• Home
  • »
  • News
  • »
  • national-international
  • »
  • Rajasthan Congress: ಖರ್ಗೆ 'ಟೆನ್ಷನ್' ಹೆಚ್ಚಿಸಿದ ಪೈಲಟ್ ನಡೆ, ರಾಜಸ್ಥಾನದಲ್ಲಿ ಕಾಂಗ್ರೆಸ್​ ಮುಂದಿನ ನಡೆ ಏನು?

Rajasthan Congress: ಖರ್ಗೆ 'ಟೆನ್ಷನ್' ಹೆಚ್ಚಿಸಿದ ಪೈಲಟ್ ನಡೆ, ರಾಜಸ್ಥಾನದಲ್ಲಿ ಕಾಂಗ್ರೆಸ್​ ಮುಂದಿನ ನಡೆ ಏನು?

ರಾಜಸ್ಥಾನ ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು

ರಾಜಸ್ಥಾನ ಕಾಂಗ್ರೆಸ್​ನಲ್ಲಿ ಬಿಕ್ಕಟ್ಟು

ರಾಜಸ್ಥಾನ ಬಿಕ್ಕಟ್ಟು ಕಾಂಗ್ರೆಸ್​ ಹೈಕಮಾಂಡ್​ ಪಾಲಿಗೆ ಕುಣಿಕೆಯಂತಾಗಿದ್ದು, ದಿನಗಳೆದಂತೆ ಇದು ಮತ್ತಷ್ಟು ಬಿಗಿಯಾಗುತ್ತಿದೆ. ಹೌದು ಕಾಂಗ್ರೆಸ್​ನ ನೂತನ ಸಾರಥಿಯಾಗಿ ಖರ್ಗೆ ಅಧಿಕಾರ ವಹಿಸಿ ಇನ್ನೂ ಒಂದು ತಿಂಗಳು ಕಳೆದಿಲ್ಲ, ಅಷ್ಟರಲ್ಲಾಗಲೇ ಮತ್ತೆ ಗೆಹ್ಲೋಟ್​ ಹಾಗೂ ಪೈಲಟ್​ ನಡುವಿನ ಅಸಮಾಧಾನ ಮತ್ತೆ ಸದ್ದು ಮಾಡಿದೆ. ಕಾಂಗ್ರೆಸ್​ ಹೊಸ ಬಾಸ್ ಈ ಬಿಕ್ಕಟ್ಟನ್ನು ಹೇಗೆ ಶಮನಗೊಳಿಸುತ್ತಾರೆಂಬುವುದೇ ಸದ್ಯದ ಕುತೂಹಲ.

ಮುಂದೆ ಓದಿ ...
  • News18 Kannada
  • Last Updated :
  • Jaipur, India
  • Share this:

ನವದೆಹಲಿ(ನ.02): ಇತ್ತೀಚೆಗಿನ ಚುನಾವಣೆಯ ಮೂಲಕ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) )ಅವರ ಟೆನ್ಷನ್ ಸದ್ಯದಲ್ಲೇ ಹೆಚ್ಚಾಗಲಿದೆ, ಏಕೆಂದರೆ ರಾಜಸ್ಥಾನದಲ್ಲಿ ಪಕ್ಷದೊಳಗಿನ ರಾಜಕೀಯ ಗದ್ದಲ ಇನ್ನೂ ಮುಗಿದಿಲ್ಲ. ಕಾಂಗ್ರೆಸ್‌ನ ನೂತನ ಅಧ್ಯಕ್ಷ (AICC President) ಮಲ್ಲಿಕಾರ್ಜುನ ಖರ್ಗೆ ಎದುರಿಸಲಿರುವ ಹಲವು ಸವಾಲುಗಳಲ್ಲಿ ರಾಜಸ್ಥಾನ ಬಿಕ್ಕಟ್ಟು (Rajasthan Political Crisis) ಕೂಡಾ ಸೇರಿದ್ದು, ಪಕ್ಷದೊಳಗಿನ ಆಂತರಿಕ ಕಚ್ಚಾಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸಚಿನ್ ಪೈಲಟ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್​ ಸಾರಥಿಯ ಟೆನ್ಷನ್ ಹೆಚ್ಚಿದ್ದು, ಸಚಿನ್ ಪೈಲಟ್ ಅವರು ಪಕ್ಷದೊಳಗೆ ತಮ್ಮ ಪಾತ್ರವನ್ನು ಸ್ಪಷ್ಟಪಡಿಸಬೇಕೆಂದು ಬಯಸಿದ್ದಾರೆ.


ನ್ಯೂಸ್ 18 ವರದಿ ಪ್ರಕಾರ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ರಾಜಸ್ಥಾನದ ಬಿಕ್ಕಟ್ಟಿಗೆ ಶೀಘ್ರ ಪರಿಹಾರವನ್ನು ಕೋರಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಸಚಿನ್ ಪೈಲಟ್ ಅವರು ಪಕ್ಷದಲ್ಲಿ ತಮ್ಮ ಭವಿಷ್ಯದ ಪಾತ್ರದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ ಎನ್ನಲಾಗಿದೆ. ಹೀಗಿರುವಾಗ ಗೆಹ್ಲೋಟ್ ಪಾಳಯ ಮತ್ತು ಪೈಲಟ್ ಶಿಬಿರ ಎರಡಕ್ಕೂ ಸಮಾಧಾನವಾಗುವಂತೆ ರಾಜಸ್ಥಾನದ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂಬುದು ಖರ್ಗೆ ಅವರ ಮುಂದಿರುವ ಸವಾಲು. ಹಿಂದಿನ ಬೆಳವಣಿಗೆಗಳ ನಂತರ ಅಶೋಕ್ ಗೆಹ್ಲೋಟ್ ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ: Narendra Modi: ಒಂದು ರ‍್ಯಾಲಿಯಿಂದ ಮೂರು ರಾಜ್ಯಗಳ ವೋಟ್​ಬ್ಯಾಂಕ್​ ಮೇಲೆ ಬಿಜೆಪಿ ಕಣ್ಣು!


ಮತಯ್ತೆ ಗೆಹ್ಲೋಟ್​ ವರ್ಸಸ್​ ಪೈಲಟ್


ಈ ಹಿಂದೆ ಗೆಹ್ಲೋಟ್ ಮತ್ತು ಪೈಲಟ್ ಬಣದ ನಡುವಿನ ವಿವಾದವು ಬಿಸಿಯಾದಾಗ, ರಾಜಸ್ಥಾನ ಘಟಕದ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ವೀಕ್ಷಕರಾಗಿ ಅಜಯ್ ಮಾಕನ್ ಅವರೊಂದಿಗೆ ರಾಜಸ್ಥಾನಕ್ಕೆ ಹೋಗಿದ್ದರು ಮತ್ತು ಆ ಸಮಯದಲ್ಲಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಗೆ ಈ ವಿಚಾರವಾಗಿ ತಮ್ಮ ವರದಿ ಸಲ್ಲಿಸಿದ್ದರು. ಆ ವರದಿ ಮುನ್ನೆಲೆಗೆ ಬಂದ ನಂತರ ಅಶೋಕ್ ಗೆಹ್ಲೋಟ್ ವಿರುದ್ಧ ಸೋನಿಯಾ ಗಾಂಧಿ ಮುನಿಸಿಕೊಂಡಿದ್ದಾರೆ ಎಂಬ ವಿಚಾರ ಸದ್ದು ಮಾಡಿತ್ತು. ಇದೇ ಕಾರಣಕ್ಕೆ ಅಶೋಕ್ ಗೆಹ್ಲೋಟ್ ಪತ್ರ ಬರೆದು ಕ್ಷಮೆ ಯಾಚಿಸಿದ್ದರು.
ಗೆಹ್ಲೋಟ್, ಪೈಲಟ್ ನಡುವಿನ ಮುನಿಸು ಇಂದು ನಿನ್ನೆಯದಲ್ಲ


ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಕಳೆದ ಹಲವು ತಿಂಗಳುಗಳಿಂದ ಪವರ್ ಪಾಲಿಟಿಕ್ಸ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ನಾಯಕತ್ವಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಅವರ ಮುಂದಿರುವ ದೊಡ್ಡ ಮತ್ತು ಮೊದಲ ಸವಾಲು ರಾಜಸ್ಥಾನದಲ್ಲಿ ಗೆಹ್ಲೋಟ್ ವಿರುದ್ಧ ಪೈಲಟ್ ವಿವಾದವನ್ನು ಹೇಗಾದರೂ ಬಗೆಹರಿಸುವುದಾಗಿದೆ, ಏಕೆಂದರೆ ಮುಂದಿನ ವರ್ಷಾಂತ್ಯದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯೂ ನಡೆಯಲಿದೆ.


24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ಅಧ್ಯಕ್ಷ


ಅಕ್ಟೋಬರ್ 26 ರಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಅಧ್ಯಕ್ಷರಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ 24 ವರ್ಷಗಳ ನಂತರ ಗಾಂಧಿ ಕುಟುಂಬದ ಹೊರಗಿನ ನಾಯಕರೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ 80 ವರ್ಷದ ಖರ್ಗೆ ಅವರು ಅಕ್ಟೋಬರ್ 17 ರಂದು ನಡೆದ ಐತಿಹಾಸಿಕ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಶಶಿ ತರೂರ್ (66) ಅವರನ್ನು ಸೋಲಿಸಿದರು. ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು.


ಇದನ್ನೂ ಓದಿ: ISIS Terrorist: ಭಾರತದ ಮಹಾನಾಯಕನ ಹತ್ಯೆಗೆ ಸ್ಕೆಚ್, ರಷ್ಯಾದಲ್ಲಿ ಐಸಿಸ್ ಬಾಂಬರ್ ಅರೆಸ್ಟ್!


ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲೂ ಸವಾಲು


ಪಕ್ಷವು ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಮಯದಲ್ಲಿ ಖರ್ಗೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಪ್ರಸ್ತುತ ಎರಡು ರಾಜ್ಯಗಳಲ್ಲಿ ಮಾತ್ರ ಸ್ವಂತ ಬಲದಲ್ಲಿ ಅಧಿಕಾರದಲ್ಲಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ ವಿಧಾನಸಭಾ ಚುನಾವಣೆಗಳನ್ನು ತಕ್ಷಣವೇ ಎದುರಿಸಬೇಕಾಗಿದೆ. ಎರಡೂ ರಾಜ್ಯಗಳಲ್ಲಿ ಅದು ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಯೊಂದಿಗೆ ಸ್ಪರ್ಧಿಸಬೇಕಾಗಿದೆ.

Published by:Precilla Olivia Dias
First published: