HOME » NEWS » National-international » ASHALATA WABGAONKAR DEATH MARATHI ACTRESS ASHALATA WABGAONKAR DIES OF COVID 19 AT 79 IN SATARA LG

Ashalata wabgaonkar death: ಭಾರತೀಯ ಚಿತ್ರರಂಗದ ಖ್ಯಾತ ನಟಿ ಕೊರೋನಾಗೆ ಬಲಿ

ರಂಗಭೂಮಿ ಕಲಾವಿದೆಯಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಅವರು ಮುಖ್ಯವಾಗಿ ಮರಾಠಿ ಮತ್ತು ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇಷ್ಟೇ ಅಲ್ಲದೇ 100ಕ್ಕೂ ಹೆಚ್ಚು ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.

news18-kannada
Updated:September 22, 2020, 11:36 AM IST
Ashalata wabgaonkar death: ಭಾರತೀಯ ಚಿತ್ರರಂಗದ ಖ್ಯಾತ ನಟಿ ಕೊರೋನಾಗೆ ಬಲಿ
ಆಶಾಲತಾ ವಾಬ್​ಗಾಂವ್ಕರ್
  • Share this:
ನವದೆಹಲಿ(ಸೆ.22): ಮಾರಕ ಕೊರೋನಾಗೆ ಇಂದು ಭಾರತ ಚಿತ್ರರಂಗದ ಖ್ಯಾತ ಚಲನಚಿತ್ರ ನಟಿ ಬಲಿಯಾಗಿದ್ದಾರೆ. ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್​ಇಂದು ಮುಂಜಾನೆ 4.45ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಹಾರಾಷ್ಟ್ರದ ಸತಾರಾದಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿದ್ದು, ತಮ್ಮ ಮಗನನ್ನು ಅಗಲಿದ್ದಾರೆ. ಆಶಾಲತಾ ಅವರು ಇತ್ತೀಚೆಗೆ ಸತರಾದಲ್ಲಿ ಮರಾಠಿ ಟಿವಿಯ ಧಾರಾವಾಹಿಯೊಂದರ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಸತಾರದಲ್ಲಿ ಆಯ್ ಮಜಿ ಕಲುಬಾಯಿ ಎಂಬ ಪೌರಾಣಿಕ ಶೋವೊಂದರ ಶೂಟಿಂಗ್​ನಲ್ಲಿ ತೊಡಗಿದ್ದರು. ಆ ಟಿವಿ ಸೀರಿಯಲ್​ ತಂಡದಲ್ಲಿ ಆಶಾಲತಾ ಸೇರಿ 20 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಎಲ್ಲರನ್ನೂ ಸಹ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಶಾಲತಾ ಅವರ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಮಾನತು ವಿರೋಧಿಸಿ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ‌ ಸಂಸದರ ಆಹೋರಾತ್ರಿ ಧರಣಿ

ನಟಿ ಆಶಾಲತಾ ಅವರ ಅಂತ್ಯಸಂಸ್ಕಾರವನ್ನು ಮಹಾರಾಷ್ಟ್ರದ ಸತಾರದಲ್ಲಿ ನಡೆಸುವುದಾಗಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಆಶಾಲತಾ ಅವರ ನಿಧನದ ಸುದ್ದಿಯನ್ನು ರೇಣುಕಾ ಶಹಾನೆಯವರು ತಮ್ಮ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ. ಇಂದು ಬಹಳ ನಿರಾಶಾದಾಯದ ದಿನವಾಗಿದೆ. ಕೊರೋನಾ ವೈರಸ್​ ಒಂದು ಸುಂದರ ಜೀವವನ್ನು ಬಲಿತೆಗೆದುಕೊಂಡಿದೆ. ನಟಿ ಆಶಾಲತಾ ಅವರು ನಿಧನರಾಗಿದ್ದಾರೆ. ಅವರು ಬಹಳ ಕರುಣಾಮಯಿ ಆಗಿದ್ದರು. ತುಂಬಾ ಸೂಕ್ಷ್ಮ ಸ್ವಭಾವದ ಹಾಗೂ ಅದ್ಭುತ ಕಲಾವಿದೆಯಾಗಿದ್ದರು ಎಂದು ಮರಾಠಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ.

ನಟಿ ಆಶಾಲತಾ ಅವರು ಟಿವಿ, ಚಲನಚಿತ್ರ ಹಾಗೂ ಭಾರತೀಯ ಚಿತ್ರರಂಗದಲ್ಲಿ ಚಿರಪರಿಚಿತ. ರಂಗಭೂಮಿ ಕಲಾವಿದೆಯಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಅವರು ಮುಖ್ಯವಾಗಿ ಮರಾಠಿ ಮತ್ತು ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇಷ್ಟೇ ಅಲ್ಲದೇ 100ಕ್ಕೂ ಹೆಚ್ಚು ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ.
Published by: Latha CG
First published: September 22, 2020, 11:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories