ಗಗನಕ್ಕೇರಿದ ತರಕಾರಿ ಬೆಲೆಗಳು; ಬೀನ್ಸ್ ಕಿಲೋ 130, ಟೊಮೆಟೋ 70 ರೂ; ಜನರು ಕಂಗಾಲು

ಇತ್ತೀಚೆಗೆ ಮದುವೆ, ಗೃಹಪ್ರವೇಶ, ನಾಮಕಾರಣ ಸೇರಿದಂತೆ ಹಲವು ಶುಭಕಾರ್ಯಗಳು ನಡೆಯುತ್ತಿವೆ. ಅಲ್ಲದೇ ರಂಜಾನ್‌ ಮಾಸ ಆಗಿರುವ ಕಾರಣದಿಂದಾಗಿ ತರಕಾರಿ ಬೇಡಿಕೆ ಇನ್ನೂ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಮೇ.14): ರಾಜ್ಯಾದ್ಯಂತ ಬಿಸಿಲಿನ ಬೇಗೆಯ ಕಾರಣ ಅಂತರ್ಜಲ ಮಟ್ಟ ಕುಸಿತವಾಗಿದೆ. ಇದರಿಂದಾಗಿ ಕೃಷಿಗೆ ನೀರಿನ ಕೊರತೆ ಎದುರಾಗುತ್ತಿದ್ದು, ತರಕಾರಿ ಬೆಳೆಯುವವರ ಸಂಖ್ಯೆ ವಿರಳವಾಗಿದೆ. ಹಾಗಾಗಿ ಎಂದಿನಂತೆಯೇ ತರಕಾರಿ ದರದಲ್ಲಿ ಏರಿಕೆಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಎಪಿಎಂಸಿ ಮಾರುಕಟ್ಟೆ ನಿತ್ಯ ಲೋಡುಗಟ್ಟಲೇ ತರಕಾರಿಯಿಂದ ತುಂಬಿ ತುಳುಕುತ್ತಿತ್ತು. ಒಂದು ವೇಳೆ ತರಕಾರಿ ಬೆಲೆ ದಿಢೀರ್​​ ಕುಸಿತವಾದರೇ ಕೊಳ್ಳುವವರಿಲ್ಲದೆ ಬಿಸಾಡ ಬೇಕಾಗುತ್ತಿತ್ತು. ಆದರೀಗ ತರಕಾರಿ ಬೆಲೆ ಗಗನಕ್ಕೇರಿದೆ. ನೀವೂ ಇಡೀ ಮಾರುಕಟ್ಟೆಯಲ್ಲಿ ಎಲ್ಲಿ ಹುಡುಕಿದರೂ ಕೊಳೆತ ತರಕಾರಿ ಕಣ್ಣಿಗೆ ಕಾಣದಾಗಿದೆ.

ಇತ್ತೀಚೆಗೆ ಮದುವೆ, ಗೃಹಪ್ರವೇಶ, ನಾಮಕಾರಣ ಸೇರಿದಂತೆ ಹಲವು ಶುಭಕಾರ್ಯಗಳು ನಡೆಯುತ್ತಿವೆ. ಅಲ್ಲದೇ ರಂಜಾನ್‌ ಮಾಸ ಆಗಿರುವ ಕಾರಣದಿಂದಾಗಿ ತರಕಾರಿ ಬೇಡಿಕೆ ಇನ್ನೂ ಹೆಚ್ಚಾಗಿದೆ. ಆದರೆ, ಮಾರುಕಟ್ಟೆಗೆ ಮಾತ್ರ ತರಕಾರಿ ಆಗಮಿಸುತ್ತಿಲ್ಲ. ಹೀಗಾಗಿಯೇ ಸಹಜವಾಗಿ ತರಕಾರಿ ಆವಕದ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದ್ದಂತೆಯೇ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ: ಜನ ಆಶೀರ್ವದಿಸಿದರೆ ಮತ್ತೆ ಸಿಎಂ ಆಗಬಾರದಾ? ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಹೇಳಿಕೆಗೆ ಬದ್ಧವಾಗಿದ್ದೇನೆ; ಸಿದ್ದರಾಮಯ್ಯ

ಕಳೆದ ವಾರಕ್ಕಿಂತ ಈ ವಾರ ತರಕಾರಿ ಬೆಲೆ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಹುರಳಿ ಕಾಯಿ (ಬೀನ್ಸ್‌) ಕಳೆದ ವಾರ ಕೆ.ಜಿ 100ರೂ ಇದ್ದದ್ದು, ಈ ವಾರ 130 ಆಗಿದೆ. ಬಟಾಣಿ ಕೆ.ಜಿಗೆ 150 ರೂ. ಇದ್ದದ್ದು, 165ಕ್ಕೆ ಏರಿಕೆ ಕಂಡಿದೆ. ಹಸಿ ಮೆಣಸಿನಕಾಯಿ 60ರಿಂದ 110ಕ್ಕೆ ಜಿಗಿದಿದೆ.

ಕ್ಯಾರೆಟ್‌ ಕೆ.ಜಿಗೆ 35 ರಿಂದ 50ಕ್ಕೆ, ಟೊಮೇಟೊ ಕೆ.ಜಿಗೆ 35ರಿಂದ 70ಕ್ಕೆ ಏರಿದೆ. ಉಳಿದಂತೆ ಬೆಂಡೆಕಾಯಿ ಕೆ.ಜಿ 35, ಹೂ ಕೋಸು 40, ಮೂಲಂಗಿ 40, ಆಲೂಗಡ್ಡೆ 30, ಈರುಳ್ಳಿ 40, ನುಗ್ಗೆಕಾಯಿ 60, ಬದನೆಕಾಯಿ 50, ಕೆ.ಜಿ ಕಟ್ಟು ಕೊತ್ತಂಬರಿ ಸೊಪ್ಪು 130, ದಂಟಿನ ಸೊಪ್ಪು 15, ನಾಲ್ಕು ವರ್ಷದಿಂದ ಕೆ.ಜಿ 50 ರೂ ಆಸುಪಾಸಿನಲ್ಲಿದ್ದ ಶುಂಠಿ ಬೆಲೆಯಲ್ಲಿ 150 ದಾಟಿದೆ.
First published: