ಪ್ರಜಾಪ್ರಭುತ್ವವನ್ನು ಉಳಿಸುವ ನಮ್ಮ ಹೋರಾಟ ಮುಂದುವರೆಯಲಿದೆ; ಅಶೋಕ್‌ ಗೆಹ್ಲೋಟ್‌ ಅಭಿಮತ

Ashok Gehlot: ಮುಂದಿನ ದಿನಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ದೂರ ಹೋದ ನಮ್ಮ ಸ್ನೇಹಿತರು ಈಗ ಮತ್ತೆ ಹಿಂತಿರುಗಿದ್ದಾರೆ. ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತೇವೆ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ಈಡೇರಿಸುತ್ತೇವೆ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ತಿಳಿಸಿದ್ದಾರೆ.

MAshok Kumar | news18-kannada
Updated:August 12, 2020, 4:16 PM IST
ಪ್ರಜಾಪ್ರಭುತ್ವವನ್ನು ಉಳಿಸುವ ನಮ್ಮ ಹೋರಾಟ ಮುಂದುವರೆಯಲಿದೆ; ಅಶೋಕ್‌ ಗೆಹ್ಲೋಟ್‌ ಅಭಿಮತ
ಅಶೋಕ್‌ ಗೆಹ್ಲೋಟ್‌.
  • Share this:
ಜೈಪುರ (ಆಗಸ್ಟ್‌ 12); ಕಳೆದ ಒಂದೂವರೆ ತಿಂಗಳಿನಿಂದ ಜಿದ್ದಾಜಿದ್ದಿ ಅಖಾಡವಾಗಿದ್ದ ರಾಜಸ್ಥಾನ ಕಾಂಗ್ರೆಸ್ ಕೊನೆಗೂ ರಾಹುಲ್ ಗಾಂಧಿ ಮಧ್ಯಪ್ರವೇಶದೊಂದಿಗೆ ಸುಖಾಂತ್ಯವಾಗಿದೆ. ಅಧಿಕಾರವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸತತ ಹೋರಾಟದ ನಡುವೆ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ರಾಜಸ್ಥಾನದ ಪ್ರಕ್ಷುಬ್ದತೆ “ಮುಗಿದ ಅಧ್ಯಾಯ” ಎಂದು ಘೋಷಿಸಿದ ಬೆನ್ನಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, “ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ ಮುಂದುವರಿಯಲಿದೆ” ಎಂದು ಭರವಸೆ ನೀಡಿದ್ದಾರೆ.

ಬಂಡಾಯ ನಾಯಕ ಸಚಿನ್ ಪೈಲಟ್ ರಾಹುಲ್ ಗಾಂಧಿ ಜೊತೆಗೆ ಸೋಮವಾರ ಸಭೆ ನಡೆಸಿದ ನಂತರ ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟು ಶಮನಗೊಂಡಿದೆ. ಈ ವೇಳೆ ಕಾಂಗ್ರೆಸ್ ಬಂಡಾಯ ಶಾಸಕರು ತಮ್ಮ ಉನ್ನತ ನಾಯಕರನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಕುಂದು-ಕೊರತೆಗಳನ್ನು ಸಮಯಕ್ಕೆ ತಕ್ಕಂತೆ ಪರಿಹರಿಸಲಾಗುವುದು ಎಂದು ಭರವಸೆ ನೀಡಲಾಗಿದೆ.

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಮೂರು ಸದಸ್ಯರ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದರು. ಈ ಸಮಿತಿ ಬಂಡಾಯ ನಾಯಕರ ಕುಂದುಕೊರತೆಗಳನ್ನು ಆಲಿಸಲಿದೆ ಎಂದು ಭರವಸೆ ನೀಡಿದ ನಂತರ ಬಂಡಾಯ ಸಂಪೂರ್ಣವಾಗಿ ಶಮನವಾಗಿದೆ ಎನ್ನಲಾಗುತ್ತಿದೆ.

ಈ ಬಂಡಾಯ ಶಮನದ ಕುರಿತು ಮಾತನಾಡಿರುವ ಅವರು, “ನಮ್ಮ ಎಲ್ಲ ಶಾಸಕರು ಇಷ್ಟು ದಿನ ಒಟ್ಟಿಗೆ ಇದ್ದರು. ಇದು ರಾಜಸ್ಥಾನದ ಜನರ ಗೆಲುವು. ರಾಜ್ಯದ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ. ಶಾಸಕರು ಅಸಮಾಧಾನಗೊಳ್ಳುವುದು ಸಾಮಾನ್ಯ. ಆದರೆ, ಇದು ಈಗ ಮುಗಿದ ಅಧ್ಯಾಯ. ರಾಷ್ಟ್ರ, ರಾಜ್ಯ, ಜನರಿಗೆ ಸೇವೆ ಸಲ್ಲಿಸಲು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಕೆಲವೊಮ್ಮೆ ಸಹಿಷ್ಣುತೆ ವಹಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : Rajasthan Political Crisis: ರಾಹುಲ್ ಗಾಂಧಿ ಸಚಿನ್ ಪೈಲಟ್‌ ದಿಢೀರ್‌ ಭೇಟಿ; ಹಳಿಗೆ ಮರಳಲಿದೆಯೇ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರ?

ಅಲ್ಲದೆ, “ಮುಂದಿನ ದಿನಗಳಲ್ಲಿ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ. ದೂರ ಹೋದ ನಮ್ಮ ಸ್ನೇಹಿತರು ಈಗ ಮತ್ತೆ ಹಿಂತಿರುಗಿದ್ದಾರೆ. ನಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತೇವೆ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸುವ ನಮ್ಮ ಸಂಕಲ್ಪವನ್ನು ಈಡೇರಿಸುತ್ತೇವೆ ಎಂದು ನಾನು ಭಾವಿಸುತ್ತೇನೆ" ಎಂದು ಗೆಹ್ಲೋಟ್ ಆಶ್ವಾಸನೆ ನೀಡಿದ್ದಾರೆ.
ಇದೀಗ ಮತ್ತೆ ಪಕ್ಷದ ಜೊತೆಗೆ ಒಂದಾಗಿರುವ ಮಾಜಿ ಡಿಸಿಎಂ ಅಶೋಕ್‌ ಪೈಲಟ್‌ ಯಾವುದೇ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಲಾಗುತ್ತಿದೆ.
Published by: MAshok Kumar
First published: August 12, 2020, 3:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading