Real Estate: ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌: ಈ ಫ್ಲ್ಯಾಟ್​ನ ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!

asia most expensive apartment: ಹಾಂಗ್ ಕಾಂಗ್‌ನಲ್ಲಿರುವ ಅಪಾರ್ಟ್‌ಮೆಂಟ್ ರಿಯಲ್ ಎಸ್ಟೇಟ್ ದಾಖಲೆಯನ್ನು ಮುರಿದು ಏಷ್ಯಾದ ಅತ್ಯಂತ ದುಬಾರಿ ರೆಸಿಡೆನ್ಶಿಯಲ್ ಫ್ಲಾಟ್ ಎನಿಸಿಕೊಂಡಿದೆ. HK 640 ಮಿಲಿಯನ್ ಡಾಲರ್‌ಗೆ (ಸುಮಾರು 82.2 ಮಿಲಿಯನ್ ಡಾಲರ್ ಅಥವಾ 610 ಕೋಟಿ ರೂ.) ಮಾರಾಟವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಪಾರ್ಟ್‌ಮೆಂಟ್‌(Apartment)ಗಳಲ್ಲಿ ಫ್ಲ್ಯಾಟ್‌(Fat) ಖರೀದಿಸುವ ಆಸೆ(Wish) ಬಹುತೇಕರಲ್ಲಿ ಇದ್ದೇ ಇರುತ್ತದೆ. ಆದರೆ, ಅದಕ್ಕೆ ತಕ್ಕಂತೆ ಹಣವನ್ನೂ ನೀಡಬೇಕು. ಒಂದು ಒಳ್ಳೆಯ ಅಪಾರ್ಟ್‌ಮೆಂಟ್‌ ಅಂದರೆ ಭಾರತ(India)ದಲ್ಲಿ 2 ಕೋಟಿ, 3 ಕೋಟಿ , 10 ಕೋಟಿ ಹೀಗೆ ಬೆಲೆ ನಿಗದಿ ಇರುತ್ತದೆ. ಇದೇ ರೀತಿ, ನೀವು ಅಪಾರ್ಟ್‌ಮೆಂಟ್‌ವೊಂದಕ್ಕೆ ಎಷ್ಟು ಹಣ ಕೊಡ್ಬಹುದು ಹೇಳಿ..? ಇದ್ಯಾಕೆ ಈ ಪ್ರಶ್ನೆ ಅಂತೀರಾ? ಹಾಂಗ್‌ಕಾಂಗ್‌(Hongkong)ನಲ್ಲೊಂದು ಅಪಾರ್ಟ್‌ಮೆಂಟ್‌ ಏಷ್ಯಾದಲ್ಲೇ ಅತ್ಯಂತ ದುಬಾರಿ ರೆಸಿಡೆನ್ಶಿಯಲ್ ಫ್ಲ್ಯಾಟ್‌(Residential Flat) ಎನಿಸಿಕೊಂಡಿದೆ. ಅದರ ಬೆಲೆ ಎಷ್ಟು ಗೊತ್ತಾ? ಈ ಬೆಲೆಯನ್ನು ನೀವು ಕೇಳಿದರೆ ಶಾಕ್​ ಆಗುತ್ತೀರಾ. ಇಷ್ಟೊಂದು ಹಣ ಕೊಟ್ಟು ಈ ಫ್ಲ್ಯಾಟ್​ನಲ್ಲಿ ಇರಬೇಕಾ ಎಂದು ಅಂದುಕೊಳ್ಳುತ್ತೀರಾ. ಈ ಹಣಕ್ಕೆ ಭಾರತದಲ್ಲಿ ಒಂದು ಕೋಟಿಗೆ ಒಂದು ಫ್ಲ್ಯಾಟ್​ನಂತೆ ಖರೀದಿಸಿದರೇ, 610 ಫ್ಲ್ಯಾಟ್​​ಗಳನ್ನ ಖರೀದಿ ಮಾಡಬಹುದು. ಹೌದು ಹಾಂಗ್​ಕಾಂಗ್​ನ ಈ ಒಂದು ಫ್ಲ್ಯಾಟ್​ನ ಬೆಲೆ ಬರೋಬ್ಬರಿ 610 ಕೋಟಿ ರೂ. 

ಒಂದು ಫ್ಲ್ಯಾಟ್​ಗೆ 610 ಕೋಟಿ ರೂ. 

ಹೌದು, ಇತ್ತೀಚೆಗೆ ಹಾಂಗ್ ಕಾಂಗ್‌ನಲ್ಲಿರುವ ಅಪಾರ್ಟ್‌ಮೆಂಟ್ ರಿಯಲ್ ಎಸ್ಟೇಟ್ ದಾಖಲೆಯನ್ನು ಮುರಿದು ಏಷ್ಯಾದ ಅತ್ಯಂತ ದುಬಾರಿ ರೆಸಿಡೆನ್ಶಿಯಲ್ ಫ್ಲಾಟ್ ಎನಿಸಿಕೊಂಡಿದೆ. HK 640 ಮಿಲಿಯನ್ ಡಾಲರ್‌ಗೆ (ಸುಮಾರು 82.2 ಮಿಲಿಯನ್ ಡಾಲರ್ ಅಥವಾ 610 ಕೋಟಿ ರೂ.) ಮಾರಾಟವಾಗಿದೆ. ಪ್ರತಿ ಚದರ ಅಡಿಗೆ HK 140,800 ಡಾಲರ್ (13.43 ಲಕ್ಷ ರೂ. ಗೂ ಹೆಚ್ಚು) ಬೆಲೆಗೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ ಮಾರಾಟವು ಅತ್ಯಂತ ದುಬಾರಿಯಾಗಿದೆ. ಅಪಾರ್ಟ್‌ಮೆಂಟ್‌ ಹಾಂಗ್ ಕಾಂಗ್‌ನ ಐಕಾನಿಕ್ ಮೌಂಟ್ ನಿಕೋಲ್ಸನ್ ಪ್ರಾಜೆಕ್ಟ್‌ಗಳಲ್ಲಿ ಒಂದಾಗಿದೆ. ಇದನ್ನು ವಾರ್ಫ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ನ್ಯಾನ್ ಫಂಗ್ ಡೆವಲಪ್‌ಮೆಂಟ್ ಲಿಮಿಟೆಡ್ ಮಾರಾಟ ಮಾಡಿದೆ. ಇದು ಪೀಕ್ ಎಂಬ ಐಷಾರಾಮಿ ವಸತಿ ಪ್ರದೇಶದಲ್ಲಿ ನೆಲೆಗೊಂಡಿದೆ.

ಇದನ್ನು ಓದಿ :  ಟಾಯ್ಲೆಟ್​ ನೀರನ್ನು ಕುಡಿಯಲು ಬಳಸುತ್ತಿದ್ದ ಆಸ್ಪತ್ರೆ: 30 ವರ್ಷಗಳ ಬಳಿಕ ಗುಟ್ಟು ರಟ್ಟು!

4,544 ಚದರ ಅಡಿ, 3 ಪಾರ್ಕಿಂಗ್​ ಸ್ಲಾಟ್​!

ಈ ಅಪಾರ್ಟ್‌ಮೆಂಟ್‌ 4,544 ಚದರ ಅಡಿ ಗಾತ್ರದಲ್ಲಿದೆ ಮತ್ತು 3 ಪಾರ್ಕಿಂಗ್ ಸ್ಲಾಟ್‌ಗಳನ್ನು ಹೊಂದಿದೆ. ಫೆಬ್ರವರಿ 2021ರಲ್ಲಿ ಸ್ಥಳೀಯ ವ್ಯಾಪಾರ ಉದ್ಯಮಿ ವಿಕ್ಟರ್ ಲೀ ಸಂಸ್ಥೆ CK ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮಾರಾಟ ಮಾಡಿದ 21 ಬೋರೆಟ್ ರೋಡ್ ಪ್ರಾಜೆಕ್ಟ್ ಅಪಾರ್ಟ್‌ಮೆಂಟ್‌ಗಾಗಿ ಈ ಮಾರಾಟವು ಹಿಂದಿನ ದಾಖಲೆಯಾದ HK 136,000 ಡಾಲರ್ (12.97 ಲಕ್ಷ ರೂ.) ಅನ್ನು ಮುರಿಯಿತು. ಹಾಂಗ್ ಕಾಂಗ್‌ನ ಐಷಾರಾಮಿ ವಸತಿ ರಿಯಲ್ ಎಸ್ಟೇಟ್ ವಿಶ್ವದ ಅತ್ಯಂತ ದುಬಾರಿಗಳಲ್ಲೊಂದು. Colliers International ಪ್ರಕಾರ, ಜೂನ್ 2021ರಲ್ಲಿ HK 12.8 ಬಿಲಿಯನ್ ಡಾಲರ್ (12,208 ಕೋಟಿ ರೂ.) ಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ವಹಿವಾಟುಗಳ ಒಟ್ಟು ಮೊತ್ತವು ದ್ವಿಗುಣಗೊಳ್ಳುವುದರೊಂದಿಗೆ ಹಾಂಗ್ ಕಾಂಗ್ ಐಲ್ಯಾಂಡ್ ರಿಯಲ್ ಎಸ್ಟೇಟ್‌ನಲ್ಲಿ ಇತ್ತೀಚೆಗೆ ಚಟುವಟಿಕೆ ಪಡೆದುಕೊಂಡಿದೆ.

ಇದನ್ನು ಓದಿ : ಒಂದು ಡೋಸ್​ ವ್ಯಾಕ್ಸಿನ್ ಹಾಕಿಸಿ 1 ಮಿಲಿಯನ್​ ಗೆದ್ದ ಯುವತಿ​: ಅದು ಹೇಗೆ? ನೀವೇ ನೋಡಿ

ಖರೀದಾರರು ಯಾರು ಎಂಬುದು ಬಹಿರಂಗವಾಗಿಲ್ಲ!

ಆದರೆ, ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌ ಖರೀದಿದಾರರು ಯಾರು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದರೂ, ಅದೇ ವ್ಯಕ್ತಿ ಇತ್ತೀಚೆಗೆ ತನ್ನ ಇತ್ತೀಚಿನ ಖರೀದಿಯ ಪಕ್ಕದಲ್ಲಿ HK 561 ಮಿಲಿಯನ್ ಡಾಲರ್‌ (535 ಕೋಟಿ ರೂ.) ನೀಡಿ ಇನ್ನೊಂದು ಫ್ಲ್ಯಾಟ್‌ ಖರೀದಿಸಿದ್ದರು. ಹಾಂಗ್ ಕಾಂಗ್‌ನಲ್ಲಿನ ಅತ್ಯಂತ ದುಬಾರಿ ಐಷಾರಾಮಿ ರಿಯಲ್ ಎಸ್ಟೇಟ್‌ಗಳಲ್ಲಿ ಒಂದಾದ ಮೌಂಟ್ ನಿಕೋಲ್ಸನ್ 2017ರಿಂದ ಏಷ್ಯಾದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌ನ ಸ್ಥಳ ಎನಿಸಿಕೊಂಡಿತ್ತು. ಆದರೆ, 21 ಬೊರೆಟ್ ರಸ್ತೆ 9 ತಿಂಗಳ ಹಿಂದೆ ಆ ಅಪಾರ್ಟ್‌ಮೆಂಟ್‌ ಅನ್ನು ಸ್ವಾಧೀನಪಡಿಸಿಕೊಂಡಿತ್ತು.
Published by:Vasudeva M
First published: