Economic Survey - ನಿರುದ್ಯೋಗ ಸಮಸ್ಯೆ ನಿವಾರಣೆಗೆ ಚೀನಾ ಮಾದರಿ? ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರದ ಚಿತ್ತ

“ಉತ್ಪನ್ನಗಳಿಗೆ ಹೆಚ್ಚು ಬಂಡವಾಳ ಹೂಡಿಕೆಯಾದಷ್ಟೂ ಕಾರ್ಮಿಕರ ಕೆಲಸಕ್ಕೆ ಸಂಚಕಾರವಾಗುತ್ತದೆಂಬ ಭಾವನೆ ಸಾಮಾನ್ಯವಾಗಿದೆ. ಕಾರ್ಮಿಕ ಆದ್ಯತೆಯ ಉತ್ಪನ್ನ ಮತ್ತು ಬಂಡವಾಳ ಆದ್ಯತೆಯ ಉತ್ಪನ್ನ ವ್ಯವಸ್ಥೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ, ಅತ್ಯಧಿಕ ಹೂಡಿಕೆ ದರದಿಂದ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿರುವುದಕ್ಕೆ ಚೀನಾ ಉದಾಹರಣೆಯಾಗಿದೆ” ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

Vijayasarthy SN | news18
Updated:July 4, 2019, 4:40 PM IST
Economic Survey - ನಿರುದ್ಯೋಗ ಸಮಸ್ಯೆ ನಿವಾರಣೆಗೆ ಚೀನಾ ಮಾದರಿ? ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರದ ಚಿತ್ತ
ಕೆವಿ ಸುಬ್ರಮಣಿಯನ್
  • News18
  • Last Updated: July 4, 2019, 4:40 PM IST
  • Share this:
ನವದೆಹಲಿ(ಜುಲೈ 04): ದೇಶದ ಅತ್ಯಂತ ತಲೆನೋವಿನ ಸಮಸ್ಯೆಗಳಲ್ಲೊಂದಾದ ನಿರುದ್ಯೋಗಕ್ಕೆ ಪರಿಹಾರ ಹುಡುಕಲು ನೆರೆಯ ದೇಶದತ್ತ ಕೇಂದ್ರ ಸರ್ಕಾರ ಚಿತ್ತ ಹರಿಸಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಚೀನಾ ಮಾದರಿ ಅನುಸರಿಸಲು ಸರ್ಕಾರ ಮುಂದಾಗಬಹುದು. ಬಜೆಟ್ ಮಂಡನೆಗೆ ಒಂದು ದಿನ ಮುನ್ನ ಸಂಸತ್​ನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಲಾಗಿದೆ. ಉಳಿತಾಯ, ಹೂಡಿಕೆ, ರಫ್ತು ಮತ್ತು ಹೂಡಿಕೆಯೊಂದಿಗಿನ ಬೆಳವಣಿಗೆ ಇವಿಷ್ಟೂ ಒಂದು ಆವರ್ತವಾಗಿ ನಡೆದಲ್ಲಿ ಉದ್ಯೋಗ ಸೃಷ್ಟಿ ಸಮರ್ಪಕವಾಗಿ ಆಗಲಿದೆ ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಇತ್ತೀಚಿಗೆ ಚೀನಾ ಹಾಗೂ ಪೂರ್ವ ಏಷ್ಯಾದಲ್ಲಿ ಇವೇ ಆವರ್ತದ ಅಂಶಗಳು ಅಭಿವೃದ್ಧಿಗೆ ಪೂರಕವಾಗಿ ನಿಂತಿವೆ ಎಂದು ಈ ಸಮೀಕ್ಷೆ ಹೇಳಿದೆ.

ಈ ಸಮೀಕ್ಷೆ ಪ್ರಕಾರ ಆರ್ಥಕ ಪ್ರಗತಿಗೆ ಖಾಸಗಿ ಬಂಡವಾಳ ಹೂಡಿಕೆಯೇ ಪ್ರಮುಖ ಆಧಾರ. ಖಾಸಗಿ ಬಂಡವಾಳ ಹೂಡಿಕೆಯು ಬೇಡಿಕೆಯನ್ನು ಹೆಚ್ಚಿಸುತ್ತದೆ, ಸಾಮರ್ಥ್ಯ ಹುಟ್ಟು ಹಾಕುತ್ತದೆ, ಕಾರ್ಮಿಕರ ಉತ್ಪನ್ನಶೀಲತೆ ಹೆಚ್ಚಿಸುತ್ತದೆ, ಹೊಸ ತಂತ್ರಜ್ಞಾನದ ಬಳಕೆಗೆ ನಾಂದಿ ಹಾಡುತ್ತದೆ, ಕ್ರಿಯಾಶೀಲ ನಾಶಕ್ಕೆ ಅವಕಾಶ ಕೊಡುತ್ತದೆ ಮತ್ತು ಉದ್ಯೋಗ ಸೃಷ್ಟಿಸುತ್ತದೆ.

ಇದನ್ನೂ ಓದಿ: ಉದ್ಯೋಗ ಹೆಚ್ಚಳಕ್ಕೆ ಒತ್ತು; ಪ್ರಸಕ್ತ ಸಾಲಿನ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗುವ ನಿರೀಕ್ಷೆ: ನಿರ್ಮಲಾ ಸೀತಾರಾಮನ್

“ಉತ್ಪನ್ನಗಳಿಗೆ ಹೆಚ್ಚು ಬಂಡವಾಳ ಹೂಡಿಕೆಯಾದಷ್ಟೂ ಕಾರ್ಮಿಕರ ಕೆಲಸಕ್ಕೆ ಸಂಚಕಾರವಾಗುತ್ತದೆಂಬ ಭಾವನೆ ಸಾಮಾನ್ಯವಾಗಿದೆ. ಕಾರ್ಮಿಕ ಆದ್ಯತೆಯ ಉತ್ಪನ್ನ ಮತ್ತು ಬಂಡವಾಳ ಆದ್ಯತೆಯ ಉತ್ಪನ್ನ ವ್ಯವಸ್ಥೆಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ, ಅತ್ಯಧಿಕ ಹೂಡಿಕೆ ದರದಿಂದ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿರುವುದಕ್ಕೆ ಚೀನಾ ಉದಾಹರಣೆಯಾಗಿದೆ” ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಹೆಚ್ಚು ಬಂಡವಾಳದ ಅಗತ್ಯತೆ ಬಗ್ಗೆ ಸಮೀಕ್ಷೆಯು ಅನೇಕ ಅಂತಾರಾಷ್ಟ್ರೀಯ ಉದಾಹರಣೆಗಳನ್ನು ಪ್ರಸ್ತಾಪಿಸಿದೆ.

ಇದನ್ನೂ ಓದಿ: ನನ್ನ ವಿಚಾರಗಳ ಬಗ್ಗೆ ಪ್ರಧಾನಿ ಮೋದಿಗೆ ಆಸಕ್ತಿ ಇಲ್ಲ, ಹೀಗಾಗಿ ಚೀನಾಗೆ ಹೋಗುವೆ; ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ

ಆರ್ಥಿಕ ಸಮೀಕ್ಷೆ ಬೆಳಕು ಚೆಲ್ಲಿದ ಮತ್ತೊಂದು ಗಮನಾರ್ಹ ಅಂಶವೆಂದರೆ ಸಂಸ್ಥೆಗಳ ಗಾತ್ರದ್ದು. ಹೆಚ್ಚು ಉದ್ಯೋಗ ಸೃಷ್ಟಿಗೆ ಸಣ್ಣ ಸಂಸ್ಥೆಗಳ ಬದಲು ಹಳೆಯದಾದ ದೊಡ್ಡ ಸಂಸ್ಥೆಗಳು ಸಹಾಯಕವಾಗುತ್ತವೆ ಎಂಬುದು ಆರ್ಥಿಕ ಸಮೀಕ್ಷೆಯ ವಾದವಾಗಿದೆ. ಇದಕ್ಕೆ ಪೂರಕವಾಗಿ ಅಂಕಿ ಅಂಶವನ್ನೂ ಇದು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಭಾರತದ ಉತ್ಪಾದನಾ ಕ್ಷೇತ್ರದಲ್ಲಿರುವ ಕಂಪನಿಗಳಲ್ಲಿ ಅರ್ಧ ಭಾಗದಷ್ಟು ಸಣ್ಣ ಸಂಸ್ಥೆಗಳೇ ಆಗಿವೆ. ಆದರೆ, ಇವುಗಳು ಸೃಷ್ಟಿಸಿರುವ ಉದ್ಯೋಗ ಪ್ರಮಾಣ ಶೇ. 13.3 ಮಾತ್ರವಂತೆ. ಅದೇ, 10 ವರ್ಷಕ್ಕಿಂತ ಕಿರಿಯದಾದ ಹಾಗೂ 100ಕ್ಕೂ ಹೆಚ್ಚು ಉದ್ಯೋಗಗಳನ್ನ ಹೊಂದಿರುವ ದೊಡ್ಡ ಸಂಸ್ಥೆಗಳ ಪ್ರಮಾಣ ಶೇ. 6.2ರಷ್ಟು ಮಾತ್ರ ಇದೆಯಾದರೂ ಅವುಗಳು ಸೃಷ್ಟಿಸುವ ಉದ್ಯೋಗ ಶೇ. 25ರಷ್ಟಿದೆ. ಅದೇ ಹಳೆಯದಾದ ದೊಡ್ಡ ಸಂಸ್ಥೆಗಳು ಶೇ. 9.5 ರಷ್ಟಿವೆಯಾದರೂ ಅವುಗಳು ಸೃಷ್ಟಿಸುವ ಉದ್ಯೋಗದ ಪ್ರಮಾಣ ಅರ್ಧಕ್ಕಿಂತ ಹೆಚ್ಚು. ಈ ಹಿನ್ನೆಲೆಯಲ್ಲಿ ಹಳೆಯ ಹಾಗೂ ಬೃಹತ್ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕು ಎಂದು ಆರ್ಥಿಕ ಸಮೀಕ್ಷೆ ಹೇಳುತ್ತಿದೆ.

ಇದನ್ನೂ ಓದಿ: ಬಡತನದಲ್ಲಿ ಬೆಳೆದು ಸಾಮ್ರಾಜ್ಯ ಕಟ್ಟಿದ್ದ ದೋಸೆ ಕಿಂಗ್​ ಹೆಣ್ಣಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕಥೆಭಾರತದ ನೂತನ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಅವರು ಈ ಆರ್ಥಿಕ ಸಮೀಕ್ಷೆ ನಡೆಸಿದ್ದಾರೆ. ಇದು ಅವರ ಮೊದಲ ಆರ್ಥಿಕ ಸಮೀಕ್ಷೆಯಾಗಿದೆ. ನಾಳೆ, ಶುಕ್ರವಾರ ಎನ್​ಡಿಎ-2 ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾಗಲಿದೆ. ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್ ಮಂಡಿಸಿದ ಹಿನ್ನೆಲೆಯಲ್ಲಿ ಈ ಬಜೆಟ್ ಯಾವ ಸ್ವರೂಪದ್ದಾಗಿರಲಿದೆ ಎಂಬ ಕುತೂಹಲ ಇನ್ನೂ ಇದೆ. ಹಾಗೆಯೇ, ನಿರ್ಮಲಾ ಸೀತಾರಾಮನ್ ಅವರಿಗೂ ಇದು ಚೊಚ್ಚಲ ಹಣಕಾಸು ಬಜೆಟ್ ಆಗಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading