Asia Cup 2022: ಬಿಜೆಪಿ, ಕಾಂಗ್ರೆಸ್ ಮುಖಂಡರು ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ರು! ನೆನಪು ಬಿಚ್ಚಿಟ್ಟ ಪ್ರಿಯಾಂಕಾ ಗಾಂಧಿ ವಾದ್ರಾ

ಇಂದು ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‍ನಲ್ಲಿ ಮುಖಾಮುಖಿಯಾಗಲಿವೆ. ಇಡೀ ದೇಶದ ಪರವಾಗಿ, ವೈಯಕ್ತಿಕವಾಗಿ ಮತ್ತು ನನ್ನ ಕುಟುಂಬದ ಪರವಾಗಿ ನಾನು ನಮ್ಮ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಈ ಸಂದರ್ಭ ಹಳೆಯದೊಂದು ಸುಂದರ ನೆನಪನ್ನು ಅವರು ಹಂಚಿಕೊಂಡಿದ್ದಾರೆ.

ಪ್ರಿಯಾಂಕ ಗಾಂಧಿ ವಾದ್ರಾ

ಪ್ರಿಯಾಂಕ ಗಾಂಧಿ ವಾದ್ರಾ

 • Share this:
  ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ನಿನ್ನೆಯಿಂದ ಯುಎಇ ಅಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಈ ಬಾರಿ ಐಸಿಸಿ ಟಿ20 (ICC T-20) ವಿಶ್ವಕಪ್ ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ 20 ಮಾದರಿಯಲ್ಲಿ ನಡೆಯಲಿದೆ. ಕೊರೋನಾ ನಂತರ 2 ವರ್ಷಗಳ ಬಳಿಕ ಇದೀಗ ಮತ್ತೆ ಏಷ್ಯಾ ಕಪ್ ನಡೆಯುತ್ತಿದೆ. ಇಂದು (ಆಗಸ್ಟ್28) ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದ್ದು, ಇದೊಂದು ಪಂದ್ಯಕ್ಕಾಗಿ ಕ್ರಿಕೆಟ್ ಲೋಕವೇ ಕಾತುರದಿಂದ ಕಾದಿದೆ ಎಂದರೂ ತಪ್ಪಾಗಲಾರದು. ಉಭಯ ದೇಶಗಳು ಪಂದ್ಯ ನೋಡಲು ಉತ್ಸುಕರಾಗಿದ್ದಾರೆ. ಭಾರತ ತಂಡದ ಆಟಗಾರರಿಗೆ ಕಾಂಗ್ರೆಸ್ ನಾಯಕಿ (Congress leader) ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ಶುಭಾಶಯ (Wish) ತಿಳಿಸಿದ್ದಾರೆ. ಅಲ್ಲದೇ ತಾವು ನೋಡಿದ ಹಳೆಯ ಪಂದ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  'ಮೆನ್ ಇನ್ ಬ್ಲೂ'ಗೆ ಪ್ರಿಯಾಂಕಾ ವಿಶ್
  ಇಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾರತ ಪಂದ್ಯವನ್ನಾಡಲಿದೆ. ಅದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ವೀಡಿಯೊ ಸಂದೇಶದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಸ್ಪರ್ಧಿಸಲು 'ಮೆನ್ ಇನ್ ಬ್ಲೂ' ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

  ಕರಾಚಿ ನೆನಪು ಬಿಚ್ಚಿಟ್ಟ ಪ್ರಿಯಾಂಕಾ
  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಕೆಲವು ವರ್ಷಗಳ ಹಿಂದೆ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಕರಾಚಿಗೆ ಭೇಟಿ ನೀಡಿದ ಬಗ್ಗೆ ಮಾತನಾಡಿದ್ದಾರೆ. ಕೆಲವು ವರ್ಷಗಳ ಹಿಂದೆ, ನಾನು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಲು ಕರಾಚಿಗೆ ಭೇಟಿ ನೀಡಿದ್ದೆ. ಭಾರತ ಗೆದ್ದ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಪಂದ್ಯವನ್ನು ವೀಕ್ಷಿಸಲು ಹೋದ ಎಲ್ಲಾ ಭಾರತೀಯ ರಾಜಕಾರಣಿಗಳು ತುಂಬಾ ಉತ್ಸುಕರಾಗಿದ್ದರು. ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಮುಖಂಡರೂ ಇದ್ದರು. ಭಾರತ ಗೆದ್ದಾಗ ಎಲ್ಲರೂ ಜೊತೆಯಾಗಿ ಕುಣಿದು ಕುಪ್ಪಳಿಸಿದ್ರು ಎಂದು ಹೇಳಿರುವ ವಿಡಿಯೋ ಶೇರ್ ಮಾಡಿದ್ದಾರೆ.

  ಗೆದ್ದು ಬಾ ಇಂಡಿಯಾ
  ಇಂದು ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್‍ನಲ್ಲಿ ಮುಖಾಮುಖಿಯಾಗಲಿವೆ. ಇಡೀ ದೇಶದ ಪರವಾಗಿ, ವೈಯಕ್ತಿಕವಾಗಿ ಮತ್ತು ನನ್ನ ಕುಟುಂಬದ ಪರವಾಗಿ ನಾನು ನಮ್ಮ ತಂಡಕ್ಕೆ ಶುಭ ಹಾರೈಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

  ಇದನ್ನೂ ಓದಿ: HOME » NEWS » SPORTS IND vs PAK Asia Cup 2022: ಭಾರತ-ಪಾಕ್​ ಕದನ, ಯಾರು ಬಲಿಷ್ಠರು? ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ

  ಭಾರತ ಮತ್ತು ಪಾಕಿಸ್ತಾನದ ಆರಂಭಿಕ ಪಂದ್ಯ
  ಈ ಪಂದ್ಯವು 2022 ರ ಏಷ್ಯಾಕಪ್‍ನಲ್ಲಿ ಎರಡೂ ತಂಡಗಳಿಗೆ ಆರಂಭಿಕ ಪಂದ್ಯವಾಗಿದ್ದು, ಯುಎಇಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಮತ್ತು ಟ್ವೆಂಟಿ-20 ಮಾದರಿಯಲ್ಲಿ ಪ್ರತಿಸ್ಪರ್ಧಿಗಳ ನಡುವೆ ಇನ್ನೂ ಎರಡು ಸ್ಪರ್ಧೆಗಳು ನಡೆಯುವ ಸಾಧ್ಯತೆಯಿದೆ.

  ಮುಂಬರುವ ಟಿ-20 ವಿಶ್ವಕಪ್‍ಗೆ ಭಾಗವಹಿಸುವವರನ್ನು ಸಿದ್ಧಪಡಿಸಲು, ಅಕ್ಟೋಬರ್-ನವೆಂಬರ್‍ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅಲ್ಲಿ ಕೂಡ, ಅಕ್ಟೋಬರ್ 23 ರಂದು ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರರ ವಿರುದ್ಧ ತಮ್ಮ ಆರಂಭಿಕ ಪಂದ್ಯವನ್ನು ಆಡಲಿವೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ 2022, ಟೀಂ ಇಡಿಯಾ ಆಟಗಾರರಿಗೆ ಪ್ರಿಯಾಂಕಾ ಗಾಂಧಿ ಶುಭಾಶಯ

  ಪಂದ್ಯದ ಸಮಯ

  ಇಂಡೋ-ಪಾಕ್ ಪಂದ್ಯ ಯುಎಇಯಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಟಾಸ್​ ಮತ್ತು 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ನಲ್ಲಿ ಭಾರತದಲ್ಲಿ ಪಂದ್ಯಾವಳಿಯ ಅಧಿಕೃತ ಪ್ರಸಾರವಾಗಲಿದೆ.

  ಇದನ್ನೂ ಓದಿ: IND vs PAK: ಪಾಕ್​ ಬೌಲರ್​ಗಳಿಗೆ ನಡುಕ ಹುಟ್ಟಿಸಿದ ಟೀಂ ಇಂಡಿಯಾ ಆಟಗಾರ! ಇವ್ರ ರೆಕಾರ್ಡ್ಸ್​ಗಳೇ ಹೇಳುತ್ತೆ ಕಿಂಗ್​ ಈಸ್ ಆಲ್​ವೇಸ್​​​ ಕಿಂಗ್

  ಪಾಕ್​ ಎದುರು ಟೀಂ ಇಂಡಿಯಾ ಸಂಭ್ಯಾವ್ಯ ತಂಡ

  ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್.
  Published by:Savitha Savitha
  First published: