Shukrayaan-1: ನರಕದಂಥ ಗ್ರಹದಲ್ಲಿ ಜೀವದ ಸುಳಿವು; ಎಲ್ಲರ ಚಿತ್ತ ಭಾರತದ ಶುಕ್ರಯಾನದತ್ತ

ಮಂಗಳ ಗ್ರಹಕ್ಕಿಂತಲೂ ಭೂಮಿಗೆ ಹೆಚ್ಚು ಸಮೀಪ ಇರುವ ವೀನಸ್ ಗ್ರಹದ ಬಳಿ ಈವರೆಗೂ ಸೋವಿಯತ್ ರಷ್ಯಾ, ಅಮೆರಿಕ, ಯೂರೋಪ್ ಮತ್ತು ಜಪಾನ್ ದೇಶಗಳು ಮಾತ್ರ ವಾಹನ ಕಳುಹಿಸಿವೆ. ಶುಕ್ರಯಾನ-1 ಯಶಸ್ವಿಯಾದರೆ ವಿಶ್ವದ ಐದನೇ ದೇಶವೆಂಬ ಮೈಲಿಗಲ್ಲು ಭಾರತಕ್ಕೆ ಲಭಿಸುತ್ತದೆ.

Vijayasarthy SN | news18
Updated:September 15, 2020, 4:50 PM IST
Shukrayaan-1: ನರಕದಂಥ ಗ್ರಹದಲ್ಲಿ ಜೀವದ ಸುಳಿವು; ಎಲ್ಲರ ಚಿತ್ತ ಭಾರತದ ಶುಕ್ರಯಾನದತ್ತ
ಶುಕ್ರ ಗ್ರಹ
  • News18
  • Last Updated: September 15, 2020, 4:50 PM IST
  • Share this:
ನವದೆಹಲಿ: ಭೂಮಿಯ ಅವಳಿ ಎಂದೇ ಕರೆಯುವ ವೀನಸ್ ಗ್ರಹದಲ್ಲಿ ಜೀವದ ಸುಳಿವು ಪತ್ತೆಯಾದ ಬೆನ್ನಲ್ಲೇ ಭಾರತದ ಶುಕ್ರಯಾನ-1 ಯೋಜನೆ ಬಗ್ಗೆ ಎಲ್ಲರ ಚಿತ್ತ ಹರಿದಿದೆ. ಅತ್ಯಂತ ವಿಷಕಾರಿ ಗಾಳಿ ಹಾಗೂ 800 ಡಿಗ್ರಿ ಸೆಲ್ಸಿಷಸ್​ನಷ್ಟು ಉಷ್ಣಾಂಶ ಇರುವ ಶುಕ್ರ ಗ್ರಹದ ವಾತಾವರಣ ಭೂಮಿಯಲ್ಲಿರುವಂಥ ಜೀವಿಗಳಿಗೆ ಬದುಕಲು ಅಸಾಧ್ಯ. ಆದರೆ, ಇಲ್ಲಿಯ ಮೋಡಗಳಲ್ಲಿ ಫಾಸ್​ಫೈನ್ ಅನಿಲದ ಅಂಶ ಇರುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಬ್ಯಾಕ್ಟೀರಿಯಾಗಳಿಂದ ಫಾಸ್​ಫೈನ್ ಅನಿಲ ಸೃಷ್ಟಿಯಾಗಿರಬಹುದು ಎಂಬ ಅಂದಾಜು ಇದೆ. ಈ ಹಿನ್ನೆಲೆಯಲ್ಲಿ ವೀನಸ್​ನಲ್ಲಿ ಸೂಕ್ಷ್ಮಜೀವಿಗಳು ಯಾವುದಾದರೂ ರೀತಿಯಲ್ಲಿ ಬದುಕಲು ಸಾಧ್ಯವಿರಬಹುದು ಎಂದು ವಿಜ್ಞಾನಿಗಳು ಆಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರ ಗ್ರಹದ ಮೇಲೆ ಅನೇಕರ ಗಮನ ಹೆಚ್ಚುತ್ತಿದೆ.

“ಶುಕ್ರ ಗ್ರಹದಲ್ಲಿ ಫಾಸ್​ಫೈನ್ ಉತ್ಪತ್ತಿಯಾಗುತ್ತಿದೆ ಎಂದಾದರೆ ನಾವು ಮಂಗಳ ಗ್ರಹ ಯೋಜನೆಗಳ ಹುಚ್ಚಾಟವನ್ನು ಮರೆತುಬಿಡಬೇಕು” ಎಂದು ಅಮೆರಿಕದ ನಾರ್ಥ್ ಕರೋಲಿನಾ ಸ್ಟೇಟ್ ಯೂನಿವರ್ಸಿಟಿಯ ಗ್ರಹ ವಿಜ್ಞಾನಿ ಪೌಲ್ ಬೈರ್ನೆ ಹೇಳುತ್ತಾರೆ.

ಚಂದ್ರಯಾನ ಹಾಗೂ ಮಂಗಳಯಾನ ಯೋಜನೆಗಳನ್ನ ಬಹುತೇಕ ಯಶಸ್ವಿಯಾಗಿ ಪೂರೈಸಿರುವ ಭಾರತ ಸದ್ಯದಲ್ಲೇ ಶುಕ್ರಯಾನಕ್ಕೆ ಚಾಲನೆ ಕೊಡಲಿದೆ. ಮಂಗಳಯಾನ-2 ಪ್ರಾರಂಭಗೊಂಡ ನಂತರ ಶುಕ್ರಯಾನ-2 ಆರಂಭಗೊಳ್ಳುತ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಾಗಲೇ ಶುಕ್ರಯಾನ ಹಾರಬೇಕಿತ್ತು.

ಇದನ್ನೂ ಓದಿ: Alien Life on Venus - ಶುಕ್ರ ಗ್ರಹದಲ್ಲಿ ಜೀವದ ಸುಳಿವು ಪತ್ತೆ; ವಿಜ್ಞಾನಿಗಳಲ್ಲಿ ಗರಿಗೆದರಿದ ಕುತೂಹಲ

ಕಾರ್ಬನ್ ಡೈಆಕ್ಸೈಡ್​ನಿಂದಲೇ ಬಹುತೇಕ ತುಂಬಿಹೋಗಿರುವ ಶುಕ್ರನ ವಾತಾವರಣ ನಮ್ಮ ಭೂಮಿಯ ವಾತಾವರಣಕ್ಕಿಂತ 90 ಪಟ್ಟು ಹೆಚ್ಚು ಸಾಂದ್ರತೆ ಹೊಂದಿದೆ. ಇಲ್ಲಿ ಜೀವಿಗಳು ಬದಕುಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಲಾಗಿತ್ತು. ಆದರೂ ಮನುಷ್ಯನ ಅನ್ವೇಷಕ ಕಣ್ಣಿನಿಂದ ವೀನಸ್ ದೂರ ಉಳಿಯಲಿಲ್ಲ. ಮಂಗಳ ಗ್ರಹಕ್ಕೆ ಮೊದಲೇ ಕ್ರನ ಬಳಿ ಮನುಷ್ಯ ವಾಹನ ಕಳುಹಿಸಿದ್ದಾನೆ.

20ನೇ ಶತಮಾನದ 60ರ ದಶಕದಲ್ಲೇ ಅಂದಿನ ಸೋವಿಯತ್ ಒಕ್ಕೂಟ ಶುಕ್ರ ಗ್ರಹಕ್ಕೆ ಹಲವು ಬಾರಿ ಪ್ರಯಾಣ ಮಾಡಿತ್ತು. 1961ರಿಂದ ಹಲವು ಬಾರಿ ಸತತ ಪ್ರಯತ್ನಗಳ ಬಳಿಕ ಶುಕ್ರನ ವಾತಾವರಣವನ್ನು ಯಶಸ್ವಿಯಾಗಿ ಮುಟ್ಟಿತು. 1970ರಲ್ಲಿ ಶುಕ್ರನ ಅಂಗಳಕ್ಕೂ ವಾಹನವನ್ನು ಇಳಿಸಿತು. ಸೋಷಿಯತ್ ಒಕ್ಕೂಟ ಹಲವು ಬಾರಿ ವೀನಸ್ ಗ್ರಹಕ್ಕೆ ವಾಹನವನ್ನು ಇಳಿಸಿದೆ.

ಇದನ್ನೂ ಓದಿ: ಐಎಸಿ ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದ ಪ್ರಶಾಂತ್ ಭೂಷಣ್; ಐಎಸಿ, ಎಎಪಿಯ ಬಣ್ಣ ಬಯಲಾಯಿತೆಂದ ರಾಹುಲ್ಇಲ್ಲಿಯವರೆಗೆ ಸೋವಿಯತ್ ರಷ್ಯಾ ಬಿಟ್ಟರೆ ಅಮೆರಿಕ, ಯೂರೋಪ್ ಮತ್ತು ಜಪಾನ್ ದೇಶಗಳು ಮಾತ್ರ ವೀನಸ್ ಯೋಜನೆ ಕೈಗೊಂಡಿವೆ. ರಷ್ಯಾ ಹೊರತುಪಡಿಸಿ ಯಾವ ದೇಶಗಳು ಕೂಡ ವೀನಸ್ ಅಂಗಳಕ್ಕೆ ಅಡಿ ಇಟ್ಟಿಲ್ಲ. 1984ರ ನಂತರ ಇಲ್ಲಿ ಯಾವುದೇ ವಾಹನ ಕೆಳಗಿಳಿದಿಲ್ಲ. ಇಸ್ರೋ ರೂಪಿಸಿರುವ ಶುಕ್ರಯಾನ-1ರಲ್ಲೂ ಲ್ಯಾಂಡರ್ ಇಳಿಸುವ ಯೋಜನೆ ಇಲ್ಲ. ಇದು ಶುಕ್ರನ ಪರಿಧಿಯೊಂದರಲ್ಲಿ ಸ್ಥಾಪಿತಗೊಂಡು ಅಲ್ಲಿಂದ ಆ ಗ್ರಹದ ವಾತಾವರಣವನ್ನು ಅಧ್ಯಯನ ಮಾತ್ರ ಮಾಡಲಿದೆ. ಹಾಗೆಯೇ ಕೆಲ ಅಂತರರಾಷ್ಟ್ರೀಯವಾಗಿಯೂ ಈ ಯೋಜನೆಗೆ ಹಲವರು ವಿವಿಧ ರೂಪದಲ್ಲಿ ಕೈಜೋಡಿಸಿದ್ದಾರೆ. ಶುಕ್ರ ಗ್ರಹವನ್ನು 65 ಕಿಮೀ ಎತ್ತರದಿಂದ ಅಧ್ಯಯನ ಮಾಡಲು ಬಲೂನುಗಳನ್ನು ಕೂಡ ಶುಕ್ರಯಾನ ಸಾಗಿಸಿಕೊಂಡು ಹೋಗಲಿದೆ.
Published by: Vijayasarthy SN
First published: September 15, 2020, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading