ನ್ಯೂಯಾರ್ಕ್​ನಲ್ಲಿ ಭಾರತೀಯನ ಮೇಲೆ ಜನಾಂಗೀಯ ನಿಂದನೆ; ಆಲ್​ಖೈದಾ ಎಂದು ಹೀಗಳೆದ ಅಮೆರಿಕನ್​

news18
Updated:August 15, 2018, 3:21 PM IST
ನ್ಯೂಯಾರ್ಕ್​ನಲ್ಲಿ ಭಾರತೀಯನ ಮೇಲೆ ಜನಾಂಗೀಯ ನಿಂದನೆ; ಆಲ್​ಖೈದಾ ಎಂದು ಹೀಗಳೆದ ಅಮೆರಿಕನ್​
news18
Updated: August 15, 2018, 3:21 PM IST
ನ್ಯೂಸ್18 ಕನ್ನಡ

ನ್ಯೂಯಾರ್ಕ್​ (ಆ. 15): ಭಾರತೀಯರ ಮೇಲೆ ಜನಾಂಗೀಯ ನಿಂದನೆ, ಹಲ್ಲೆಗಳ ಪ್ರಕರಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಅಮೆರಿಕದ ನ್ಯೂಯಾರ್ಕ್​ನಲ್ಲಿ ರೆಸ್ಟೋರೆಂಟ್​ ನಡೆಸುತ್ತಿರುವ ಭಾರತೀಯನ ಮೇಲೆ ಇದೇ ರೀತಿ ಜನಾಂಗೀಯ ನಿಂದನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಭಾರತೀಯನ ಮಾಲೀಕತ್ವದ ರೆಸ್ಟೋರೆಂಟ್​ಗೆ ಊಟಕ್ಕೆ ಬಂದಿದ್ದ ಗ್ರಾಹಕ ಆ ಮಾಲೀಕನ ಕುಟುಂಬವನ್ನು ಭಾರತದಿಂದ ಬಂದಿರುವ ಬುಡಕಟ್ಟು ಜನ ಎಂದು ಹೀಯಾಳಿಸಿರುವುದಲ್ಲದೆ 'ಈ ಹೋಟೆಲ್​ನಲ್ಲಿ ತಿನ್ನುವ ಮೂಲಕ ನನ್ನ ಹಣವನ್ನು ಆಲ್​ಖೈದಾದವರಿಗೆ ತೆರಬೇಕಾದ್ದರಿಂದ ತಲೆತಗ್ಗಿಸುವಂತಾಗಿದೆ' ಎಂದು ನಿಂದಿಸಿದ್ದಾರೆ.

ಕೆಂಚುಕಿಯಲ್ಲಿ 'ದಿ ಕಿಂಗ್​ ಡೈನರ್​' ಎಂಬ ರೆಸ್ಟೋರೆಂಟ್​ ನಡೆಸುತ್ತಿದ್ದ ತಾಜ್​ ಸರ್ದಾರ್​ ಈ ರೀತಿಯ ಜನಾಂಗೀಯ ನಿಂದನೆಗೆ ಒಳಗಾಗಿರುವ ವ್ಯಕ್ತಿ. ಮನೆಯೂಟ ಮತ್ತು ಭಾರತೀಯ ತಿನಿಸಿಗೆ ಹೆಸರಾಗಿರುವ ಈ ಹೋಟೆಲ್​ನಲ್ಲಿ ತಿಂದ ನಂತರ ರೆಸ್ಟೋರೆಂಟ್​ನ ಫೋಟೋ ಕ್ಲಿಕ್ಕಿಸಿಕೊಂಡ ಗ್ರಾಹಕ ಫೇಸ್​ಬುಕ್​ನಲ್ಲಿ ಆ ರೆಸ್ಟೋರೆಂಟ್​ ಮತ್ತು ಅದರ ಮಾಲೀಕ ತಾಜ್​ ಸರ್ದಾರ್​ ಅವರ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, ಸರ್ದಾರ್​ ಅವರನ್ನು ಆಲ್​ಖೈದಾ ಎಂದು ಸಂಬೋಧಿಸಿದ್ದಾರೆ.

2010ರಿಂದಲೂ ಅಲ್ಲಿ ರೆಸ್ಟೋರೆಂಟ್​ ನಡೆಸುತ್ತಿರುವ ತಾಜ್​ ಸರ್ದಾರ್​ ಬಗ್ಗೆ ಈ ರೀತಿಯ ಪೋಸ್ಟ್​ ಹಾಕಿದ ನಂತರ ಸರ್ದಾರ್​ ಸಮುದಾಯದ ಪ್ರೋತ್ಸಾಹದಿಂದ ಹೋಟೆಲ್​ ಬ್ಯುಸಿನೆಸ್​ ಇನ್ನಷ್ಟು ಚೆನ್ನಾಗಿಯೇ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೆಸ್ಟೋರೆಂಟ್​ ಮಾಲೀಕ ಸರ್ದಾರ್​, ಈ ರೀತಿಯ ನೆಗೆಟಿವ್​ ಆಗಿ ಯೋಚನೆ ಮಾಡುವವರಿಗಿಂತ ಹೆಚ್ಚಾಗಿ ಸಕಾರಾತ್ಮಕ ಮನೋಭಾವನೆಯುಳ್ಳವರು ನಮ್ಮ ನಡುವೆ ಇದ್ದಾರೆ. ನನಗೆ ಬೆಂಬಲವಾಗಿ ನಿಂತ ಇಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಈ ಪ್ರಕರಣ ನಡೆದ ಬಳಿಕ ತಮ್ಮ ಕುಟುಂಬಕ್ಕೆ ಏನಾದರೂ ತೊಂದರೆಯಾಗಬಹುದು ಎಂದು ತಾಜ್​ ಸರ್ದಾರ್​ ಅವರು ದೂರು ದಾಖಲಿಸಿದ್ದಾರೆ. ಅಲ್ಲಿನ ಪೊಲೀಸರು ಸರ್ದಾರ್​ ಅವರಿಗೆ ಭದ್ರತೆ ನಿಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಜನಾಂಗೀಯ ಹಲ್ಲೆಯಂತಹ ಯಾವುದೇ ಘಟನೆಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...