ಚುನಾವಣಾ ಆಯುಕ್ತ ಅಶೋಕ್ ಲವಾಸಾ ಮಗನ ವಿರುದ್ಧ ಇಡಿ ಪ್ರಕರಣ ದಾಖಲು

2019ರ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದಿಂದ ಜಾರಿಯಾದ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಅಥವಾ ನೀತಿ ಸಂಹಿತೆಯ ಕೆಲ ಅಂಶಗಳ ಬಗ್ಗೆ ಅಶೋಕ್ ಲವಾಸ ಅಪಸ್ವರ ಎತ್ತಿದ್ದರು.

Vijayasarthy SN | news18
Updated:November 12, 2019, 7:25 PM IST
ಚುನಾವಣಾ ಆಯುಕ್ತ ಅಶೋಕ್ ಲವಾಸಾ ಮಗನ ವಿರುದ್ಧ ಇಡಿ ಪ್ರಕರಣ ದಾಖಲು
ಅಶೋಕ್ ಲವಾಸ
  • News18
  • Last Updated: November 12, 2019, 7:25 PM IST
  • Share this:
ನವದೆಹಲಿ(ನ. 12): ಕಳೆದ ಬಾರಿಯ ಲೋಕಸಭಾ ಚುನಾವಣೆಯ ವೇಳೆ, ನೀತಿ ಸಂಹಿತೆ ಜಾರಿ ವಿಚಾರದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರ ಕುಟುಂಬ ಸದಸ್ಯರಿಗೆ ಈಗ ಇಡಿ ಕುಣಿಕೆ ಬಿದ್ದಿದೆ. ವಿದೇಶೀ ವಿನಿಮಯ ನಿಯಾವಳಿ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಅಶೋಕ್ ಲವಾಸಾ ಅವರ ಮಗ ಆಬಿರ್ ವಿರುದ್ಧ ಜಾರಿ ನಿರ್ದೇಶನಾಲಯದ ಕುಣಿಕೆ ಸುತ್ತಿಕೊಂಡಿದೆ. ಆಬಿರ್ ಅವರು ನಿರ್ದೇಶಕರಾಗಿರುವ ನೌರಿಶ್ ಆರ್ಗ್ಯಾನಿಕ್ ಫೂಡ್ಸ್ ಎಂಬ ಸಂಸ್ಥೆ ಈ ವರ್ಷ 7.25 ಕೋಟಿ ರೂ ಹೂಡಿಕೆ ಪಡೆದ ಬಗ್ಗೆ ಸಂಶಯಪಟ್ಟಿರುವ ಇಡಿ, ಫೆಮಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

ಮಾರಿಷಸ್ ದೇಶದ ಸಾಮಾ ಕ್ಯಾಪಿಟಲ್ ಎಂಬ ಸಂಸ್ಥೆಯಿಂದ ಈ ಹಣ ಬಂದಿರುವುದು ತಿಳಿದುಬಂದಿದೆ. ಈ ವ್ಯವಹಾರದಲ್ಲಿ ಫೆಮಾ (ವಿದೇಶೀ ವಿನಿಮಯ ನಿರ್ವಹಣೆ ಕಾಯ್ದೆ) ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆಯಾ ಎಂಬ ನಿಟ್ಟಿನಲ್ಲಿ ತನಿಖೆಯಾಗುತ್ತಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ನಂತರ ಜಾರ್​ಖಂಡ್​ನಲ್ಲೂ ಬಿಜೆಪಿ ಸಖ್ಯ ತೊರೆದ ಅಂಗಪಕ್ಷ; ಚುನಾವಣೆಯಲ್ಲಿ ಬಿಜೆಪಿ ಜತೆ ಎಲ್​ಜೆಪಿ ಮೈತ್ರಿಯಿಲ್ಲ

ಕೆಲ ತಿಂಗಳ ಹಿಂದೆ ಅಶೋಕ್ ಲವಾಸಾ ಅವರ ಪತ್ನಿ ನೋವೆಲ್ ಸಿಂಘಲ್ ವಿರುದ್ಧ ತೆರಿಗೆ ವಂಚನೆಯ ಆರೋಪ ಕೇಳಿಬಂದಿತ್ತು. ಹತ್ತು ಕಂಪನಿಗಳಲ್ಲಿ ಆಕೆ ನಿರ್ದೇಶಕಿಯಾಗಿದ್ದಾರೆ. ಈ ಬಗ್ಗೆ ಐಟಿ ರಿಟರ್ನ್ಸ್​ನಲ್ಲಿ ಒದಗಿಸಿರುವ ಮಾಹಿತಿ ಬಗ್ಗೆ ತೆರಿಗೆ ಇಲಾಖೆ ವಿವರಣೆ ಕೋರಿ ನೋಟೀಸ್ ನೀಡಿತ್ತು. ಆಕೆಯ ಐಟಿಆರ್​ಗಳನ್ನು ಪರಿಶೀಲಿಸುವಾಗ ಅಶೋಕ್ ಲವಾಸಾ ಅವರ ಕುಟುಂಬದ ಇತರ ಸದಸ್ಯರ ವ್ಯವಹಾರದ ಸುಳಿವು ಸಿಕ್ಕಿದೆ.

ಈಗ ಅವರ ಮಗ ನಿರ್ದೇಶಕನಾಗಿರುವ ಕಂಪನಿಯ ವ್ಯವಹಾರಗಳನ್ನು ಇಡಿ ಜಾಲಾಡಲು ಪ್ರಾರಂಭಿಸಿದೆ. ಇಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅಶೋಕ್ ಲವಾಸ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭೀಮಾ ಕೊರೆಗಾಂವ್​ ಪ್ರಕರಣ: ಮಾನವ ಹಕ್ಕು ಹೋರಾಟಗಾರ ಗೌತಮ್ ನವಲಾಖರ ನಿರೀಕ್ಷಣಾ ಜಾಮೀನು ತಿರಸ್ಕಾರ

ಕೇಂದ್ರ ಹಣಕಾಸು ಕಾರ್ಯದರ್ಶಿಯಾಗಿದ್ದ ಅಶೋಕ್ ಲವಾಸ ಅವರು ನಿವೃತ್ತರಾದ ಬಳಿಕ 2018, ಜ. 13ರಂದು ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದರು. ಭಾರತೀಯ ಚುನಾವಣಾ ಆಯೋಗದಲ್ಲಿರುವ ಇಬ್ಬರು ಚುನಾವಣಾ ಆಯುಕ್ತರಲ್ಲಿ ಅವರೂ ಒಬ್ಬರು. ಸುಶೀಲ್ ಚಂದ್ರ ಮತ್ತೊಬ್ಬ ಆಯುಕ್ತರಾಗಿದ್ದಾರೆ. ಸುನೀಲ್ ಅರೋರಾ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ.2019ರ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದಿಂದ ಜಾರಿಯಾದ ಮಾಡೆಲ್ ಕೋಡ್ ಆಫ್ ಕಂಡಕ್ಟ್ ಅಥವಾ ನೀತಿ ಸಂಹಿತೆಯ ಕೆಲ ಅಂಶಗಳ ಬಗ್ಗೆ ಅಶೋಕ್ ಲವಾಸ ಅಪಸ್ವರ ಎತ್ತಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 12, 2019, 7:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading