ಮಿಲಿಟ್ರಿ ಟ್ರೈನಿಂಗ್​​ನಿಂದ ಚಾಂಪಿಯನ್​ ಆದ ಪಿವಿ ಸಿಂಧು!: ಇಲ್ಲಿದೆ ರೋಚಕ ಅಂಶಗಳು


Updated:August 27, 2018, 3:18 PM IST
ಮಿಲಿಟ್ರಿ ಟ್ರೈನಿಂಗ್​​ನಿಂದ ಚಾಂಪಿಯನ್​ ಆದ ಪಿವಿ ಸಿಂಧು!: ಇಲ್ಲಿದೆ ರೋಚಕ ಅಂಶಗಳು
  • Share this:
ನ್ಯೂಸ್​ 18 ಕನ್ನಡ

ನವದೆಹಲಿ(ಆ.27): ಭಾರತದ ಸ್ಟಾರ್​ ಶೆಟ್ಲರ್​ ಪಿ. ವಿ. ಸಿಂಧು ಏಷ್ಯನ್​ ಗೇಮ್ಸ್​ನ ಬ್ಯಾಡ್ಮಿಂಟನ್​ ಫೈನಲ್​ಗೆ ತಲುಪಿ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಫೈನಲ್​ಗೆ ತಲುಪಿದ ಭಾರತೀಯ ಬ್ಯಾಡ್ಮಿಂಟನ್​ ಆಟಗಾರ್ತಿಯಾಗಿದ್ದಾರೆ. ಸದ್ಯ ಅವರ ದೃಷ್ಟಿ ಚಿನ್ನದ ಪದಕದ ಮೇಲಿದೆ. ಪಿ. ವಿ. ಸಿಂಧು ಇಷ್ಟೊಂದು ಯಶಸ್ಸು ಗಳಿಸಲು ಕಠಿಣ ಶ್ರಮವಹಿಸಿದ್ದಾರೆ. 8 ನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್​ ಬ್ಯಾಟ್​ ಹಿಡಿದ ಸಿಂಧು ಚಾಂಪಿಯನ್​ ಆದ ಹಾದಿ ಕುತೂಹಕಾರಿಯಾಗಿದೆ.

ಪಿ. ವಿ. ಸಿಂಧು ಬ್ಯಾಡ್ಮಿಂಟನ್​ನ ಆರಂಭಿಕ ತರಬೇತಿ ಸಿಕಂದರಾಬಾದ್​ನ ಮೆಹಬೂಬ್​ ಅಲಿ ಎಂಬವರಿಂದ ಪಡೆದಿದ್ದರು. ಇದಾದ ಬಳಿಕ ಪುಲ್ಲೇಲಾ ಗೋಪಿಚಂದ್​ ಬ್ಯಾಡ್ಮಿಂಟನ್​ ಅಕಾಡೆಮಿಗೆ ಸೇರಿಕೊಂಡರು. ಸಿಂಧು ಮುಂಜಾನೆ 4.15 ನಿಮಿಷಕ್ಕೆ ಎದ್ದು, ಬ್ಯಾಡ್ಮಿಂಟನ್​ ಪ್ರ್ಯಾಕ್ಟೀಸ್​ ಆರಂಭಿಸುತ್ತಾರೆ. ಆರಂಭದಲ್ಲಿ ಅವರು ಪ್ರತಿದಿನ 56 ಕಿ. ಮೀಟರ್​ ಪ್ರಯಾಣ ಮಾಡಿ ಬ್ಯಾಡ್ಮಿಂಟನ್​ ಕ್ಯಾಂಪ್​ಗೆ ಹೋಗುತ್ತಿದ್ದರು.

ಇನ್ನು ತರಬೇತಿ ವೇಳೆ ಅವರು ತಮ್ಮ ಫೋನ್​ನಿಂದ ದೂರವೇ ಉಳಿಯುತ್ತಾರೆ. ಅಲ್ಲದೇ ಅವರು ತಮ್ಮ ಡಯಟ್​ನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಅವರಿಗೆ ಸಿಹಿ ಮೊಸರು ಹಾಗೂ ಐಸ್​ಕ್ರೀಂ ಎಂದರೆ ಪಂಚಪ್ರಾಣ ಆದರೆ ಚಾಂಪಿಯನ್​ ಆಗುವ ಗುರಿ ಇಟ್ಟುಕೊಂಡಿದ್ದ ಅವರು ಇದರಿಂದಲೂ ದೂರ ಉಳಿದುಕೊಂಡರು.

ಪಿ. ವಿ ರಾಮಣ್ಣ ಹಾಗೂ ವಿಜಯಾ ದಂಪತಿಯ ಮಗಳು ಪಿ. ವಿ. ಸಿಂಧು 1995ರ ಜುಲೈ 5 ರಂದು ಹೈದರಾಬಾದ್​ನಲ್ಲಿ ಜನಿಸಿದರು. ಸಿಂಧುರವರ ತಂದೆ ತಾಯಿ ವಾಲಿಬಾಲ್​ ಆಟಗಾರರು ಎಂಬುವುದು ಗಮನಾರ್ಹ. ಪಿ. ವಿ. ರಾಮಣ್ಣರವರಿಗೆ ವಾಲಿಬಾಲ್​ನಲ್ಲಿ ಅರ್ಜುನ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು.

ಪಿ. ವಿ ಸಿಂಧು ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಈ ಸಾಧನೆ ಮಾಡಿರುವ ಭಾರತೀಯ ಮಹಿಳೆಯರಲ್ಲಿ ಪಿ. ವಿ. ಸಿಂಧು ಮೊದಲಿಗರು. ಸದ್ಯ ಅವರು ಏಷ್ಯನ್​ ಗೇಮ್ಸ್​ನ ಫೈನಲ್​ ಹಂತಕ್ಕೆ ತಲುಪಿ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. ಆದರೆ ಅವರ ದೃಷ್ಟಿ ಚಿನ್ನದ ಪದಕ ಗಳಿಸುವ ಮೇಲಿದೆ.
First published: August 27, 2018, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading