• Home
 • »
 • News
 • »
 • national-international
 • »
 • ರಾಜಸ್ಥಾನ ಸರ್ಕಾರದ​ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಬಿಜೆಪಿ; ಕಮಲಕ್ಕೆ ತಿರುಗೇಟು ನೀಡಲು ಕಾಂಗ್ರೆಸ್​ ಪ್ಲಾನ್​

ರಾಜಸ್ಥಾನ ಸರ್ಕಾರದ​ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಬಿಜೆಪಿ; ಕಮಲಕ್ಕೆ ತಿರುಗೇಟು ನೀಡಲು ಕಾಂಗ್ರೆಸ್​ ಪ್ಲಾನ್​

ಅಶೋಕ್ ಗೆಹ್ಲೋಟ್

ಅಶೋಕ್ ಗೆಹ್ಲೋಟ್

ಅಧಿವೇಶನದ ನಿಯಮದ ಪ್ರಕಾರ ವಿರೋಧ ಪಕ್ಷಗಳು ಒಮ್ಮೆ ಅವಿಶ್ವಾಸ ನಿರ್ಯಣ ಮಂಡನೆ ಮಾಡಿದರೆ ಮತ್ತೆ ಆರು ತಿಂಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ಇಂದು ಕಾಂಗ್ರೆಸ್​ ವಿಶ್ವಾಸ ಮಂಡನೆ ಮಾಡಿ ಗೆದ್ದರೆ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಲಿದೆ. 

 • Share this:

  ಜೈಪುರ (ಆ.14): ಹಿರಿಯ ನಾಯಕರ ಜೊತೆ ಸಂಧಾನ ಮಾತುಕತೆ ಪೂರ್ಣಗೊಂಡ ನಂತರ ಸಚಿನ್​ ಪೈಲಟ್​ ಕಾಂಗ್ರೆಸ್​ ಪಕ್ಷಕ್ಕೆ ಮರಳಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ  ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿಕೊಂಡಿದೆ. ಈ ಮಧ್ಯೆ ಕಾಂಗ್ರೆಸ್ ವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ.


  ಶುಕ್ರವಾರ ಆರಂಭವಾಗುವ ಅಧಿವೇಶನದಲ್ಲಿ ಕಾಂಗ್ರೆಸ್​ ಸರ್ಕಾರ ವಿಶ್ವಾಸ ನಿರ್ಣಯ ಮಂಡಿಸಲಿದೆ ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ. ಅಧಿವೇಶನಕ್ಕೂ ಮೊದಲು ಗುರುವಾರ ಕಾಂಗ್ರೆಸ್​​ ಶಾಸಕಾಂಗ ಪಕ್ಷದ ಸಭೆ ಕರೆದಿತ್ತು. ಈ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಸೇರಿ ಇತರರು ಪಾಲ್ಗೊಂಡಿದ್ದರು.


  ಅಧಿವೇಶನದ ನಿಯಮದ ಪ್ರಕಾರ ವಿರೋಧ ಪಕ್ಷಗಳು ಒಮ್ಮೆ ಅವಿಶ್ವಾಸ ನಿರ್ಯಣ ಮಂಡನೆ ಮಾಡಿದರೆ ಮತ್ತೆ ಆರು ತಿಂಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಸಾಧ್ಯವಿಲ್ಲ. ಒಂದೊಮ್ಮೆ ಇಂದು ಕಾಂಗ್ರೆಸ್​ ವಿಶ್ವಾಸ ಮಂಡನೆ ಮಾಡಿ ಗೆದ್ದರೆ ಬಿಜೆಪಿಗೆ ಭಾರೀ ಹಿನ್ನಡೆ ಉಂಟಾಗಲಿದೆ.


  ನಿನ್ನೆ ನಡೆದ ಸಭೆಯಲ್ಲಿ ಇಂದು ಮಂಡನೆ ಮಾಡುವ ವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಮೊದಲು ಬಂಡಾಯ ಎದ್ದಿದ್ದ ಸಚಿನ್​ ಪೈಲಟ್​ ಈಗ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಕಾಂಗ್ರೆಸ್​ ತುಂಬಾನೇ ವಿಶ್ವಾಸದಲ್ಲಿದೆ.


  ಅಶೋಕ್ ಗೆಹ್ಲೋಟ್ ಸರ್ಕಾರ ದ್ವಂದ್ವಗಳ ಸರ್ಕಾರವಾಗಿದೆ ಎಂದು ಟೀಕಿಸಿದ ಪೂನಿಯಾ, ರಾಜಸ್ಥಾನದ ಕಾಂಗ್ರೆಸ್​ನೊಳಗಿನ ರಾಜಕೀಯ ಬಿಕ್ಕಟ್ಟು ಶಮನಗೊಂಡಂತೆ ತೋರುತ್ತಿದೆಯಾದರೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬಂತಿಲ್ಲ. ಹಗ್ಗ-ಜಗ್ಗಾಟ ನಡೆದಿದೆ. ಒಬ್ಬರು ಅತ್ತ ಎಳೆಯುತ್ತಿದ್ದರೆ, ಇನ್ನೊಬ್ಬರು ಇತ್ತ ಎಳೆಯುತ್ತಿದ್ದಾರೆ. ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದಿದ್ದರು.


  ಬಂಡಾಯ ಏಳುವ ಮೂಲಕ ಸರ್ಕಾರವನ್ನೇ ಬೀಳಿಸಲು ಸಚಿನ್‌ ಪೈಲಟ್‌ ಮುಂದಾಗಿದ್ದರು. ತಮಗೆ ಸಿಎಂ ಸ್ಥಾನ ನೀಡಿ ಇಲ್ಲದಿದ್ದರೆ ಪಕ್ಷ ತೊರೆಯುತ್ತೇನೆ ಎಂದಿದ್ದರು. ಈ ಬೆನ್ನಲ್ಲೇ ಅವರು ಬೇರೆ ಪಕ್ಷ ಕಟ್ಟಲಿದ್ದಾರೆ, ಬಿಜೆಪಿ ಸೇರಲಿದ್ದಾರೆ ಎಂಬಿತ್ಯಾದಿ ವಿಚಾರಗಳು ಚರ್ಚೆಗೆ ಬಂದಿದ್ದವು. ಸೋಮವಾರ ದಿಢೀರ್‌ ಬೆಳವಣಿಗೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದ್ದರು. ಈ ವೇಳೆ ಸಂಧಾನ ಮಾತುಕತೆ ಯಶಸ್ವಿಯಾಗಿತ್ತು.

  Published by:Rajesh Duggumane
  First published: