Assam Flood: 1 ಲೀಟರ್ ಕುಡಿಯುವ ನೀರಿಗೆ 110 ರೂ.! ಅಸ್ಸಾಂನಲ್ಲಿ ಇದೆಂಥಾ ದುಸ್ಥಿತಿ?

ಶುಕ್ರವಾರ ನಾನು ಕುಡಿಯುವ ನೀರನ್ನು ಖರೀದಿಸಲು ಸೊಂಟದ ಆಳದ ನೀರಿನಲ್ಲಿ ಸುಮಾರು ಒಂದು ಕಿಲೋಮೀಟರ್ ನಡೆದಿದ್ದೇನೆ ಎಂದು ಪ್ರವಾಹ ಪೀಡಿತರೊಬ್ಬರು ಮಾಹಿತಿ ನೀಡಿದ್ದಾರೆ.

ಅಸ್ಸಾಂ ಪ್ರವಾಹದ ದೃಶ್ಯ

ಅಸ್ಸಾಂ ಪ್ರವಾಹದ ದೃಶ್ಯ

 • Share this:
  ದಕ್ಷಿಣ ಅಸ್ಸಾಂನ ಸಿಲ್ಚಾರ್ ಪಟ್ಟಣದಲ್ಲಿ ಕುಡಿಯುವ ನೀರು ಪೆಟ್ರೋಲ್‌ಗಿಂತ ದುಬಾರಿಯಾಗಿದೆ! ಹೌದು, ಪ್ರವಾಹ ಸಮಸ್ಯೆಯಲ್ಲಿ (Assam Flood) ಸಿಲುಕಿಕೊಂಡಿರುವ ಅಸ್ಸಾಂನಲ್ಲಿ ಕುಡಿಯುವ ನೀರಿಗೂ ತತ್ವಾರ (Drinking Water Problem) ಎಂಬಂಥಹ ಪರಿಸ್ಥಿತಿ ಎದುರಾಗುತ್ತಿದೆ. ಜೂನ್ 20 ರಂದು ಅಸ್ಸಾಂನ ಸಿಲ್ಚಾರ್ ಪಟ್ಟಣದ (Silchar) ಸೋನೈ ರಸ್ತೆಯಲ್ಲಿರುವ ಬಿಜು ದಾಸ್ ಎಂಬುವವರು ಒಂದು ಲೀಟರ್ ಕುಡಿಯುವ ನೀರಿಗೆ 110 ರೂ. ತೆರುವಂತಹ ಪರಿಸ್ಥಿತಿಗೆ ಒಳಗಾಗಿದ್ದಾಗಿ ಪ್ರವಾಹ ಉಂಟು ಮಾಡಿದ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಸಾಮಾನ್ಯವಾಗಿ 20 ರೂ.ಗೆ ಮಾರಾಟವಾಗುವ ಒಂದು ಲೀಟರ್ ಕುಡಿಯುವ ನೀರಿನ ಬಾಟಲಿಯನ್ನು 110 ರೂ.ಗೆ ಮಾರಾಟ ಮಾಡಲಾಗುತ್ತಿದೆ. 

  ಪ್ರವಾಹದಿಂದ ಸಿಲುಕಿದ ಅವರ ಮನೆಯಲ್ಲಿ ಕುಡಿಯುವ ನೀರು ಇಲ್ಲದ ಪರಿಸ್ಥಿತಿ ಉಂಟಾಗಿತ್ತು. ಕುಡಿಯುವ ನೀರಿಲ್ಲದೇ ಒದ್ದಾಟ ನಡೆಸಿದ್ದ ಅವರು ಒಂದು ಲೀಟರ್ ಕುಡಿಯುವ ನೀರಿನ ಎರಡು ಬಾಟಲಿಗಳನ್ನು ಒಂದು ಬಾಟಲ್​ಗೆ ತಲಾ 110 ರೂ.  ನೀಡಿ ಖರೀದಿ ಮಾಡಿದ್ದಾಗಿ ತಿಳಿಸಿದ್ದಾರೆ.

  ಕುಡಿಯುವ ನೀರು ಖರೀದಿಗೆ ಎಷ್ಟೊಂದು ಕಷ್ಟವಾಗಿತ್ತೆಂದರೆ..
  ''ಗುರುವಾರದ ಹೊತ್ತಿಗೆ ನಮ್ಮ ಸಂಗ್ರಹದಲ್ಲಿದ್ದ ನೀರು ಮುಗಿದು ಹೋಗಿತ್ತು. ಸೋಮವಾರದಿಂದ ಕರೆಂಟ್ ಇರಲಿಲ್ಲ. ಇನ್ವರ್ಟರ್​ ನೀರು ನಿಂತಿತ್ತು. ಹೀಗಾಗಿ ನೀರು ದಾಸ್ತಾನು ಇರಲಿಲ್ಲ. ಪ್ರವಾಹದಿಂದ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಶುಕ್ರವಾರ ನಾನು ಕುಡಿಯುವ ನೀರನ್ನು ಖರೀದಿಸಲು ಸೊಂಟದ ಆಳದ ನೀರಿನಲ್ಲಿ ಸುಮಾರು ಒಂದು ಕಿಲೋಮೀಟರ್ ನಡೆದಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿUS Banned Abortion: ಅಮೆರಿಕಾದಲ್ಲಿ ಮಹಿಳೆಯರ ಗರ್ಭಪಾತದ ಹಕ್ಕಿಗೆ ಕೊನೆ; ಸುಪ್ರೀಂಕೋರ್ಟ್ ಆದೇಶ

  ಕೆಲವೆಡೆ 150 ರೂಪಾಯಿಗೂ ಮಾರಾಟ!
  ಸಾಮಾನ್ಯವಾಗಿ 20 ರೂ.ಗೆ ಮಾರಾಟವಾಗುವ ಒಂದು ಲೀಟರ್ ಕುಡಿಯುವ ನೀರಿನ ಬಾಟಲಿಯನ್ನು 110 ರೂ.ಗೆ ಮಾರಾಟ ಮಾಡಲಾಗುತ್ತಿದೆ.  ಅಲ್ಲದೇ, ಕೆಲವು ಕಡೆ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ.  ನನಗೆ ಎರಡು ಬಾಟಲಿಗಳನ್ನು ಖರೀದಿಸುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ ಎಂದು ಹೈಸ್ಕೂಲ್ ಶಿಕ್ಷಕ ದಾಸ್ ಶನಿವಾರ ಫೋನ್ ಮೂಲಕ ಡೆಕ್ಕನ್ ಹೆರಾಲ್ಡ್​ಗೆ ತಿಳಿಸಿದರು.

  ನೀರು ಮತ್ತು ಬಲವಾದ ಪ್ರವಾಹದಿಂದಾಗಿ ಆಡಳಿತವು ಬಿಜು ದಾಸ್ ಅವರು ಇರುವ ಪ್ರದೇಶವನ್ನು ಇನ್ನೂ ತಲುಪಲು ಸಾಧ್ಯವಾಗಿರಲಿಲ್ಲ. ಈ ಕಾರಣ ಜನರಿಗೆ ಯಾವುದೇ ಆಯ್ಕೆಗಳಿರಲಿಲ್ಲ ಎಂದು ಅವರು ಹೇಳಿದರು. ಕೆಟ್ಟ ಪರಿಣಾಮ ಬೀರಿದ ಸಿಲ್ಚಾರ್‌ ಪ್ರದೇಶದಲ್ಲಿ ಪ್ರವಾಹದ ಮಟ್ಟ ಶುಕ್ರವಾರ ಕಡಿಮೆಯಾಗಲು ಪ್ರಾರಂಭಿಸಿತು. ಆದರೆ ಹಲವೆಡೆ ಸೊಂಟದವರೆಗೆ ನೀರು ಇತ್ತು. ಶನಿವಾರ ಸಹ ಅದರ ಪಕ್ಕದ ಪ್ರದೇಶಗಳು ಸಹ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.

  45 ಲಕ್ಷಕ್ಕೂ ಹೆಚ್ಚು ಜನರು ವಿಕೋಪದಿಂದ ಸಂತ್ರಸ್ತ
  ಕಳೆದ 24 ಗಂಟೆಗಳಲ್ಲಿ 10 ಜನರು ಸಾವನ್ನಪ್ಪಿದ ನಂತರ ಶುಕ್ರವಾರ ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಸಾವಿನ ಸಂಖ್ಯೆ 118 ಕ್ಕೆ ಏರಿದೆ. ಅಸ್ಸಾಂನ 30 ಜಿಲ್ಲೆಗಳಲ್ಲಿ ಇನ್ನೂ 45 ಲಕ್ಷಕ್ಕೂ ಹೆಚ್ಚು ಜನರು ವಿಕೋಪದಿಂದ ಸಂತ್ರಸ್ತರಾಗಿದ್ದಾರೆ.

  ಇದನ್ನೂ ಓದಿ: Elon Musk: ಎಲಾನ್ ಮಸ್ಕ್ ಮಗ ಹುಡುಗಿಯಾಗಿ ಬದಲಾಗಿದ್ದೇಕೆ?

  ಬಾರ್‌ಪೇಟಾ, ಧುಬ್ರಿ, ಕರೀಮ್‌ಗಂಜ್ ಮತ್ತು ಉದಲ್‌ಗುರಿ ಜಿಲ್ಲೆಗಳಿಂದ ತಲಾ ಇಬ್ಬರು ಮತ್ತು ಕ್ಯಾಚಾರ್ ಮತ್ತು ಮೊರಿಗಾಂವ್‌ನಲ್ಲಿ ತಲಾ ಒಂದು ಸಾವು ವರದಿಯಾಗಿದೆ. ರಾಜ್ಯದ ಹಲವು ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಆದರೂ ಧುಬ್ರಿಯಲ್ಲಿ ಬ್ರಹ್ಮಪುತ್ರ ಮತ್ತು ನಾಗಾಂವ್‌ನ ಕೊಪಿಲಿ ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

  ಭಾರತೀಯ ಸೇನೆಯ ಕಾರ್ಯಾಚರಣೆ
  ಕ್ಯಾಚಾರ್‌ನ ಸಿಲ್ಚಾರ್ ನಗರವು ಸತತ ಐದನೇ ದಿನವೂ ನೀರಿನ ಅಡಿಯಲ್ಲಿ ಉಳಿದಿದೆ. ಸಿಲ್ಚಾರ್‌ನಲ್ಲಿ ಪ್ರವಾಹದ ಪ್ರವಾಹ ನಕ್ಷೆಯನ್ನು ಕೈಗೊಳ್ಳಲು ಎರಡು ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಪ್ರವಾಹ ಪೀಡಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಈ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಸುದ್ದಿ ಸಂಸ್ಥೆಯ ಪ್ರಕಾರ, ನಾಗಾಲ್ಯಾಂಡ್‌ನ ದಿಮಾಪುರದಿಂದ ಭಾರತೀಯ ಸೇನೆಯ ತಂಡದೊಂದಿಗೆ ಇಟಾನಗರ ಮತ್ತು ಭುವನೇಶ್ವರದಿಂದ ಎಂಟು ಎನ್‌ಡಿಆರ್‌ಎಫ್ ತಂಡಗಳನ್ನು ನಗರದಲ್ಲಿ ನಿಯೋಜಿಸಲಾಗಿದೆ.
  Published by:guruganesh bhat
  First published: