ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜಸ್ಥಾನ ಸರ್ಕಾರ

ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಅನೇಕ ರಾಜ್ಯಗಳು ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಅನ್ನು ವಿರೋಧಿಸಿವೆ. ಅಶೋಕ್ ಗೆಹ್ಲೋಟ್ ಅವರಂತೂ ಆರಂಭದಿಂದಲೂ ಸಿಎಎಗೆ ಕಡುವಿರೋಧಿಯಾಗಿದ್ಧಾರೆ.

Vijayasarthy SN | news18
Updated:March 16, 2020, 5:25 PM IST
ಸಿಎಎ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜಸ್ಥಾನ ಸರ್ಕಾರ
ಅಶೋಕ್ ಗೆಹ್ಲೋಟ್
  • News18
  • Last Updated: March 16, 2020, 5:25 PM IST
  • Share this:
ಜೈಪುರ(ಮಾ. 16): ದೇಶಾದ್ಯಂತ ತೀವ್ರ ಪ್ರತಿಭಟನೆಗಳಿಗೆ ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರಶ್ನಿಸಿ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ದೇಶದಲ್ಲಿ ಶಾಂತಿ ಮತ್ತು ಸಹಭಾಳ್ವೆಯನ್ನು ಕಾಪಾಡಲು ಸಿಎಎ ಕಾಯ್ದೆಯನ್ನು ಹಿಂಪಡೆಯುವುದು ಅಗತ್ಯವಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯ ಮಾಡಿದ್ದಾರೆ.

ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ಅನೇಕ ರಾಜ್ಯಗಳು ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಅನ್ನು ವಿರೋಧಿಸಿವೆ. ಅಶೋಕ್ ಗೆಹ್ಲೋಟ್ ಅವರಂತೂ ಆರಂಭದಿಂದಲೂ ಸಿಎಎಗೆ ಕಡುವಿರೋಧಿಯಾಗಿದ್ಧಾರೆ. ಸಿಎಎ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್​ಆರ್​ಸಿ) ಅನ್ನು ತಮ್ಮ ಸರ್ಕಾರ ಅನುಷ್ಠಾನಗೊಳಿಸುವುದಿಲ್ಲ ಎಂದು ಅವರು ಅನೇಕ ಬಾರಿ ಒತ್ತಿಹೇಳಿದ್ದಾರೆ. ಸಿಎಎ ವಿರುದ್ಧ ಮೊದಲು ನಿರ್ಣಯ ಮಂಡಿಸಿದ ರಾಜ್ಯಗಳಲ್ಲಿ ರಾಜಸ್ಥಾನವೂ ಒಂದು. ಜನವರಿಯಲ್ಲಿ ರಾಜಸ್ಥಾನ ಸಿಎಎ ವಿರುದ್ಧ ನಿರ್ಣಯ ಹೊರಡಿಸಿತ್ತು.

ಇದನ್ನೂ ಓದಿ: ನಿರ್ಭಯಾ ಪ್ರಕರಣ: ನ್ಯಾಯ ಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದ ಅತ್ಯಾಚಾರಿಗಳು

ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಸಿಎಎ ಜಾರಿಗೆ ತಂದಿದೆ. ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿರುವ ಅಲ್ಪಸಂಖ್ಯಾತರಾದ ಹಿಂದೂ, ಸಿಖ್, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರು ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬಂದಿದ್ದರೆ ಅಂಥವರಿಗೆ ಭಾರತೀಯ ಪೌರತ್ವ ನೀಡುವ ಅವಕಾಶ ಈ ಕಾಯ್ದೆ ಕಲ್ಪಿಸುತ್ತದೆ. ಆದರೆ, ಮುಸ್ಲಿಮರನ್ನು ಈ ಕಾಯ್ದೆಯಿಂದ ಹೊರಗಿಟ್ಟಿರುವುದು ತಪ್ಪು ಎಂಬುದು ವಿಪಕ್ಷಗಳ ಆಕ್ಷೇಪವಾಗಿದೆ. ಸಿಎಎ, ಎನ್​ಆರ್​ಸಿ ಮೂಲಕ ಮುಸ್ಲಿಮರನ್ನು ದಮನ ಮಾಡುವ ಷಡ್ಯಂತ್ರ ನಡೆದಿದೆ ಎಂಬುದು ಇವರ ಶಂಕೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ತಿಂಗಳುಗಟ್ಟಲೆ ನಿತ್ಯ ಪ್ರತಿಭಟನೆಗಳು ನಡೆದಿವೆ.

First published:March 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading