ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ರಾವ್ ದೇಶಮುಖ್ ಅವರ ಪುತ್ರ, ಬಾಲಿವುಡ್ ನಟ ರಿತೇಶ್ ದೇಶಮುಖ್ (Riteish Deshmukh) ಅವರು ರಾಹುಲ್ ಗಾಂಧಿಯವರ ಭಾರತ್ ಜೋಡೋ (Bharat Jodo) ಯಾತ್ರೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ರಿತೇಶ್ ದೇಶಮುಖ್ ಭಾರತ್ ಜೋಡೋ ಫೋಟೋವನ್ನು ಹಂಚಿಕೊಂಡಿದ್ದಾರೆ ಎನ್ನುತ್ತಿದ್ದಂತೆ ತಂದೆ, ಸಹೋದರನ ನಂತರ ಇವರೂ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎಂಬ ಪ್ರಶ್ನೆ ಜೋರಾಗಿದೆ. ಆದರೆ ರಿತೇಶ್ ಈ ಯಾತ್ರೆ ಫೋಟೋವನ್ನು ಹಂಚಿಕೊಂಡಿದ್ದೇ ಬೇರೆ ಕಾರಣಕ್ಕೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತದಾದ್ಯಂತ ಆರವತ್ತೈದು ದಿನಗಳನ್ನು ಪೂರೈಸಿದ ಭಾರತ್ ಜೋಡೋ ಯಾತ್ರೆ ಈಗ ಮಹಾರಾಷ್ಟ್ರದ ಮೂಲಕ ಸಾಗುತ್ತಿದೆ. ಈ ವೇಳೆ ತೆಗೆದ ಒಂದು ಫೋಟೋವನ್ನು ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಗೆ ಅಲ್ಲಿನ ಸ್ಥಳೀಯರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ರಾವ್ ದೇಶಮುಖ್ ಅವರ ಫೋಟೋವನ್ನು ಉಡುಗೊರೆ ನೀಡಿದ್ದಾರೆ. ಇದೇ ಫೋಟೋವನ್ನು ಸದ್ಯ ನಟ ಪೋಸ್ಟ್ ಮಾಡಿದ್ದಾರೆ. ರಿತೇಶ್ ಪತ್ನಿ ಜೆನಿಲಿಯಾ ಕೂಡ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ರಿತೇಶ್ ಈ ಫೋಟೋವನ್ನು ಪೋಸ್ಟ್ ಮಾಡ್ತಿದ್ದಂತೆ ಹಲವರು ನಾನಾ ರೀತಿಯ ಅಭಿಪ್ರಾಯ ಪಟ್ಟಿದ್ದಾರೆ.
ಟ್ವಿಟರ್ ಬಳಕೆದಾರರು ಏನಂದ್ರು?
ದೇಶಮುಖ್ ಅವರ ಪೋಸ್ಟ್ಗೆ ಹಲವಾರು ಅನುಯಾಯಿಗಳು ಪ್ರತ್ಯುತ್ತರಿಸಿದ್ದಾರೆ ಮತ್ತು ಈಗ ಮಹಾರಾಷ್ಟ್ರವನ್ನು ದಾಟುತ್ತಿರುವ ಭಾರತ್ ಜೋಡೋ ಯಾತ್ರೆಗೆ ಸೇರುವಂತೆ ವಿನಂತಿಸಿದ್ದಾರೆ. “ರೀತೇಶ್ ದೇಶಮುಖ್ ಎಲ್ಲಿದ್ದೀರಾ..?? ಇದು ಯಾತ್ರೆಗೆ ಸೇರಲು ಮತ್ತು ನಿಮ್ಮನ್ನು ತೊಡಗಿಸಿಕೊಳ್ಳಲು ಉತ್ತಮ ಸಮಯ .." ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಇನ್ನೂ ಕೆಲ ಟ್ವಿಟ್ಟರಿಗರು "ನೀವು ಯಾವಾಗ ಭಾರತ್ ಜೋಡೋಗೆ ಸೇರುತ್ತೀರಿ?" ಎಂದು ಕಾಮೆಂಟ್ ಮಾಡಿದ್ದಾರೆ.
Where are u Riteish Deshmukh..?? It's time to show some spine..#BharatJodaYatra pic.twitter.com/GXefwfzOaZ
— Apoorv Awasthi (@ApoorvAwasthii) November 12, 2022
ಭಾರತ್ ಜೋಡೋ ಯಾತ್ರೆಗೆ ಘಟಾನುಘಟಿಗಳು ಸಾಥ್
ಈಗಾಗ್ಲೇ ಭಾರತ್ ಜೋಡೋ ಯಾತ್ರೆಗೆ ಘಟಾನುಘಟಿಗಳು, ರಾಜಕಾರಣಿಗಳು, ನಟ-ನಟಿಯರು ಭಾಗಿಯಾಗಿದ್ದಾರೆ. ಬಾಲಿವುಡ್ ನಟಿ ಪೂಜಾ ಭಟ್ ಅವರು ಹೈದರಾಬಾದ್ನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನಡೆದರೆ, ಬಾಲಿವುಡ್ ನಟ , ಸುಶಾಂತ್ ಸಿಂಗ್ ಈ ವಾರದ ಆರಂಭದಲ್ಲಿ ಮಹಾರಾಷ್ಟ್ರವನ್ನು ಪ್ರವೇಶಿಸಿದ ನಂತರ ಯಾತ್ರೆಯನ್ನು ಸೇರಿಕೊಂಡರು. ಮೊನ್ನೆ ಆದಿತ್ಯ ಠಾಕ್ರೆ ಕೂಡ ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮಹಾರಾಷ್ಟ್ರದ ಮಾಜಿ ಸಚಿವ ಅಮಿತ್ ದೇಶಮುಖ್, ರಿತೇಶ್ ದೇಶಮುಖ್ ಅವರ ಸಹೋದರ, ರಾಜ್ಯದಲ್ಲಿ ಯಾತ್ರೆಯನ್ನು ಸ್ವಾಗತಿಸಿ, ಯಾತ್ರೆಯಲ್ಲಿ ಸೇರಿಕೊಂಡರು.
ಪಕ್ಷದ ರ್ಯಾಲಿ ಅಲ್ಲ, ದೇಶದ ರ್ಯಾಲಿ ಎಂದ ನಟ ಸುಶಾಂತ್ ಸಿಂಗ್
ಪಾದಯಾತ್ರೆಯಲ್ಲಿ ಭಾಗಿಯಾದ ನಟ ಸುಶಾಂತ್ ಸಿಂಗ್ ಮಾತನಾಡಿ ಇದು ರಾಜಕೀಯ ರ್ಯಾಲಿಯಲ್ಲಿ ಅವರ ಮೊದಲ ಹಾಜರಾತಿ ಎಂದು ಹೇಳಿದರು. ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇದು ಕಾಂಗ್ರೆಸ್ ಅಥವಾ ಯಾವುದೇ ಪಕ್ಷದ ರ್ಯಾಲಿ ಅಲ್ಲ. ಇದು ದೇಶದ ರ್ಯಾಲಿ, ದೇಶವನ್ನು ಒಗ್ಗೂಡಿಸುವ ರ್ಯಾಲಿ, ಹೀಗಾಗಿ ನಾನು ಇದಕ್ಕೆ ಸೇರಿಕೊಂಡೆ ಎಂದರು. ಈಗ ಎಲ್ಲೆಡೆ ದ್ವೇಷವನ್ನು ಹರಡಲಾಗುತ್ತಿದೆ ಮತ್ತು ಪ್ರೀತಿ ಮತ್ತು ಸಾಮರಸ್ಯದ ಹಾದಿ ಕಷ್ಟಕರವಾಗಿದೆ. ಈ ಪಾದಯಾತ್ರೆಯ ಮೂಲಕ ನೀವು ಪ್ರೀತಿಯನ್ನು ಗಳಿಸುತ್ತಿದ್ದೀರಿ. ಗೆಲುವು ನಮಗೆ ಅವಶ್ಯಕವಾಗಿದೆ ನಂಬಿಕೆ ಕಳೆದುಕೊಳ್ಳಬೇಡಿ ಎಂದರು.
💚💚💚 pic.twitter.com/grft3HLwUF
— Riteish Deshmukh (@Riteishd) November 12, 2022
ರಾಹುಲ್ ಜೊತೆ ಆದಿತ್ಯ ಠಾಕ್ರೆ ಪಾದಯಾತ್ರೆ
ಇನ್ನೂ ಕಾಂಗ್ರೆಸ್ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದ ಹಿಂಗೋಲಿಯ ಕಲಮ್ನೂರಿಯಲ್ಲಿ ಸಾಗುತ್ತಿದ್ದ ವೇಳೆ ಶಿವಸೇನೆ ಮುಖಂಡ ಹಾಗೂ ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ರಾಹುಲ್ ಗಾಂಧಿಗೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಆದಿತ್ಯ ಠಾಕ್ರೆ "ಭಾರತ್ ಜೋಡೋ ಯಾತ್ರೆಯು ರಾಜಕೀಯಕ್ಕಿಂತ ಹೆಚ್ಚು. ಇದು ಭಾರತದ ಕಲ್ಪನೆಗೆ ಸಂಬಂಧಿಸಿದೆ" ಎಂದು ತಿಳಿಸಿದರು. "ಈ ಯಾತ್ರೆ ಪ್ರಜಾಪ್ರಭುತ್ವಕ್ಕಾಗಿ, ದೇಶಕ್ಕಾಗಿ, ಪ್ರಜಾಪ್ರಭುತ್ವದ ಕಲ್ಪನೆಗಾಗಿ ಉದ್ದೇಶಿಸಿದ ರೋಚಕ ಯಾತ್ರೆ" ಎಂದು ಅವರು ಹೇಳಿದರು.
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಯು ಈಗಾಗಲೇ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣದ ಭಾಗಗಳಲ್ಲಿ ಯಶಸ್ವಿಯಾಗಿ ಪಾದಯಾತ್ರೆ ಮುಗಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ