ಪರೀಕ್ಷಾ ಕೇಂದ್ರಕ್ಕೆ ಶಾರ್ಟ್ಸ್ ಧರಿಸಿ ಬಂದಿದ್ದ 19 ವರ್ಷದ ವಿದ್ಯಾರ್ಥಿನಿಗೆ ಕಾಲುಗಳಿಗೆ ಕರ್ಟನ್ ಸುತ್ತಿ ಎಕ್ಸಾಂ ಬರೆಯುವಂತೆ ಮಾಡಿರುವ ಘಟನೆ ಅಸ್ಸಾಂನ ತೇಜ್ಪುರ ನಗರದಲ್ಲಿ(Assam’s Tezpur town) ನಡೆದಿದೆ. ಜುಬ್ಲೀ ತಮುಲಿ(Jublee Tamuli) ಎಂಬ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್(Girijananda Chowdhury Institute of Pharmaceutical Sciences -GIPS)ಗೆ ಆಗಮಿಸಿದ್ದಳು. ಜೋಹರ್ತ್ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ(Assam Agricultural University -AAU) ಪ್ರವೇಶ ಪರೀಕ್ಷೆ ಅಲ್ಲಿ ನಡೆಯುತ್ತಿತ್ತು.
ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ತಮ್ಮ ಊರಾದ ಬಿಸ್ವನಾಥ ಚರಿಯಾಲಿಯಿಂದ 70 ಕಿ.ಮೀ. ದೂರದ ತೇಜಪುರಕ್ಕೆ ಬೆಳಗ್ಗೆ ಪರೀಕ್ಷೆ ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ಜುಬ್ಲೀ ಪರೀಕ್ಷಾ ಕೇಂದ್ರ ಗಿರಿಜಾನಂದ ಚೌಧರಿ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರವೇಶಿಸಿದಾಗ ಯಾವುದೇ ತೊಂದರೆ ಎದುರಾಗಿರಲಿಲ್ಲ. ಆದರೆ ಪರೀಕ್ಷಾ ಕೊಠಡಿಯೊಳಗೆ ಹೋದಾಗ ಆಕೆ ಧರಿಸಿರುವ ಉಡುಪಿನ ಬಗ್ಗೆ ಮಾತುಗಳು ಶುರುವಾದವು.
‘‘ಭದ್ರತಾ ಸಿಬ್ಬಂದಿ ನನ್ನನ್ನು ಪರೀಕ್ಷಾ ಕೇಂದ್ರದೊಳಗೆ ಹೋಗಲು ಅನುಮತಿ ನೀಡಿದರು. ಆದರೆ ಇನ್ವಿಜಿಲೇಜರ್ ನಾನು ಪರೀಕ್ಷಾ ಕೊಠಡಿಯೊಳಗೆ ಹೋಗುವುದನ್ನು ತಡೆದರು. ಶಾರ್ಟ್ಸ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಹೀಗಾಗಿ ಎಕ್ಸಾಂ ಹಾಲ್ಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಹೇಳಿದರು‘‘ ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.
ಇದನ್ನೂ ಓದಿ:Karnataka Weather Today: ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್
‘‘ಪ್ರವೇಶ ಪತ್ರದಲ್ಲಿ ಡ್ರೆಸ್ ಕೋಡ್ ಬಗ್ಗೆ ಏನನ್ನೂ ಹೇಳಿಲ್ಲ. ಕೆಲವು ದಿನಗಳ ಹಿಂದೆ ನಾನು ನೀಟ್ ಪರೀಕ್ಷೆ ಬರೆಯಲು ಇಂತಹದ್ದೇ ಡ್ರೆಸ್ ತೊಟ್ಟು ಅದೇ ನಗರಕ್ಕೆ ಹೋಗಿದ್ದೆ. ಆದರೆ ಅಲ್ಲಿ ನಾನು ಧರಿಸಿದ್ದ ಡ್ರೆಸ್ ಬಗ್ಗೆ ಈ ರೀತಿಯಾದ ಘಟನೆ ಸಂಭವಿಸಿರಲಿಲ್ಲ. ಅಸ್ಸಾಂ ಕೃಷಿ ವಿಶ್ವವಿದ್ಯಾಲಯ ಶಾರ್ಟ್ಸ್ ಡ್ರೆಸ್ ಬಗ್ಗೆ ಯಾವುದೇ ನಿಯಮಗಳನ್ನು ಹೊಂದಿಲ್ಲ. ಹಾಗೇನಾದರೂ ಇದ್ದರೆ ಅಡ್ಮಿಟ್ ಕಾರ್ಡ್ನಲ್ಲಿ ಡ್ರೆಸ್ ಕೋಡ್ ಬಗ್ಗೆ ಉಲ್ಲೇಖ ಮಾಡಬೇಕಿತ್ತು. ಇಲ್ಲದಿದ್ದರೆ ನಮಗೆ ಹೇಗೆ ಗೊತ್ತಾಗುತ್ತದೆ‘‘ ಎಂದು ಜುಬ್ಲಿ ಪ್ರಶ್ನಿಸಿದ್ದಾಳೆ.
ಈ ಶಾರ್ಟ್ ಡ್ರೆಸ್ನಲ್ಲಿ ಪರೀಕ್ಷೆ ಬರೆಯುವಂತಿಲ್ಲ ಎಂದು ಕೊಠಡಿ ಮೇಲ್ವಿಚಾರಕರು ಹೇಳಿದ ಬಳಿಕ, ನಾನು ಅಳುತ್ತಾ ಹೊರಗೆ ನಿಂತಿದ್ದ ನನ್ನ ತಂದೆಯ ಬಳಿ ಹೋದೆ. ಕೊನೆಗೆ ಪ್ಯಾಂಟ್ ಧರಿಸಿದರೆ ಪರೀಕ್ಷೆಗೆ ಕುಳಿತುಕೊಳ್ಳಬಹುದು ಎಂದು ಪರೀಕ್ಷಾ ನಿಯಂತ್ರಕರು ಹೇಳಿದರು. ಆಗ ನನ್ನ ತಂದೆ ಪ್ಯಾಂಟ್ ಖರೀಸಿದಲು ಮಾರ್ಕೆಟ್ಗೆ ಹೋದರು ಎಂದಳು.
ಪರೀಕ್ಷಾ ಸಮಯದಲ್ಲಿ ಸಂಭವಿಸಿದ ಈ ಘಟನೆಯಿಂದಾಗಿ ಜುಬ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆಕೆಗೆ ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತಿದ್ದೇನೆ ಎಂಬ ಭಯವೂ ಕಾಡಿತ್ತು. ಜೊತೆಗೆ ಹಿಂಸೆಯನ್ನೂ ಅನುಭವಿಸಿದ್ದಳು. ಜುಬ್ಲಿಯ ತಂದೆ ಬಾಬುಲ್ ತಮುಲಿ ಸುಮಾರು 8 ಕಿ.ಮೀ ದೂರದಲ್ಲಿರುವ ಮಾರುಕಟ್ಟೆಯಿಂದ ಪ್ಯಾಂಟ್(ಟ್ರೌಸರ್)ನ್ನು ತಂದರು. ಅಲ್ಲಿಗೆ ಸಮಸ್ಯೆ ಬಗೆಹರಿಯಿತು. ಆಕೆಯ ಕಾಲುಗಳನ್ನು ಮುಚ್ಚಲು ಕರ್ಟನ್(ಪರದೆ) ನೀಡಲಾಯಿತು.
ಸಾಮಾನ್ಯ ಜ್ಞಾನವಿಲ್ಲದಿದ್ದರೆ ನಾನು ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ? ಇದು ಸಂಪೂರ್ಣ ಅನ್ಯಾಯ. ಸಿಬ್ಬಂದಿ ಕೋವಿಡ್ ಪ್ರೋಟೋಕಾಲ್ಗಳು, ಮಾಸ್ಕ್ ಅಥವಾ ತಾಪಮಾನ ಚೆಕ್ ಮಾಡಲಿಲ್ಲ. ಬದಲಾಗಿ ಶಾರ್ಟ್ಸ್ನ್ನು ಪರಿಶೀಲಿಸಿದರು. ಇದು ‘ನನ್ನ ಜೀವನದ ಅತ್ಯಂತ ಅವಮಾನಕರ ಅನುಭವ‘ ಎಂದು ಜುಬ್ಲಿ ಬಹಳ ಬೇಸರ ವ್ಯಕ್ತಪಡಿಸಿದರು. ಈ ಘಟನೆ ಕುರಿತಾಗಿ ಅಸ್ಸಾಂ ಶಿಕ್ಷಣ ಸಚಿವ ರಾನೋಜ್ ಪೆಗು ಅವರಿಗೆ ಪತ್ರ ಬರೆಯುವುದಾಗಿ ಜುಬ್ಲಿ ಹೇಳಿದರು.
ಇದನ್ನೂ ಓದಿ:Viral Fever in Karnataka: ರಾಜ್ಯದ ಉದ್ದಗಲಕ್ಕೂ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್, ಡೆಂಗ್ಯೂ; ಮೂರನೇ ಅಲೆಯ ಮುನ್ಸೂಚನೆ?
''ಹುಡುಗರು ಯಾವ ಉಡುಪು ಧರಿಸಿದರೂ ಯಾರೂ ಏನನ್ನೂ ಕೇಳುವುದಿಲ್ಲ. ಆದರೆ ಒಂದು ಹುಡುಗಿ ಶಾರ್ಟ್ಸ್ ಧರಿಸಿದರೆ ಜನರು ಬೆರಳು ಮಾಡಿ ತೋರಿಸುತ್ತಾರೆ'' ಎಂದು ಜುಬ್ಲಿ ಮತ್ತೆ ಬೇಸರ ಹೊರಹಾಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ