಾರ ಮಾಡಿದ್ದು, ಪ್ರವಾಹದ ನಡುವೆಯೂ ತಮ್ಮ ಕಾರ್ಯ ನಿರ್ವಹಿಸಿ ಮೆಚ್ಚುಗೆ ಪಡೆದಿದ್ದಾರೆ. ಬ್ರಹ್ಮಪುತ್ರಾ (brahmaputra river) ನದಿ ದ್ವೀಪದಲ್ಲಿನ ಚಾರ್ಸ್, ಚಾಪೋರಿಯಲ್ಲಿ ವಾಸಿಸುವ ಸಾವಿರಾರು ಜನರಿಗೆ ದೋಣಿಯಲ್ಲಿಯೇ ಸಾಗಿ ಲಸಿಕೆ ನೀಡಿ ಗಮನ ಸೆಳೆದಿದ್ದಾರೆ.
ಇಲ್ಲಿನ ತಪೋಬಾರಿ ಚಾರ್ ನದಿ ದ್ವೀಪದಲ್ಲಿ 600 ಜನರಿಗೆ ಲಸಿಕೆ ಹಾಕಲಾಗಿದ್ದು, ಇನ್ನುಳಿದವರಿಗೆ ಲಸಿಕೆ ಹಾಕಲು ಪ್ರವಾಹ ಅಡ್ಡಿಯಾಗಿದೆ. ಇನ್ನು ಕಮ್ರಪ್ ಜಿಲ್ಲೆಯ ಸುಮಾರು 27 ದ್ವೀಪಗಳಲ್ಲಿ 55 ಸಾವಿರ ಜನರು ವಾಸಿಸುತ್ತಿದ್ದು, ಅವರು ಲಸಿಕೆಗೆ ಎದುರು ನೋಡುತ್ತಿದ್ದಾರೆ.
ಭಾರೀ ಮಳೆಗೆ ನಲುಗಿರುವ ಅಸ್ಸಾಂನಲ್ಲಿ ಇದೀಗ ಪ್ರವಾಹದ ಸಂಕಷ್ಟ ಎದುರಾಗಿದೆ. ಲಸಿಕೆ ನೀಡಲು ಆರೋಗ್ಯ ಕಾರ್ಯಕರ್ತರು ಈ ಪ್ರವಾಹದ ನಡುವೆಯೇ ಕಾರ್ಯ ನಿರ್ವಹಿಸಬೇಕಿದೆ, ಇದೇ ಕಾರಣಕ್ಕೆ ಅವರು ಪ್ರತಿನಿತ್ಯ ದೋಣಿಯಲ್ಲಿಯೇ ಸಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ಬ್ಲಾಕ್ ಪ್ರೋಗ್ರಾಂ ಮ್ಯಾನೇಜರ್ ಮೋನಿಕಾ ದೇಕಾ ದತ್ತಾ ತಿಳಿಸಿದ್ದಾರೆ.
ಸದ್ಯ ಪ್ರವಾಹದಿಂದ ಲಸಿಕಾ ಕೇಂದ್ರವನ್ನು ದೋಣಿ ಅಥವಾ ಮರದ ಕೆಳಗೆ ತೆರೆಯಲಾಗಿದೆ, ಈ ನಡುವೆ ಕೆಲವು ಹಳ್ಳಿಗಳಿಗೆ ಸಂಪರ್ಕ ಉತ್ತಮವಾಗಿಲ್ಲ. ಜೊತೆಗೆ ಕೆಲವು ಗ್ರಾಮಸ್ಥರು ಲಸಿಕೆ ಪಡೆಯಲು ಹಿಂಜರಿಯುತ್ತಿರುವುದು ದೊಡ್ಡ ಸವಾಲ್ ಆಗಿದೆ.
ಇನನು ಲಸಿಕೆ ಪಡೆಯಲು ಗ್ರಾಮಸ್ಥರು ಹಿಂಜರಿಕೆ ಪಡುತ್ತಿರುವ ಕುರಿತು ಮಾತನಾಡಿರುವ ತೋಪಬೋರಿ ಚಾರ್ ನಿವಾಸಿ ಮೋತಿಯುರ್ ರೆಹಮಾನ್, ಲಸಿಕೆ ಪಡೆದರು ನಾಲ್ಕು ದಿನಗಳ ಕಾಲ ಜ್ವರದಿಂದ ಬಳಲಬೇಕಾಗುತ್ತದೆ. ಈ ಹಿನ್ನಲೆ ಲಸಿಕೆ ಪಡೆಯಲು ತಮಗೆ ಹೆದರಿಕೆ ಎಂದಿದ್ದಾರೆ.
ಇದನ್ನು ಓದಿ: ಸರ್ಕಾರದ ಅಂಗಳ ತಲುಪಿದ IPS-IFS ಅಧಿಕಾರಿಗಳ ಮನೆ ಜಗಳ; ಪತ್ರದಲ್ಲಿ IAS ಅಧಿಕಾರಿ ಸಾವಿನ ಉಲ್ಲೇಖ
ಇನ್ನು ಲಸಿಕೆ ನೀಡುವ ಸವಾಲಿನ ಕುರಿತು ಮಾತನಾಡಿರುವ ಆರೋಗ್ಯ ಕಾರ್ಯಕರ್ತರು, ಒಮ್ಮೆ ಒಂದು ವೈಯಲ್ ತೆರೆದರೆ ಕನಿಷ್ಟ ಎಂದರೆ 4 ಗಂಟೆಯೊಳಗೆ 10 ಜನರಿಗೆ ನೀಡಬೇಕು. ಆದರೆ, ಜನರು ಲಸಿಕೆ ಪಡೆಯಲು ಹಿಂಜರಿಯುವುದರಿಂದ ಅವರಿಗೆ ಮನವರಿಕೆ ಮಾಡಿಕೊಡುವುದು ಕಷ್ಟವಾಗಿದೆ. ಜೊತೆಗೆ ಕೋವಿನ್ ಆ್ಯಪ್ನಲ್ಲಿ ದಾಖಲು ಮಾಡಲು ನೆಟ್ವರ್ಕ್ ಕೂಡ ಉತ್ತಮವಾಗಿಲ್ಲದ ಕಾರಣ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದಿದ್ದಾರೆ.
ಅಸ್ಸಾಂನಲ್ಲಿ ಭಾರೀ ಮಳೆ ಪ್ರವಾಹದಿಂದ 17 ಜಿಲ್ಲೆಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸುಮಾರು ಮೂರು ವರೆ ಲಕ್ಷದ ಜನರು ಮಳೆ ಹಾನಿಗೆ ತುತ್ತಾಗಿದ್ದಾರೆ. ಇನ್ನು ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಕೇಂದ್ರ ಸರ್ಕಾರ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾಗೆ ಭರವಸೆ ನೀಡಿದೆ. ಈ ಕುರಿತು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಎಲ್ಲ ಬೆಂಬಲ ನೀಡಲು ಸೂಚನೆ ನೀಡಲಾಗಿದ್ದು, ನೆರೆ ಪೀಡಿತ ಪ್ರದೇಶಗಳ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ