• Home
  • »
  • News
  • »
  • national-international
  • »
  • Buddhist Caves: 20ಕ್ಕೂ ಹೆಚ್ಚು ಬೌದ್ಧಗುಹೆಗಳ ಉತ್ಖನನ! ರೋಚಕ ಸಂಗತಿ ಬಯಲು

Buddhist Caves: 20ಕ್ಕೂ ಹೆಚ್ಚು ಬೌದ್ಧಗುಹೆಗಳ ಉತ್ಖನನ! ರೋಚಕ ಸಂಗತಿ ಬಯಲು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಲಚೂರಿ ಕಾಲಕ್ಕೆ ಸೇರಿದ ಭಗವಾನ್ ವಿಷ್ಣುವಿನ 10 ಅವತಾರಗಳ ಏಕಶಿಲೆಯ ರಚನೆ, ವಿಷ್ಣುವಿನ ವಿವಿಧ ಅವತಾರಗಳಾದ 'ವರಾಹ' ಮೂರ್ತಿಯೂ ಸೇರಿದಂತೆ ಬೇರೆ ಶಿಲ್ಪಗಳು ದೊರೆತಿವೆ.

  • Share this:

ಮಧ್ಯಪ್ರದೇಶದ ಬಾಂಧವ್‌ಗಢ್‌ದಲ್ಲಿ 2ನೇ ಶತಮಾನದಿಂದ 5ನೇ ಶತಮಾನದವರೆಗಿನ 20ಕ್ಕೂ ಹೆಚ್ಚು ಬೌದ್ಧ ಗುಹೆಗಳನ್ನು(Buddhist Caves) ಪತ್ತೆ ಮಾಡಿರುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಬುಧವಾರ ತಿಳಿಸಿದೆ. ಉತ್ಖನನ ಸಮಯದಲ್ಲಿ ಪುರಾತನ ಗುಹೆ, ದೇವಾಲಯಗಳು, ಬೌದ್ಧರ ಕಾಲದ ಅವಶೇಷಗಳು, ಮಥುರಾ, ಕೌಶಂಬಿ ನಗರಗಳ ಹೆಸರನ್ನು ಹೊಂದಿರುವ ಪುರಾತನ ಲಿಪಿಗಳು ಪತ್ತೆಯಾಗಿರುವುದಾಗಿ (ASI Discovers) ಅಧಿಕಾರಿಗಳು ತಿಳಿಸಿದ್ದಾರೆ.
ಬಘೇಲ್‌ಖಂಡ್ ಪ್ರದೇಶದಲ್ಲಿ ಪತ್ತೆ ಹಚ್ಚಲಾದ ಈ ಬೌದ್ಧ ಧಾರ್ಮಿಕ ಕಲಾಕೃತಿಗಳು ಬೌದ್ಧ ಧರ್ಮದ ಮಹಾಯಾನ ಪಂಥಕ್ಕೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


50 ಗುಹೆಗಳಲ್ಲಿ 26 ಗುಹೆ ಪತ್ತೆ
ಬಾಂಧವ್‌ಗಢ್‌ನ 1,100 ಚದರ ಕಿಲೋಮೀಟರ್ ಪ್ರದೇಶದಲ್ಲಿ ಪರಿಶೋಧನೆ ಮಾಡಲಾಗಿದ್ದು, ಇಲ್ಲಿ ಇನ್ನೂ 50 ಗುಹೆಗಳಿದ್ದು. ನಾವು 26 ಗುಹೆಗಳನ್ನು ಪತ್ತೆಹಚ್ಚಿದ್ದೇವೆ" ಎಂದು ಎಎಸ್‌ಐ, ಜಬಲ್‌ಪುರ ವೃತ್ತದ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಶಿವಕಾಂತ್ ಬಾಜ್‌ಪೈ ಹೇಳಿದರು.


26 ಹೊಸ ಶಾಸನ ಲಭ್ಯ
"ಮಹಾಯಾನ ಪಂಥದ ಬೌದ್ಧ ಸನ್ಯಾಸಿಗಳನ್ನು ಹೋಲುವ ಕಲ್ಲಿನ ಹಾಸಿಗೆಗಳು ಮತ್ತು ದಿಂಬಿನ ರಚನೆಗಳು ಕಂಡುಬಂದಿವೆ. ಬ್ರಾಹ್ಮಿಯಲ್ಲಿ ರಾಜರ ಹೆಸರನ್ನು ಉಲ್ಲೇಖಿಸುವ 26 ಹೊಸ ಶಾಸನಗಳನ್ನು ನಾವು ಕಂಡುಕೊಂಡಿದ್ದೇವೆ. ಮಥುರಾ ಮತ್ತು ಕೌಶಾಂಬಿಯನ್ನು ಶಾಸನದ ಮೇಲೆ ಉಲ್ಲೇಖಿಸಲಾಗಿದೆ. ಇನ್ನೂ ಕೆಲ ಹೆಸರುಗಳಿದ್ದು, ಅವುಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ" ಎಂದು ಅವರು ಹೇಳಿದರು.


ಕರ್ನಾಟಕಕ್ಕೂ ಇದೆ ನಂಟು?
1969 ರಲ್ಲಿ ಹುಲಿ ಸಂರಕ್ಷಿತ ಪ್ರದೇಶವಾಗುವ ಮೊದಲು ಈ ಗುಹೆಗಳನ್ನು ಕಲ್ಚುರಿ ರಾಜರು ಬಾಘೆಲ್ ಆಡಳಿತಗಾರರಿಗೆ ಉಡುಗೊರೆಯಾಗಿ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ. ವಿಶೇಷವಾಗಿ ಕೆಲವು ಗುಹೆಗಳಲ್ಲಿ ಕರ್ನಾಟಕದ ಅಲಿಗುಳಿ ಮನೆಯನ್ನು ಹೋಲುವ ಬೋರ್ಡ್ ಆಟಗಳ ಕೆತ್ತನೆಗಳೂ ಸಜ ಲಭ್ಯವಾಗಿವೆಯಂತೆ.


ಇದನ್ನೂ ಓದಿ: Navaratri Special: ಈ ದೇಗುಲದ ವಿಗ್ರಹ, ಗೋಡೆ, ನೆಲವೆಲ್ಲ 8 ಕೋಟಿ ರೂಪಾಯಿ ನೋಟ್‌ನಿಂದ ಅಲಂಕಾರ!


ಈ ಪ್ರದೇಶದಲ್ಲಿ ಬೌದ್ಧಧರ್ಮವು ಪ್ರವರ್ಧಮಾನಕ್ಕೆ ಬಂದಾಗ ಮತ್ತು ಮಾಘ ರಾಜವಂಶವು ಆಳುತ್ತಿದ್ದಾಗ ಈ ಗುಹೆಗಳನ್ನು ನಿರ್ಮಿಸಲಾಗಿದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೇಳಿದೆ. ಅಧ್ಯಯನ ನಡೆಸುತ್ತಿರುವ ಕೆಲವು ಗುಹೆಗಳಲ್ಲಿ ಕೆಲವು ಉದ್ಯಮಿಗಳು ಮತ್ತು ದಾನಿಗಳ ಹೆಸರನ್ನು ಕೆತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಗುಹೆಗಳಲ್ಲಿ ಬ್ರಾಹ್ಮಿ, ಶಂಖಲಿಪಿ ಮತ್ತು ನಾಗರಿ ಮುಂತಾದ ಹಳೆಯ ಲಿಪಿಗಳಲ್ಲಿನ ಮ್ಯೂರಲ್ ಶಾಸನಗಳು ಸಹ ಕಂಡುಬಂದಿವೆ. ತಂಡವು ಪ್ರಾಚೀನ ದೇವಾಲಯಗಳ ಅವಶೇಷಗಳನ್ನು ಸಹ ದಾಖಲಿಸಿದೆ, ಅವುಗಳಲ್ಲಿ ಒಂದನ್ನು ಕವಿ ಕಬೀರ್‌ಗೆ ಸಮರ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.


ವಿಷ್ಣುವಿನ 10 ಅವತಾರಗಳ ಏಕಶಿಲೆ ಪತ್ತೆ
ಮೇ 20ರಿಂದ ಜೂನ್ 27ರವರೆಗೆ ನಡೆಸಿದ ಉತ್ಖನನದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜಬಲ್ಪುರ್ ವಲಯದಲ್ಲಿ ಕೂಡಾ ಅನೇಕ ಪ್ರಾಚೀನ ಶಿಲ್ಪಗಳು ದೊರೆತಿರುವುದಾಗಿ ವರದಿ ನೀಡಿತ್ತು.
ಸ್ಥಳದಲ್ಲಿ ಹಿಂದೂ ದೇವತೆಗಳ ಶಿಲ್ಪಗಳು ಸಹ ಕಂಡುಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪುರಾತತ್ವ ಇಲಾಖೆಯ ಜಬಲ್‌ಪುರ್ ವೃತ್ತವು ಅನೇಕ ಪ್ರಾಚೀನ ಶಿಲ್ಪಗಳನ್ನು ವರದಿ ಮಾಡಿದೆ. ಕಲಚೂರಿ ಕಾಲಕ್ಕೆ ಸೇರಿದ ಭಗವಾನ್ ವಿಷ್ಣುವಿನ 10 ಅವತಾರಗಳ ಏಕಶಿಲೆಯ ರಚನೆ, ವಿಷ್ಣುವಿನ ವಿವಿಧ ಅವತಾರಗಳಾದ 'ವರಾಹ' ಮೂರ್ತಿಯೂ ಸೇರಿದಂತೆ ಬೇರೆ ಶಿಲ್ಪಗಳು ದೊರೆತಿವೆ. ಅಲ್ಲದೇ ಪ್ರಾಚೀನ ಮತ್ತು ಮಧ್ಯಕಾಲೀನ ಕಾಲದ ಕುಂಬಾರಿಕೆ ಮತ್ತು ನಾಣ್ಯಗಳು ಸಹ ಲಭ್ಯವಾಗಿದೆ.


ಇದನ್ನೂ ಓದಿ: 5G Network: 5ಜಿ ಎಂದರೆ 5 ಪ್ರಮುಖ ಗುರಿ! ಇದು ದೇಶದ ಅಭಿವೃದ್ಧಿ ಪಥ ಎಂದ ಮುಕೇಶ್ ಅಂಬಾನಿ


ಪುರಾತತ್ವಶಾಸ್ತ್ರಜ್ಞ ಎನ್. ಪಿ ಚಕ್ರವರ್ತಿ ಅವರು 1938 ರಲ್ಲಿ ನಡೆಸಿದ ಅನ್ವೇಷಣೆಯ ನಂತರ ಬಾಂಧವ್‌ಗಢ್‌ ಅನ್ನು ಮೊದಲ ಬಾರಿಗೆ ಎಎಸ್‌ಐ ಪರಿಶೋಧಿಸಿದೆ. ಅಲ್ಲಿ ಅನೇಕ ರಚನೆಗಳನ್ನು ದಾಖಲಿಸಲಾಗಿದೆ. ಇಲಾಖೆ ಪುರಾತನ ಗುಹೆಗಳು, ದೇವಾಲಯಗಳು, ಬೌದ್ಧ ಅವಶೇಷಗಳು, ಗಣಿತ, ಶಿಲ್ಪಗಳು, ಜಲಮೂಲಗಳು, ಮ್ಯೂರಲ್ ಶಾಸನಗಳು ಸೇರಿದಂತೆ ಹೆಚ್ಚಿನ ರಚನೆಗಳನ್ನು ಕಂಡುಕೊಂಡಿದ, ಇನ್ನೂ ಕೆಲ ಪತ್ತೆಯಾದ ವಸ್ತುಗಳ ಮೇಲೆ ಅಧ್ಯಯನ ನಡೆಯುತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published: