Lakhimpur Kheri Violence- ಕೇಂದ್ರ ಸಚಿವರ ಮಗ ಆಶಿಶ್ 3 ದಿನ ಪೊಲೀಸ್ ಕಸ್ಟಡಿಗೆ

Ashish Mishra sent to Police Custody- ಲಖೀಂಪುರ್ ಖೇರಿ ಹಿಂಸಾಚಾರ ಘಟನೆಯ ಪ್ರಮುಖ ಆರೋಪಿ ಆಶೀಶ್ ಮಿಶ್ರಾನನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ಕೊಡಲಾಗಿದೆ. ವಿಚಾರಣೆ ವೇಳೆ ಸರಿಯಾಗಿ ಸಹರಿಸದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು 14 ದಿನ ಕಸ್ಟಡಿಗೆ ಕೊಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು.

ಬಂಧಿತ ಆಶೀಶ್ ಮಿಶ್ರಾ.

ಬಂಧಿತ ಆಶೀಶ್ ಮಿಶ್ರಾ.

 • News18
 • Last Updated :
 • Share this:
  ಲಕ್ನೋ, ಅ. 11: ಲಖೀಂಪುರ ಖೇರಿ ಹಿಂಸಾಚಾರ (Lakhimpur Kheri Violence) ಪ್ರಕರಣದಲ್ಲಿ ಬಂಧನದಲ್ಲಿರುವ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ (Union minister Ajay Mishra’s son Ashish Mishra) ನನ್ನು ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿ (Police Custody)ಗೆ ನೀಡಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆಶಿಶ್ ಮಿಶ್ರಾಗೆ ಶಾಕ್ ಸಿಕ್ಕಿದ್ದು, ಮತ್ತೆ ಮೂರು ದಿನ ಪೊಲೀಸರ ವಿಚಾರಣೆ ಎದುರಿಸಬೇಕಿದೆ. ಶನಿವಾರ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಆಶಿಶ್ ಮಿಶ್ರಾ ತನಿಖೆಗೆ ಸಹಕರಿಸದ ಹಿನ್ನೆಲೆ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಇಂದು ಲಖೀಂಪುರನ ಸಿಜೆಎಂ (CJM) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಸದ್ಯ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಮುಂದಿನ ಮೂರು ದಿನ ಎಸ್‍ಐಟಿ (SIT) ತಂಡ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದೆ.

  14 ದಿನ ಕಸ್ಟಡಿಗೆ ಕೇಳಿದ್ದ ಎಸ್‍ಐಟಿ: ಎಸ್‍ಐಟಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಪ್ರಕರಣದಲ್ಲಿ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಯ ಅಗತ್ಯವಿದೆ. ಹಾಗಾಗಿ ಆರೋಪಿಯನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಎಸ್‍ಐಟಿ ಪರ ವಕೀಲರಾದ ರಾಜೇಶ್ ಶ್ರೀವಾಸ್ತವ್ ವಾದ ಮಂಡಿಸಿದ್ದರು. ತಾಂತ್ರಿಕ ಕಾರಣಗಳಿಂದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಅಡಚಣೆ ಉಂಟಾಗಿತ್ತು ಎಂದು ವರದಿಯಾಗಿದೆ.

  ಆರೋಪಿಯನ್ನು ಕೇವಲ 12 ಗಂಟೆ ವಿಚಾರಣೆ ನಡೆಸಲಾಗಿದೆ. ಆದ್ರೆ ಆಶಿಶ್ ಮಿಶ್ರಾ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಆದ್ದರಿಂದ ಆರೋಪಿ 14 ದಿನ ನಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದರು. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಆಶಿಶ್ ಮಿಶ್ರಾ ಪರ ವಕೀಲರು, ಕಕ್ಷಿದಾರರನ್ನು ನಿರಂತರವಾಗಿ 12 ಗಂಟೆ ವಿಚಾರಣೆ ನಡೆಸಲಾಗಿದೆ. ಮಧ್ಯದಲ್ಲಿ ಕೇವಲ ಒಂದು ಬಾರಿ ಮಾತ್ರ ನೀರು ಕುಡಿಯಲು ಅವಕಾಶ ನೀಡಲಾಗಿದೆ. ಆಶಿಶ್ ಮಿಶ್ರಾ ವಿಚಾರಣೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನವೇ PF ಮೇಲೆ 8.5% ಬಡ್ಡಿ? EPF ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ?

  ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸುತ್ತಿರುವ ವಿಪಕ್ಷಗಳು:

  ಲಖೀಂಪುರ ಹಿಂಸಾಚಾರ ನಡೆದ ದಿನದಿಂದಲೂ ವಿಪಕ್ಷಗಳು ಕೇಂದ್ರ ಗೃಹ ರಾಜ್ಯ ಸಚಿವ ಅಜಯ್‍ಮಿಶ್ರಾ ರಾಜೀನಾಮೆಗೆ ಪಟ್ಟು ಹಿಡಿದಿವೆ. ಉತ್ತರ ಪ್ರದೇಶದಲ್ಲಿ ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra), ಇದೇ ವಿಷಯವನ್ನು ಮುಂದಿರಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಲ್ಲದೇ ಎಸ್,ಪಿ, ಬಿಎಸ್‍ಪಿ ಮತ್ತು ಇತರ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿವೆ.

  ಇದನ್ನೂ ಓದಿ: Sexual Harassment by cab driver: ಕ್ಯಾಬ್​​​ ಕ್ಯಾನ್ಸಲ್​ ಮಾಡಿದ್ದಕ್ಕೆ ಡ್ರೈವರ್​ನಿಂದ ಲೈಂಗಿಕ ಕಿರುಕುಳ!

  ವಿಪಕ್ಷಗಳ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಅಜಯ್ ಮಿಶ್ರಾ, ಹಿಂಸಾಚಾರ ನಡೆದ ಸ್ಥಳದಲ್ಲಿ ಪುತ್ರ ಇರಲಿಲ್ಲ. ಒಂದು ವೇಳೆ ಮಗ ಅಲ್ಲಿದ್ದಿದ್ದರೆ ಪ್ರತಿಭಟನಾಕಾರರು ಆತನನ್ನು ಜೀವಂತವಾಗಿ ಬಿಡುತ್ತಿರಲಿಲ್ಲ. ವಿಪಕ್ಷಗಳು ಲಖೀಂಪುರ ಖೇರಿ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗುತ್ತಿವೆ. ಯಾರಾದ್ರೂ ನಮ್ಮದು ತಪ್ಪು ಎಂದು ಸಾಬೀತುಪಡಿಸಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲ್ ಹಾಕಿದ್ದರು.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: