Assam: ಅವಧಿಗೂ ಮುನ್ನ ಸಿಜೇರಿಯನ್, ಭ್ರೂಣ ಬೆಳೆದಿಲ್ಲವೆಂದು ಹೊಲಿಗೆ, ಗರ್ಭಿಣಿ ಸ್ಥಿತಿ ಗಂಭೀರ!

ಅಸ್ಸಾಂನ ಕರೀಂಗಂಜ್‌ನಲ್ಲಿ ಗರ್ಭಿಣಿಗೆ ಹೆರಿಗೆ ಅವಧಿಗೂ ಮೂರು ತಿಂಗಳ ಮುಂಚೆಯೇ ವೈದ್ಯರೊಬ್ಬರು ಸಿಸೇರಿಯನ್ (ಸಿ-ಸೆಕ್ಷನ್) ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ರೋಗಿಯ ಕುಟುಂಬ ಸದಸ್ಯರೇ ತಮ್ಮ ಅವರ ಮನೆಗೆ ಬಂದು ಶಸ್ತ್ರಚಿಕಿತ್ಸೆ ಮಾಡಲು ವಿನಂತಿಸಿದರು ಎಂದು ವೈದ್ಯರು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗುವಾಹಟಿ (ಸೆ.04): ಅಸ್ಸಾಂನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಗರ್ಭಿಣಿ ಮಹಿಳೆಗೆ ಅವಧಿಗೂ ಮುನ್ನ, ಮೂರು ತಿಂಗಳ ಮೊದಲೇ ವೈದ್ಯರು ಸಿಸೇರಿಯನ್ (ಸಿ-ಸೆಕ್ಷನ್) ಮಾಡಿದ ಆರೋಪವಿದೆ. ಗುವಾಹಟಿ ಪ್ಲಸ್ ವರದಿ ಮಾಡಿದಂತೆ, ಕಳೆದ ವಾರ ವೈದ್ಯರು ಗರ್ಭಿಣಿ ಮಹಿಳೆಯೊಬ್ಬರಿಗೆ ಆಪರೇಷನ್ ಮಾಡಿದ ಘಟನೆ ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ, ಆದರೆ, ಭ್ರೂಣ ಬೆಳೆದಿಲ್ಲವೆಂದು ತಿಳಿದ ನಂತರ, ವೈದ್ಯರು ಹೊಟ್ಟೆಯನ್ನು ಮತ್ತೆ ಹೊಲಿಗೆ ಹಾಕಿ ಮುಚ್ಚಿದ್ದಾರೆ. ಆದರೀಗ ಈ ಎಡವಟ್ಟಿನಿಂದಾಗಿ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಸಿಜೇರಿಯನ್ ನಡೆಸಿ ಮಹಿಳೆಯನ್ನು ಸುಮಾರು 11 ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಬಳಿಕ ಆಗಸ್ಟ್ 31 ರಂದು ಅವರನ್ನು ಬಿಡುಗಡೆ ಮಾಡಲಾಯಿತು. ಡಾ ಎ ಕೆ ಬಿಸ್ವಾಸ್ ಅವರು ಕರೀಮ್‌ಗಂಜ್ ಸಿವಿಲ್ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆಸಿದ್ದಾರೆ.

ತೀವ್ರ ನೋವಿನಿಂದ ಬಳಲುತ್ತಿದ್ದ ನೇವಿ ನಮಸುದ್ರ ಹೆಸರಿನ ಆರು ತಿಂಗಳ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಈ ಮಹಿಳೆಗೆ ಡಿಸೆಂಬರ್​ನಲ್ಲಿ ಡೆಲಿವರಿ ಡೇಟ್​ ನೀಡಲಾಗಿತ್ತು ಎಂಬುವುದು ಉಲ್ಲೇಖನೀಯ ವಿಚಾರ. ಶಸ್ತ್ರಚಿಕಿತ್ಸೆಯ ನಂತರ, ಆಸ್ಪತ್ರೆಯಿಂದ ಬಿಡುಗಡೆಯಾದ ಮಹಿಳೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿತ್ತು. ಹೀಗಿರುವಾಗ ಬುಧವಾರ ಸಂಜೆ ಸ್ಥಳೀಯರು ಆಸ್ಪತ್ರೆಯ ಹೊರಗೆ ಜಮಾಯಿಸಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ಪ್ರತಿಭಟನೆಗೆ ಹೆದರಿದ ವೈದ್ಯರು ತಮ್ಮನ್ನು ತಾವು ಕೊಠಡಿಯಲ್ಲಿ ಲಾಕ್ ಮಾಡಿಕೊಂಡಿದ್ದರು. ಆದರೆ ಸುಮಾರು ಒಂದು ತಾಸಿನ ಬಳಿಕ ಹೊರಬಂದ ವೈದ್ಯರು ಭ್ರೂಣವು ಅಕಾಲಿಕವಾಗಿದ್ದರಿಂದ ಕತ್ತರಿಸಿದ ಭಾಗವನ್ನು ಮತ್ತೆ ಹೊಲಿಗೆ ಹಾಕಿ ಜೋಡಿಸಿರುವುದನ್ನು ಒಪ್ಪಿಕೊಂಡರು.

ಇದನ್ನೂ ಓದಿ: ಬೇಗ ಗರ್ಭಧರಿಸಲು ತಪ್ಪದೇ ಈ ಟಿಪ್ಸ್ ಫಾಲೋ ಮಾಡಿ

ಈ ಬಗ್ಗೆ ಕರೀಂಗಂಜ್ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇದೇ ವೇಳೆ ಮಾತನಾಡಿದ ಪೊಲೀಸರು, ವೈದ್ಯರು ಹಾಗೂ ಗರ್ಭಿಣಿಯ ಕುಟುಂಬದವರ ನಡುವೆ ಮಾತುಕತೆ ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಘಟನೆ ವಿವರಿಸಿದ ಪತಿ

ಇನ್ನು ಮಹಿಳೆಯ ಪತಿ ರಾಮ್ ನಮಸುದ್ರ ಈ ಬಗ್ಗೆ ಮಾಹಿತಿ ನೀಡುತ್ತಾ ಸುಮಾರು 15 ದಿನಗಳ ಹಿಂದೆ, ಅವಳು ತೀವ್ರವಾದ ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ನಾವು ಅವಳನ್ನು ಕರೀಂಗಂಜ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ದೆವು. ಪ್ರಾಥಮಿಕ ಚಿಕಿತ್ಸೆಯ ನಂತರ, ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದರು. ಶಸ್ತ್ರಚಿಕಿತ್ಸೆಯ ನಂತರ, ಭ್ರೂಣವು ಬೆಳೆದಿಲ್ಲ, ಹೀಗಾಗಿ ಕತ್ತರಿಸಿದ ಹೊಟ್ಟೆಭಾಗವನ್ನು ಮತ್ತೆ ಹೊಲಿಗೆ ಹಾಕಿ ಜೋಡಿಸಲಾಗಿದೆ. ಇನ್ನೂ ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿರಲು ಎಂದು ವೈದ್ಯರು ಹೇಳಿದ್ದರು ಎಂದಿದ್ದಾರೆ.ಕುಟುಂಬ ಸದಸ್ಯರೇ ಆಪರೇಷನ್ ಮಾಡಲು ಹೇಳಿದ್ರಾ?

ಇನ್ನು ರೋಗಿಯ ಕುಟುಂಬ ಸದಸ್ಯರೇ ತಮ್ಮ ಅವರ ಮನೆಗೆ ಬಂದು ಶಸ್ತ್ರಚಿಕಿತ್ಸೆ ಮಾಡಲು ವಿನಂತಿಸಿದರು ಎಂದು ವೈದ್ಯರು ಹೇಳಿದ್ದಾರೆ. ನಿಗದಿತ ದಿನಾಂಕ ಡಿಸೆಂಬರ್‌ನಲ್ಲಿದೆ ಎಂದು ನನಗೆ ತಿಳಿದಿತ್ತು ಆದರೆ ನಾವು ಸಂಕೀರ್ಣ ಪ್ರಕರಣಗಳಲ್ಲಿ ಅಕಾಲಿಕ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತೇವೆ. ನೋವು ತೀವ್ರವಾಗಿತ್ತು ಮತ್ತು ಆಕೆಯ ಕುಟುಂಬ ಸದಸ್ಯರು ನನ್ನನ್ನು ಶಸ್ತ್ರಚಿಕಿತ್ಸೆಗೆ ಮುಂದುವರಿಯುವಂತೆ ಕೇಳಿಕೊಂಡರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಭ್ರೂಣವು ಪ್ರಬುದ್ಧವಾಗಿಲ್ಲ ಎಂದು ನನಗೆ ತಿಳಿಯಿತು, ಆದ್ದರಿಂದ ನಾನು ಮತ್ತೆ ಹೊಲಿಗೆ ಹಾಕಿ ಮುಚ್ಚಿದೆ ”ಎಂದು ವೈದ್ಯರು ಹೇಳಿದ್ದಾರೆ.

ವೈದ್ಯಾಧಿಕಾರಿಗಳು ಹೇಳಿದ್ದೇನು?

ಆಸ್ಪತ್ರೆಯ ಅಧೀಕ್ಷಕ ಡಾ.ಲಿಪಿ ದೇಬ್ ಸಿನ್ಹಾ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಲು ಏಳು ಸದಸ್ಯರ ತಂಡವನ್ನು ರಚಿಸಲಾಗಿದೆ ಮತ್ತು ಲಿಖಿತ ದೂರು ನೀಡಲು ಕುಟುಂಬಕ್ಕೆ ತಿಳಿಸಲಾಗಿದೆ ಎಂದಿದ್ದಾರೆ. "ಈ ವಿಷಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ನಾವು ವಿಚಾರಣೆ ಮಾಡುತ್ತೇವೆ. ತಾಯಿ ಮತ್ತು ಅವರ ಕುಟುಂಬ ಸದಸ್ಯರನ್ನೂ ವಿಚಾರಣೆ ನಡೆಸಲಾಗುವುದು. ಅವರ ಬಳಿ ದೂರು ಇದ್ದಲ್ಲಿ ಲಿಖಿತವಾಗಿ ಬರಬೇಕು. ಆರೋಪ ನಿಜವೆಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ತಾಯಿ ಮತ್ತು ಆಕೆಯ ಮಗುವಿನ ಆರೋಗ್ಯದ ಬಗ್ಗೆಯೂ ನಾವು ಕಾಳಜಿ ವಹಿಸುತ್ತೇವೆ ಎಂದು ಸಿನ್ಹಾ ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ರಾಮ್ ಅವರ ಹಿರಿಯ ಸಹೋದರ ಸುದೀಪ್ ನಮಸುದ್ರ ಅವರು ಮಹಿಳೆಯ ಸ್ಥಿತಿ ಹದಗೆಡುತ್ತಿದೆ ಎಂದು ತಿಳಿಸಿದ್ದು, ಗುರುವಾರ ಸಂಜೆ ರಕ್ತಸ್ರಾವ ಪ್ರಾರಂಭವಾದ ನಂತರ ವೈದ್ಯರು ಮತ್ತೆ ಹೊಲಿಗೆ ಹಾಕಿದ್ದಾರೆ. ಆದರೆ, ಸಿ-ಸೆಕ್ಷನ್ ಮಾಡಿದ ವೈದ್ಯರುಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರು ಈ ಆಹಾರಗಳನ್ನು ತಿನ್ನುವುದು ಮಗುವಿನ ಆರೋಗ್ಯಕ್ಕೆ ಉತ್ತಮ

"ರೋಗಿಯು ಹೊರಗಿನಿಂದ ಸಾಧಾರಣವಾಗಿ ಕಾಣುತ್ತಾrಎ. ಆದರೆ ನಾವು ಅವಳ ಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸುತ್ತಿದ್ದೇವೆ. ವಿಶೇಷ ವೈದ್ಯರ ತಂಡ ಈ ಬಗ್ಗೆ ನಿಗಾವಹಿಸುತ್ತಿದ್ದು, ಇಂದು ಖುದ್ದು ನಾನೇ ರೋಗಿಯನ್ನು ಭೇಟಿ ಮಾಡಿದ್ದೇನೆ. ಆಕೆಗೆ ಬೇರೆ ಯಾವುದೇ ತೊಡಕುಗಳಿದ್ದರೆ, ತಂಡವು ಪರಿಶೀಲಿಸುತ್ತದೆ ಮತ್ತು ನಾವು ಅದಕ್ಕೂ ಚಿಕಿತ್ಸೆ ನೀಡುತ್ತೇವೆ”ಎಂದು ಸಿನ್ಹಾ ಹೇಳಿದರು.Published by:Precilla Olivia Dias
First published: