ರಾಹುಲ್​ ಗಾಂಧಿ ಆಧುನಿಕ ಜಿನ್ನಾ ಎಂದ ಅಸ್ಸಾಂ ಮುಖ್ಯಮಂತ್ರಿ Himanta Biswa Sarma

ಸಂಸತ್​ನಲ್ಲೂ ರಾಹುಲ್ ಗಾಂಧಿ ಭಾಷಣ ಕುರಿತು ಟೀಕಿಸಿದ ಅವರು, ಜಿನ್ನಾ ಭೂತವು ಅವರ ದೇಹವನ್ನು ಪ್ರವೇಶಿಸಿದೆ ಎಂದು ತೋರುತ್ತದೆ ಎಂದು ಟೀಕಿಸಿದರು.

ಹಿಮಂತ್​ ಬಿಸ್ವಾ ಶರ್ಮಾ- ರಾಹುಲ್ ಗಾಂಧಿ

ಹಿಮಂತ್​ ಬಿಸ್ವಾ ಶರ್ಮಾ- ರಾಹುಲ್ ಗಾಂಧಿ

 • News18
 • Last Updated :
 • Share this:
  ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) 'ಆಧುನಿಕ ಜಿನ್ನಾ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ( Himanta Biswa Sarma ) ಕರೆದಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪಾಕಿಸ್ತಾನದ ಭೂಪ್ರದೇಶದಲ್ಲಿ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳ ಅವರು ದಾಖಲೆ ಕೇಳುತ್ತಾರೆ. ನಾವು ಎಂದಾದರೂ ನೀವು ನಿಜವಾಗಿಯೂ ರಾಜೀವ್ ಗಾಂಧಿಯವರ ಮಗನಾ ಅಥವಾ ಅಲ್ಲವೇ ಎಂದು ನಾವು ನಿಮ್ಮನ್ನು ಎಂದಾದರೂ ಕೇಳಿದ್ದೇವೆಯೇ ಎಂದು ಹರಿಹಾಯ್ದರು.

  ರಾಹುಲ್ ಗಾಂಧಿಯವರ ಭಾಷೆ ಮತ್ತು ವಾಕ್ಚಾತುರ್ಯವು 1947 ರ ಜಿನ್ನಾ ಅವರಂತೆಯೇ ಇದೆ. "ಒಂದು ರೀತಿಯಲ್ಲಿ, ರಾಹುಲ್ ಗಾಂಧಿ ಆಧುನಿಕ-ದಿನದ ಜಿನ್ನಾ ಎಂದರು.

  ಅಸ್ಸಾಂ ಸಿಎಂ ಈ ಕೀಳು ಮಟ್ಟದ ಹೇಳಿಕೆ ರಾಜ್ಯದ ಗೌರವಕ್ಕೆ ಕಳಂಕ ತಂದಿದೆ ಎಂದು ಆರೋಪಿಸಿ, ಶರ್ಮಾ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುವಾಹಟಿಯಲ್ಲಿ ಪ್ರತಿಭಟನೆ ನಡೆಸಿದರು.

  ಯೋಧರ ನೋವು ಇವರಿಗೆ ತಿಳಿದಿಲ್ಲ

  ಅವರ ಹೇಳಿಕೆಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಪಕ್ಷದ ಕಾರ್ಯಕ್ರಮದಲ್ಲಿ ಈ ಕುರಿತು ಸಮಜಾಯಿಷಿ ನೀಡಿದ ಶರ್ಮಾ, ನಮ್ಮ ದೇಶದ ಯೋಧರು ಶತ್ರು ಪ್ರದೇಶದಲ್ಲಿ ಯಾವುದೇ ಕಾರ್ಯತಂತ್ರ ರೂಪಿಸುವ ಮೊದಲು ಒಂದು ತಿಂಗಳ ಕಾಲ ಈ ಸಂಬಂಧ ಯೋಜನೆ ರೂಪಿಸುತ್ತಾರೆ. ಕಾರ್ಯತಂತ್ರದ ಕ್ರಮಗಳು ಮತ್ತು ಕಾರ್ಯಾಚರಣೆ ಕುರಿತು ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸುತ್ತಾರೆ. ಇದಾದ ಬಳಿಕವೇ ಸೇನಾ ಕಾರ್ಯಚಾರಣೆ ಕುರಿತು ನಮಗೆ ತಿಳಿಯುತ್ತದೆ. ಈ ಬಗ್ಗೆ ಈಗ ಅವರು ಪುರಾವೆ ಕೇಳುತ್ತಿದ್ದಾರೆ. ಈ ಅವರ ಹೇಳಿಕೆಯಿಂದ ಯೋಧರು ಅನುಭಿಸುವ ನೋವು ಎಷ್ಟಿರಬೇಕು ಎಂದು ಅವರು ಯೋಚಿಸಬೇಕು ಎಂದರು.

  ಇದನ್ನು ಓದಿ: ಉದ್ಯಮಿ, ಬಜಾಜ್​ ಗ್ರೂಪ್​ ಮಾಜಿ ಅಧ್ಯಕ್ಷ Rahul Bajaj​ ನಿಧನ

  ನಿನ್ನೆ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಕಾಂಗ್ರೆಸ್​​ ಕರ್ಮ ತೋರಿಸಲು ಪ್ರಯತ್ನಿಸಿದ್ದಾರೆ. ಎಲ್ಲರೂ ಇದನ್ನು ನೋಡಿದ್ದಾರೆ ಎಂದು ನಾನು ಅದನ್ನು ಭಾವಿಸುತ್ತೇನೆ. ಈ ಸಂಬಂಧ ಟ್ವಿಟರ್​ನಲ್ಲೂ ನಾನು ದಾಳಿ ಮಾಡಿದ್ದೇನೆ. ನನ್ನ ಉದ್ದೇಶವನ್ನು ಸಾಧಿಸಲಾಗಿದೆ. ಅವರು ಈಗ ಸೇನೆಯಿಂದ ಪುರಾವೆ ಕೇಳುವುದಿಲ್ಲ ಎಂದರು

  ಸಂಸತ್​​ನಲ್ಲಿ ರಾಹುಲ್​ ಮೇಲೆ ಜಿನ್ನಾ ಭೂತ

  ಸಂಸತ್​ನಲ್ಲೂ ರಾಹುಲ್ ಗಾಂಧಿ ಭಾಷಣ ಕುರಿತು ಟೀಕಿಸಿದ ಅವರು, ಜಿನ್ನಾ ಭೂತವು ಅವರ ದೇಹವನ್ನು ಪ್ರವೇಶಿಸಿದೆ ಎಂದು ತೋರುತ್ತದೆ ಎಂದು ಟೀಕಿಸಿದರು. ಅವರಿಗೆ ಭಾರತವೆಂದರೆ ಗುಜರಾತ್‌ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರ. ಕಳೆದ ಹತ್ತು ದಿನಗಳಿಂದ ಅವರು ಹೇಳುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಮ್ಮೆ ಅವರು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ಹೇಳಿದರು. ಇನ್ನೊಂದು ಬಾರಿ ಭಾರತ ಎಂದರೆ ಗುಜರಾತಿನಿಂದ ಬಂಗಾಳದವರೆಗೆ ಎನ್ನುತ್ತಾರೆ. ಹಾಗಾಗಿ ರಾಹುಲ್ ಗಾಂಧಿಯಲ್ಲಿ ಜಿನ್ನಾ ದೆವ್ವ ಪ್ರವೇಶಿಸಿದೆ ಎಂದರು

  ಇದನ್ನು ಓದಿ: ಹುಷಾರಾಗಿರಿ, ನಿಮ್ಮ ಸರ್ಕಾರವನ್ನು ಕೆಳಗಿಳಿಸುತ್ತೇವೆ; ಅಗತ್ಯ ಬಿದ್ರೆ ರಾಷ್ಟ್ರ ರಾಜಕಾರಣಕ್ಕೂ ಸೈ ಎಂದ KCR

  ಯೋಗಿ ಆದಿತ್ಯನಾಥ್​ ವಾಗ್ದಾಳಿ

  ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ  ಸಿಎಂ ಯೋಗಿ ಆದಿತ್ಯನಾಥ್​ ಕೂಡ ರಾಹುಲ್​​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾರ ಗುರುತು ಅನುಮಾನವೋ ಅವರು ಈಗ ಹಿಂದೂ ಧರ್ಮದ ವ್ಯಾಖ್ಯಾನವನ್ನು ನೀಡುತ್ತಿದ್ದಾರೆ, ರಾಹುಲ್ ಗಾಂಧಿ ಹಿಂದೂ ಧರ್ಮದ ವ್ಯಾಖ್ಯಾನವನ್ನು ನೀಡಿದ್ದು ನನಗೆ ಆಶ್ಚರ್ಯವಾಯಿತು, ಹಿಂದೂ ಎಂಬುದು ಕೋಮುವಾದಿ ಪದವಲ್ಲ. ಹಿಂದೂ ನಮ್ಮ ಸಾಂಸ್ಕೃತಿಕ ಅಸ್ಮಿತೆ. ದೇವಭೂಮಿಯಲ್ಲಿ ಯಾರಿಗಾದರೂ ಹಿಂದೂ ಎಂಬ ಪದದ ವ್ಯಾಖ್ಯಾನ ತಿಳಿದಿಲ್ಲದಿದ್ದರೆ, ಆ ಪಕ್ಷಕ್ಕೆ ಅಧಿಕಾರಕ್ಕೆ ಬರುವ ಹಕ್ಕಿಲ್ಲ ಎಂದು ಟೀಕಾ ಪ್ರವಾಹ ನಡೆಸಿದರು
  Published by:Seema R
  First published: