ಆರ್ಥಿಕ ಕುಸಿತದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಡೆತ; 5 ದಿನ ಉತ್ಪಾದನೆ ನಿಲ್ಲಿಸಿದ ಅಶೋಕ್ ಲೇಲ್ಯಾಂಡ್

ಕಮರ್ಷಿಯಲ್ ವಾಹನಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆರ್ಥಿಕ ಮುಗ್ಗಟ್ಟನ್ನು ನಿಯಂತ್ರಿಸಲು ಸರ್ಕಾರದಿಂದ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

Sushma Chakre | news18-kannada
Updated:September 9, 2019, 6:50 PM IST
ಆರ್ಥಿಕ ಕುಸಿತದಿಂದ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಡೆತ; 5 ದಿನ ಉತ್ಪಾದನೆ ನಿಲ್ಲಿಸಿದ ಅಶೋಕ್ ಲೇಲ್ಯಾಂಡ್
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ.6): ಆಟೋಮೊಬೈಲ್ ಕ್ಷೇತ್ರದಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದು, ಅಶೋಕ್ ಲೇಲ್ಯಾಂಡ್​ ಕಂಪನಿಯ ಚೆನ್ನೈ ಕೇಂದ್ರ ಕಚೇರಿಯಲ್ಲಿ 5 ದಿನಗಳ ಕಾಲ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಉದ್ಯೋಗಿಗಳಿಗೆ ನೋಟೀಸ್​ ನೀಡಲಾಗಿದ್ದು, ಇಂದು, ನಾಳೆ, ಸೆ. 10 ಮತ್ತು 11ರಂದು ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುವುದಿಲ್ಲ. ಸೆ. 9ರಂದು ರಜೆ ಇರುವುದರಿಂದ ಒಟ್ಟು 5 ದಿನಗಳ ಕಾಲ ಅಶೋಕ್ ಲೇಲ್ಯಾಂಡ್​ ಕಚೇರಿ ಮುಚ್ಚಲ್ಪಟ್ಟಿರುತ್ತದೆ ಎಂದು ತಿಳಿಸಲಾಗಿದೆ. ಕಳೆದ ತಿಂಗಳು ಅಶೋಕ್ ಲೇಲ್ಯಾಂಡ್ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ. 50ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿತ್ತು.

ನಿನ್ನೆಯಷ್ಟೇ ಮಾರುತಿ ಸುಜುಕಿ ಕೂಡ ಗುರುಗ್ರಾಮ ಪ್ರೊಡಕ್ಷನ್ ಯೂನಿಟ್​ಗಳಲ್ಲಿ ಸೆ. 7 ಮತ್ತು 8ರಂದು ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಮಾರುತಿ ಸುಜುಕಿ ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದ್ದರೂ ಉತ್ಪಾದನೆಯಲ್ಲಿ ಆಗಸ್ಟ್​ನಲ್ಲಿ ಶೇ. 33.99ರಷ್ಟು ಕುಸಿತ ಕಂಡಿತ್ತು.

ಸಸ್ಯಾಹಾರಿಗಳಿಗೆ ಎಮ್ಮೆ ಮಾಂಸ ಬಡಿಸಿದ 43 ಮಂದಿ ವಿರುದ್ಧ ಎಫ್​ಐಆರ್​ ದಾಖಲು

ಮಾರುತಿ ಸುಜುಕಿ ಕಂಪನಿಯು ಕಳೆದ ತಿಂಗಳಲ್ಲಿ 1,11,370 ಯೂನಿಟ್​ಗಳನ್ನು ಉತ್ಪಾದನೆ ಮಾಡಿತ್ತು. ಕಳೆದ ವರ್ಷದ ಇದೇ ತಿಂಗಳಲ್ಲಿ ಕಂಪನಿ 1,68,725 ಯೂನಿಟ್​ಗಳನ್ನು ಉತ್ಪಾದಿಸಿತ್ತು ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ಸೋಮವಾರ ಬಿಎಸ್​ಇಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ಪ್ರಯಾಣಿಕರ ವಾಹನದಲ್ಲಿ ಕಳೆದ ತಿಂಗಳು 1,10,214 ಯೂನಿಟ್​ಗಳನ್ನು ಉತ್ಪಾದಿಸಲಾಗಿದೆ. ಕಳೆದ ವರ್ಷದ ಇದೇ ತಿಂಗಳಲಿನಲ್ಲಿ 1,66,161 ಯೂನಿಟ್​ಗಳನ್ನು ಉತ್ಪಾದಿಸಲಾಗಿತ್ತು.

ಕಮರ್ಷಿಯಲ್ ವಾಹನಗಳ ಉತ್ಪಾದನೆಯಲ್ಲಿ ಗಣನೀಯ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆರ್ಥಿಕ ಮುಗ್ಗಟ್ಟನ್ನು ನಿಯಂತ್ರಿಸಲು ಸರ್ಕಾರದಿಂದ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಆಟೋಮೊಬೈಲ್ ಕ್ಷೇತ್ರಕ್ಕೆ ಜಿಎಸ್​ಟಿ ದರ ಕಡಿಮೆ ಮಾಡುವ ಬಗ್ಗೆಯೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.

ಒಂದು ಕೇಕ್, ಎರಡು ಬಲಿ; ಹುಟ್ಟುಹಬ್ಬದ ದಿನವೇ ತೆಲಂಗಾಣದ ಬಾಲಕ ಸಾವುಪೆಟ್ರೋಲ್, ಡೀಸೆಲ್ ಕಾರು ಬ್ಯಾನ್ ಆಗಲ್ಲ:

5 ಲಕ್ಷ ಕೋಟಿ ರೂ. ಮೌಲ್ಯದ 68 ರಸ್ತೆ ಯೋಜನೆಗಳನ್ನು ಮುಂದಿನ 3 ತಿಂಗಳೊಳಗೆ ಘೋಷಿಸುವ ಬಗ್ಗೆ ಸಚಿವ ನಿತಿನ್ ಗಡ್ಕರಿ ಚಿಂತನೆ ನಡೆಸಿದ್ದಾರೆ. ಈ ಮೂಲಕ ಕಮರ್ಟಿಯಲ್ ವಾಹನಗಳಿಗೆ ಬೇಡಿಕೆ ಸೃಷ್ಟಿಸುವ ಉದ್ದೇಶ ನಿತಿನ್ ಗಡ್ಕರಿ ಅವರದ್ದು. ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವ ಬಗ್ಗೆ ಚರ್ಚೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದಲೂ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಡೆತ ಬಿದ್ದಿರಬಹುದು. ಆದರೆ, ಸರ್ಕಾರದ ಮುಂದೆ ಅಂತಹ ಯಾವ ಪ್ರಸ್ತಾವನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading