Love Jihad: ಹಿಂದೂ ಹುಡುಗ ಮದುವೆಯ ವೇಳೆ ಹಿಂದೂ ಹುಡುಗಿಗೆ ಸುಳ್ಳು ವಿವರ ನೀಡಿದ್ದರೆ, ಆಗಲೂ ಅದು ಲವ್ ಜಿಹಾದ್ !
New Marriage Bill: ಹೊಸಾ ಕಾನೂನು ಜಾರಿಯಾದ ನಂತರ ಮದುವೆಗೆ ಒಂದು ತಿಂಗಳ ಮುಂಚೆ ವಧು ಮತ್ತು ವರ ಇಬ್ಬರೂ ತಂತಮ್ಮ ಧರ್ಮ ಮತ್ತು ಆದಾಯವನ್ನು ದಾಖಲೆಯ ಸಮೇತ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಮೋಸ ಹೋಗುವವರು ಮತ್ತು ಮೋಸ ಮಾಡುವವರು ಇಬ್ಬರೂ ಎಚ್ಚರಿಕೆಯಿಂದ ಇರಲು ಸಾಧ್ಯ
Marriage Bill: ಲವ್ ಜಿಹಾದ್ ನಲ್ಲಿ ನಾನಾ ಬಗೆಗಳಿವೆ. ಹಿಂದೂ ಧರ್ಮದ ಯುವಕ ಹಿಂದೂ ಧರ್ಮದ ಯುವತಿಗೆ ಸುಳ್ಳು ಹೇಳಿ ಮದುವೆಯಾದ ನಂತರ ಸತ್ಯ ತಿಳಿದು ಆಕೆ ಮೋಸ ಹೋಗಿದ್ದರೆ ಆಗಲೂ ಅದು ಲವ್ ಜಿಹಾದ್ ಎಂದೇ ಪರಿಗಣಿಸಲ್ಪಡುತ್ತದೆ. ಹೀಗೆಂದು ವಿವರಿಸಿ ಲವ್ ಜಿಹಾದ್ ವಿರುದ್ಧ ಕಟ್ಟುನಿಟ್ಟಿನ ಕಾನೂನು ತರಲು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಸರ್ಮಾ ಸಜ್ಜಾಗಿದ್ದಾರೆ. ಇಂಥಾ ಪ್ರಕರಣಗಳು ಇತ್ತೀಚೆಗೆ ಬಹಳ ಹೆಚ್ಚಾಗಿದೆ ಎಂದಿರುವ ಅವರು, ಹೊಸಾ ಕಾನೂನು ಜಾರಿಯಾದ ನಂತರ ಮದುವೆಗೆ ಒಂದು ತಿಂಗಳ ಮುಂಚೆ ವಧು ಮತ್ತು ವರ ಇಬ್ಬರೂ ತಂತಮ್ಮ ಧರ್ಮ ಮತ್ತು ಆದಾಯವನ್ನು ದಾಖಲೆಯ ಸಮೇತ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ಮೋಸ ಹೋಗುವವರು ಮತ್ತು ಮೋಸ ಮಾಡುವವರು ಇಬ್ಬರೂ ಎಚ್ಚರಿಕೆಯಿಂದ ಇರಲು ಸಾಧ್ಯ ಎಂದರು.
ಸದ್ಯ ಅಸ್ಸಾಂನಲ್ಲಿ ಗೋರಕ್ಷಣಾ ಮಸೂದೆ ಮತ್ತು ಎರಡು ಮಕ್ಕಳನ್ನು ಮಾತ್ರ ಹೊಂದುವ ಮಸೂದೆ ಅಂಗೀಕಾರ ಆಗಬೇಕಿದೆ. ಸದನದಲ್ಲಿ ಇವೆರಡೂ ಕ್ಲಿಯರ್ ಆದ ನಂತರ ಮ್ಯಾರೇಜ್ ಬಿಲ್ ಪ್ರಸ್ತಾವನೆ ಇಟ್ಟು ಅದನ್ನೂ ಅಂಗೀಕರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಇದೆಲ್ಲವನ್ನೂ ನಾವು ನಮ್ಮ ಚುನಾವಣಾ ಪ್ರಚಾರದ ವೇಳೆಯೇ ಈಡೇರಿಸುವ ಭರವಸೆ ನೀಡಿದ್ದೆವು. ಈಗಿನ್ನೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳಾಗಿದೆ ಅಷ್ಟೇ.
ಈ ಹೊಸಾ ಮ್ಯಾರೇಜ್ ಬಿಲ್ ಖಂಡಿತಾ ಜಾರಿಯಾಗುತ್ತದೆ. ನಾವು ಅದನ್ನು ಲವ್ ಜಿಹಾದ್ ಎಂದು ಕರೆಯುವುದಿಲ್ಲ. ಏಕೆಂದರೆ ಇದು ಕೇವಲ ಮುಸ್ಮಿಮರಿಗೆ ಸಂಬಂಧಿಸಿದ್ದಲ್ಲ. ಕಾನೂನು ಎಲ್ಲರಿಗೂ ಒಂದೇ. ಹಿಂದೂಗಳು ಹಿಂದೂಗಳಿಗೇ ಮೋಸ ಮಾಡಿದರೂ ಅದರ ಅರ್ಥ ಒಂದೇ ಆದಂತಾಐ್ತು. ಹಾಗಾಗಿ ಸರ್ವಾತೀತವಾಗಿ, ಎಲ್ಲಾ ಧರ್ಮಗಳಿಗೂ ಅನುವಾಗುವಂತೆ ಈ ಕಾನೂನು ಜಾರಿಯಾಗಲಿದೆ ಎಂದಿದ್ದಾರೆ.