• Home
 • »
 • News
 • »
 • national-international
 • »
 • Teacher hit by Student: ‘ಸರಿಯಾಗಿ ಕುತ್ಕೊಂಡು ಪಾಠ ಕೇಳು‘ ಎಂದ ಶಿಕ್ಷಕನಿಗೆ ಕಬ್ಬಿಣದ ರಾಡ್​​ನಿಂದ ಹೊಡೆದ ವಿದ್ಯಾರ್ಥಿ

Teacher hit by Student: ‘ಸರಿಯಾಗಿ ಕುತ್ಕೊಂಡು ಪಾಠ ಕೇಳು‘ ಎಂದ ಶಿಕ್ಷಕನಿಗೆ ಕಬ್ಬಿಣದ ರಾಡ್​​ನಿಂದ ಹೊಡೆದ ವಿದ್ಯಾರ್ಥಿ

ಆದರೆ, ಇಲ್ಲಿ ಉಷಾ 9 ವರ್ಷಗಳ ಕಾಲ ನಾಪತ್ತೆಯಾಗಿದ್ದು, ಈ ಸುಳಿವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಈ ಹಿನ್ನಲೆ ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದು, ಇಷ್ಟು ಕಾಲ ಎಲ್ಲಿದ್ದರು, ಹೇಗಿದ್ದರೂ ಎಂಬ ತನಿಖೆಗೆ ಮುಂದಾಗಿದ್ದಾರೆ

ಆದರೆ, ಇಲ್ಲಿ ಉಷಾ 9 ವರ್ಷಗಳ ಕಾಲ ನಾಪತ್ತೆಯಾಗಿದ್ದು, ಈ ಸುಳಿವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಈ ಹಿನ್ನಲೆ ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಯ ವಿಚಾರಣೆ ನಡೆಸಿದ್ದು, ಇಷ್ಟು ಕಾಲ ಎಲ್ಲಿದ್ದರು, ಹೇಗಿದ್ದರೂ ಎಂಬ ತನಿಖೆಗೆ ಮುಂದಾಗಿದ್ದಾರೆ

ಹಲ್ಲೆಗೊಳಗಾದ ಶಿಕ್ಷಕ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ರಾತೆ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಶಿಕ್ಷಕನ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಶನಿವಾರ ನಡೆದಿರುವುದಾಗಿ ವರದಿ ಆಗಿದೆ.

 • Share this:

  ನವದೆಹಲಿ(ಸೆ.21): ವಿದ್ಯಾರ್ಥಿಗಳು(Students) ತಪ್ಪು ಮಾಡಿದಾಗ ಶಿಕ್ಷಕರು (Teachers) ದಂಡಿಸುವುದು ಅಥವಾ ತಿದ್ದಿ ಬುದ್ಧಿ ಹೇಳುವುದು ಸಾಮಾನ್ಯ. ವಿದ್ಯಾರ್ಥಿಗಳನ್ನು ಸರಿದಾರಿಗೆ ತರಬೇಕು ಎಂಬ ದೃಷ್ಟಿಯಿಂದ ಗುರುಗಳು ಬುದ್ಧಿ ಮಾತು ಹೇಳುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಗೆ ಹೀಗೆ ಬುದ್ಧಿ ಮಾತು ಹೇಳಿದ್ದೇ ತಪ್ಪಾಗಿ ಹೋಗಿದೆ. ಕೋಪಗೊಂಡ ಆತ ಶಿಕ್ಷಕನ ಮೇಲೆ ಕಬ್ಬಿಣದ ರಾಡ್(Iron Rod)​​ನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯ ಬಪ್ರೋಲಾದಲ್ಲಿರುವ ಬಾಯ್ಸ್​ ಸೀನಿಯರ್ ಸೆಕೆಂಡರಿ ಸ್ಕೂಲ್(Delhi's Boys Senior secondary school)​ನಲ್ಲಿ.


  11ನೇ ತರಗತಿ ಓದುತ್ತಿರುವ ಹುಡುಗ ಶಿಕ್ಷಕನ ಹಲ್ಲೆ ಮಾಡಿದ ವಿದ್ಯಾರ್ಥಿ. ತರಗತಿಯಲ್ಲಿ ಆತ ಸರಿಯಾಗಿ ಕೂತು ಪಾಠ ಕೇಳದೆ ತೊಂದರೆ ಮಾಡುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕ ‘‘ಸರಿಯಾಗಿ ಕುತ್ಕೊಂಡು ಪಾಠ ಕೇಳು‘‘ ಎಂದು ಆತನಿಗೆ ಹೇಳಿದ್ದಾರೆ. ಸಿಟ್ಟು ನೆತ್ತಗೇರಿದ ಹುಡುಗ ತಗರತಿ ಮುಗಿದ ಕೂಡಲೇ, ಕೋಪದಿಂದ ಶಿಕ್ಷಕನ ಮೇಲೆ ಕಬ್ಬಿಣದ ರಾಡ್​​ನಿಂದ ಹಲ್ಲೆ ಮಾಡಿದ್ದಾನೆ.


  ಹಲ್ಲೆಗೊಳಗಾದ ಶಿಕ್ಷಕ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ರಾತೆ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಶಿಕ್ಷಕನ ಹೇಳಿಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಶನಿವಾರ ನಡೆದಿರುವುದಾಗಿ ವರದಿ ಆಗಿದೆ.


  ಇದನ್ನೂ ಓದಿ:Sexual abuse: 5 ವರ್ಷದ ಮಗುವಿನೊಂದಿಗೆ ಅಸಭ್ಯ ವರ್ತನೆ; ಆರೋಪಿ ವಶಕ್ಕೆ ಪಡೆದ ಸಂಜಯನಗರ ಪೊಲೀಸರೊಂದಿಗೆ ಸ್ಥಳೀಯರ ವಾಗ್ವಾದ, ಠಾಣೆ ಮುಂದೆ ಪ್ರತಿಭಟನೆ


  ಸದ್ಯ ರೊನ್ಹೋಲಾ ಪೊಲೀಸ್ ಠಾಣೆಯ ಪೊಲೀಸರು ಆರೋಪಿತ ಹುಡುಗನನ್ನು ವಶಕ್ಕೆ ಪಡೆದಿದ್ದಾರೆ. ಶಾಲಾ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 308 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವಂತೆ ಸೂಚಿಸಿದೆ.


  ಹುಡುಗನಿಗೆ 21 ವರ್ಷ ವಯಸ್ಸಾಗಿದೆ. ಆತ ಎರಡು ಬಾರಿ 11ನೇ ತರಗತಿ ಫೇಲ್ ಆಗಿದ್ದ . ಸರಿಯಾಗಿ ಓದುತ್ತಿರಲಿಲ್ಲ. ತರಗತಿ ಒಳಗೆ ನ್ಯೂಸೆನ್ಸ್​ ಕ್ರಿಯೇಟ್ ಮಾಡುತ್ತಿದ್ದ. ಶಿಕ್ಷಕರು ಪಾಠ ಮಾಡಲು ಅಡ್ಡಿಪಡಿಸುತ್ತಿದ್ದ ಎಂದು ಶಾಲೆಯ ಆಡಳಿತ ಮಂಡಳಿ ಆರೋಪ ಮಾಡಿದೆ.


  2018 ಅಕ್ಟೋಬರ್ ತಿಂಗಳಲ್ಲೂ ಇಂತಹದ್ದೇ ಒಂದು ಪ್ರಕರಣ ನಡೆದಿತ್ತು. ದೆಹಲಿಯ ಸಾಕೇತ್ ಪ್ರದೇಶದಲ್ಲಿ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಹುಡುಗ ಶಿಕ್ಷಕನಿಗೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದ್ದ. ಶಿಕ್ಷಕ ವಿದ್ಯಾರ್ಥಿಯ ಬ್ಯಾಗ್​​ನಲ್ಲಿ ಕಬ್ಬಿಣದ ರಾಡ್​ ಇರುವುದನ್ನು ಗಮನಿಸಿದ್ದರು. ಜೊತೆಗೆ ಅವರ ಪೋಷಕರಿಗೆ ಹೇಳುವುದಾಗಿ ಬೆದರಿಸಿದ್ದರು. ಇದರಿಂದ ಕುಪಿತಗೊಂಡ 12 ವರ್ಷದ ಹುಡುಗ ಶಾಲೆ ಬಿಡುವ ಮುನ್ನ ಅದೇ ರಾಡ್​ನಿಂದ ಶಿಕ್ಷಕನಿಗೆ ಹೊಡೆದಿದ್ದ.

  Published by:Latha CG
  First published: