ಅಮೆರಿಕಾ ವೀಸಾ ಬೇಕಾದರೆ ಫೇಸ್​ಬುಕ್, ಟ್ವಿಟರ್, ಇನ್​​ಸ್ಟಾಗ್ರಾಂ, ವಾಟ್ಸಪ್ ಮಾಹಿತಿ ಅಗತ್ಯ: ಟ್ರಂಪ್​ರಿಂದ ಹೊಸ ನೀತಿ


Updated:March 31, 2018, 9:04 AM IST
ಅಮೆರಿಕಾ ವೀಸಾ ಬೇಕಾದರೆ ಫೇಸ್​ಬುಕ್, ಟ್ವಿಟರ್, ಇನ್​​ಸ್ಟಾಗ್ರಾಂ, ವಾಟ್ಸಪ್ ಮಾಹಿತಿ ಅಗತ್ಯ: ಟ್ರಂಪ್​ರಿಂದ ಹೊಸ ನೀತಿ

Updated: March 31, 2018, 9:04 AM IST
ನ್ಯೂಸ್ 18 ಕನ್ನಡ

ವಾಷಿಂಗ್ಟನ್(ಮಾ.31): ನಿಮಗೆ ಅಮೆರಿಕಾ ವೀಸಾ ಬೇಕಾ? ಹಾಗಿದ್ದರೆ ನಿಮ್ಮ ಸೋಷಿಯಲ್ ಮೀಡಿಯಾದ ಮಾಹಿತಿ ಪೂರ್ತಿ ಕೊಡಲೇಬೇಕು. ಇದೇನು ಹೊಸ ರೂಲ್ಸ್ ಅಂತೀರಾ? ಇಲ್ಲಿದೆ ವಿವರ

ಅಮೆರಿಕದ ವೀಸಾಗೆ ಅರ್ಜಿದಾರರು ಫೋನ್, ಇಮೇಲ್ ಮಾಹಿತಿ ಕೊಡ್ಬೇಕು. ಅದರಲ್ಲೇನು ಸ್ಪೆಷಲ್ ಇಲ್ಲ. ಇದರ ಜೊತೆಗೆ ನಿಮ್ಮ ಸಾಮಾಜಿಕ ಜಾಲತಾಣಗಳ ಫುಲ್ ಡೀಟೈಲ್ಸ್ ಕೊಡಬೇಕು. ಅಂದ್ರೆ ಫೇಸ್​ಬುಕ್, ಟ್ವಿಟರ್, ಇನ್​​ಸ್ಟಾಗ್ರಾಂ, ವಾಟ್ಸಪ್ ಮುಂತಾದ ಸೋಷಿಯಲ್ ಮೀಡಿಯಾಗಳ ಹಿಸ್ಟರಿ ಎಲ್ಲಾ ಕೊಡ್ಬೇಕು. ಅಲ್ಲದೇ ಕಳೆದ ಐದು ವರ್ಷಗಳಲ್ಲಿ ನೀವು ಬಳಸಿದ ಫೋನ್ ಹಾಗೂ ಫೋನ್ ನಂಬರ್ ಕೂಡ ನೀಡಬೇಕು ಅಂತ ಟ್ರಂಪ್ ಸರ್ಕಾರ ಆದೇಶಿಸಿದೆ.

ದೇಶಕ್ಕೆ ಅಪಾಯ ಇರೋ ವ್ಯಕ್ತಿಗಳನ್ನ ತಡೆಯಲು ಹಾಗೂ ತಪಾಸಣೆ ಪ್ರಕ್ರಿಯೆಗಾಗಿ ಹೊಸ ನಿಯಮ ಮಾಡಲಾಗಿದೆ. ವಲಸೆರಹಿತ ವೀಸಾ ಮೇಲೆ ಅಮೆರಿಕಕ್ಕೆ ಬರುವವರು ಹೊಸ ನಿಯಮಗಳ ಪ್ರಶ್ನೆಗಳ ಪಟ್ಟಿಗೆ ಉತ್ತರ ನೀಡಬೇಕು ಅಂತ ಫೆಡರಲ್ ರಿಜಿಸ್ಟರ್ ಪೋಸ್ಟ್ ಮಾಡಿರುವ ದಾಖಲೆಯಲ್ಲಿ ಹೇಳಿದೆ.

ಈ ಹೊಸ ವೀಸಾ ನಿಯಮ ಸುಮಾರು 7,10,000 ವಲಸಿಗರಿಗೆ ಮತ್ತು 14 ಮಿಲಿಯನ್ ವಲಸೆ ರಹಿತ ವೀಸಾ ಅರ್ಜಿದಾರರ ಮೇಲೆ ಪರಿಣಾಮ ಬೀರಲಿದೆ.
First published:March 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...