ಬಿಜೆಪಿ ಜೊತೆ ಕಾಂಗ್ರೆಸ್ಸನ್ನೂ ದೂರವಿಡುವ ಕೆಸಿಆರ್ ಪ್ರಯತ್ನ ಸ್ತಬ್ಧ; ಮೇ 23ಕ್ಕೆ ಆಗಲಿದೆಯಾ ಅಚ್ಚರಿ ಬೆಳವಣಿಗೆ?

ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಕೆಸಿಆರ್ ಒಬ್ಬರೇ ಬದ್ಧರಾಗಿದ್ದಾರೆ. ಕೊನೆಯವರೆಗೂ ಅದೇ ನಿಲುವಿನೊಂದಿಗೆ ಕಾದು ನೋಡುವ ತಂತ್ರಕ್ಕೆ ಮೊರೆಹೋಗಲಿದ್ದಾರೆ.

Vijayasarthy SN | news18
Updated:May 8, 2019, 5:14 PM IST
ಬಿಜೆಪಿ ಜೊತೆ ಕಾಂಗ್ರೆಸ್ಸನ್ನೂ ದೂರವಿಡುವ ಕೆಸಿಆರ್ ಪ್ರಯತ್ನ ಸ್ತಬ್ಧ; ಮೇ 23ಕ್ಕೆ ಆಗಲಿದೆಯಾ ಅಚ್ಚರಿ ಬೆಳವಣಿಗೆ?
ಮಮತಾ ಬ್ಯಾನರ್ಜಿ ಮತ್ತು ಕೆ. ಚಂದ್ರಶೇಖರ್ ರಾವ್
  • News18
  • Last Updated: May 8, 2019, 5:14 PM IST
  • Share this:
ನವದೆಹಲಿ(ಮೇ 08): ಲೋಕಸಭೆ ಚುನಾವಣೆ ಮುಗಿಯಲು ಇನ್ನೆರಡು ಹಂತಗಳ ಮತದಾನ ಬಾಕಿ ಇವೆ. ಜನಾದೇಶ ತಿಳಿಯಲು 15 ದಿನ ಬಾಕಿ ಉಳಿದಿವೆ. ಈ ಹಂತದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಗಮನಾರ್ಹ ಪರಿವರ್ತನೆಯೊಂದು ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳನ್ನು ಸೇರಿಸಿ ತೃತೀಯ ಶಕ್ತಿ ನಿರ್ಮಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಸುಮ್ಮನಾಗಿದ್ದಾರೆ. ಎನ್​ಡಿಎಯೇತರ ಎಲ್ಲಾ ಪಕ್ಷಗಳೂ ಕಾಂಗ್ರೆಸ್ ಜೊತೆ ಕೈ ಜೋಡಿಸಲು ಸಿದ್ಧವಾಗಿ ನಿಂತಿವೆ. ಇದರ ಹಿಂದೆ ದೊಡ್ಡ ಲೆಕ್ಕಾಚಾರವೂ ಇದೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಚುನಾವಣೆ ಘೋಷಣೆಗೂ ಮುನ್ನವೇ ಪ್ರಾದೇಶಿಕ ಪಕ್ಷಗಳನ್ನಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಎನ್​ಡಿಎ ಮತ್ತು ಯುಪಿಎಯೇತರ ಮೈತ್ರಿಕೂಟ ರಚಿಸಲು ನಿರಂತರ ಪ್ರಯತ್ನ ಮಾಡಿದ್ದರು. ಅದಕ್ಕಾಗಿ ಚಂದ್ರಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್, ದೇವೇಗೌಡ, ಎಂ.ಕೆ. ಸ್ಟಾಲಿನ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ, ಲಾಲೂ ಪ್ರಸಾದ್ ಯಾದವ್, ನಿತೀಶ್ ಕುಮಾರ್ ಅವರೊಂದಿಗೆಲ್ಲಾ ಮಾತುಕತೆ ನಡೆಸಿದ್ದರು. ಕೇರಳದ ಕಮ್ಯೂನಿಸ್ಟ್ ಮುಖ್ಯಮಂತ್ರಿ ಪಿಣಾರಯಿ ವಿಜಯನ್ ಅವರನ್ನೂ ಕೆಸಿಆರ್ ಭೇಟಿಯಾಗಿದ್ದರು. ಆದರೆ, ಚುನಾವಣೆಯ ಒಂದೊಂದೇ ಹಂತದ ಮತದಾನ ಮುಕ್ತಾಯವಾದಂತೆಯಲ್ಲಾ ರಾಜಕೀಯ ಧ್ರುವೀಕರಣ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟು ಮೈತ್ರಿಕೂಟ ರಚಿಸುವುದು ಅಪಾಯದ ಕೆಲಸ ಎಂಬ ಅರಿವು ಈ ಪ್ರಾದೇಶಿಕ ಪಕ್ಷಗಳಿಗೆ ಬಂದಿದೆ. ಅಂತೆಯೇ, ಸ್ಟಾಲಿನ್, ಹೆಚ್.ಡಿ. ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಮೊದಲಾದವರು ಕಾಂಗ್ರೆಸ್ ಬಿಟ್ಟು ಸರಕಾರ ರಚಿಸುವುದು ಉಚಿತವಲ್ಲ ಎಂಬ ಸಲಹೆಯನ್ನು ಕೆಸಿಆರ್​ಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಸಿಆರ್ ಅವರು ತಮ್ಮ ತೃತೀಯ ರಂಗ ರಚನೆಯ ಪ್ರಯತ್ನವನ್ನು ನಿಲ್ಲಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಪಾಕ್ ಗಡಿಭಾಗದುದ್ದಕ್ಕೂ ‘ಭೀಷ್ಮ’ ಯುದ್ಧ ಟ್ಯಾಂಕರ್​ಗಳ ನಿಯೋಜನೆ?

ಆದರೆ, ಸದ್ಯದ ಮಟ್ಟಿಗೆ ತಮ್ಮ ಸಹ ಪ್ರಾದೇಶಿಕ ಮಿತ್ರರ ನಿಲುವು ಏನೇ ಇದ್ದರೂ ಕೆಸಿಆರ್ ಅವರಂತೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡರಿಂದಲೂ ದೂರ ಉಳಿದು, ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದಾರೆ. ಚುನಾವಣೆ ಫಲಿತಾಂಶ ಬಂದ ಬಳಿಕ ಅವರು ಮಹಾಮೈತ್ರಿಕೂಟಕ್ಕೆ ಹಿಂಬಾಗಿಲ ಪ್ರವೇಶ ಮಾಡುವ ಸಾಧ್ಯತೆ ಇದೆ.

ಇದೇ ವೇಳೆ, ರಾಷ್ಟ್ರ ರಾಜಕಾರಣದಲ್ಲಿ ಧ್ರುವೀಕರಣದ ಪರ್ವ ಶುರುವಾಗುತ್ತಿದೆ. ಎಲ್ಲಾ ವಿಪಕ್ಷಗಳ ಧ್ಯೇಯ ಸದ್ಯಕ್ಕೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಾಗಿದೆ. ಅದಕ್ಕಾಗಿ ಪ್ರತಿಪಕ್ಷಗಳೆಲ್ಲವೂ ಒಗ್ಗೂಡಿ ರಣತಂತ್ರ ರೂಪಿಸುತ್ತಿವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದರ ಜೊತೆಗೆ ಅತಂತ್ರ ಲೋಕಸಭೆ ನಿರ್ಮಾಣವಾಗುವ ಸಂಭವ ಹೆಚ್ಚು ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮೊದಲು ಸರಕಾರ ರಚಿಸುವ ಅವಕಾಶ ಸಿಗಬಾರದು ಎಂಬುದು ವಿಪಕ್ಷಗಳ ತಂತ್ರವಾಗಿದೆ.

ಇದನ್ನೂ ಓದಿ: 'ಚೌಕಿದಾರ್​ ಚೋರ್​ ಹೈ' ಹೇಳಿಕೆ: ಸುಪ್ರೀಂ ಕೋರ್ಟ್​ ಎದುರು ಬೇಷರತ್​ ಕ್ಷಮೆಯಾಚಿಸಿದ ರಾಹುಲ್​ ಗಾಂಧಿ

ಒಂದು ವೇಳೆ, ಎನ್​ಡಿಎ ಮತ್ತು ಯುಪಿಎ ಬಿಟ್ಟು ಪ್ರಾದೇಶಿಕ ಪಕ್ಷಗಳು ಒಟ್ಟಾದರೆ ಅತಿ ಹೆಚ್ಚು ಸ್ಥಾನವಿರುವ ಮೈತ್ರಿಕೂಟಕ್ಕೆ ಸರಕಾರ ರಚಿಸಲು ರಾಷ್ಟ್ರಪತಿಗಳಿಂದ ಮೊದಲ ಕರೆ ಹೋಗಬಹುದು. ಇದನ್ನು ತಪ್ಪಿಸಲು ಎನ್​ಡಿಎಯೇತರ ಎಲ್ಲಾ ಪಕ್ಷಗಳನ್ನ ಒಗ್ಗೂಡಿಸಿದರೆ ಅತಿ ಹೆಚ್ಚು ಸಂಖ್ಯೆಗಳನ್ನ ತೋರಿಸಿ ರಾಷ್ಟ್ರಪತಿಗಳಿಂದ ಮೊದಲ ಬುಲಾವ್ ಪಡೆಯಬಹುದು ಎಂಬುದು ವಿಪಕ್ಷಗಳ ಲೆಕ್ಕಾಚಾರ.ಮೇ 23ಕ್ಕೆ ಫಲಿತಾಂಶ ಬರುವ 2 ದಿನ ಮುಂಚೆ, ಅಂದರೆ ಮೇ 21ರಂದು ಎಲ್ಲಾ ಪ್ರತಿಪಕ್ಷಗಳೂ ಸಭೆ ಸೇರಿ ಕಾರ್ಯತಂತ್ರ ರೂಪಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿವೆ. ಕಾಂಗ್ರೆಸ್ ಪಕ್ಷವೇ ಈ ವಿಪಕ್ಷಗಳ ನೇತೃತ್ವ ವಹಿಸಲಿದೆ. ಇವತ್ತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಮೇ 21ಕ್ಕೆ ಎಲ್ಲಾ ವಿಪಕ್ಷಗಳ ಸಭೆ ಕರೆಯಬೇಕೆಂಬ ಸಲಹೆ ನೀಡಿದರೆನ್ನಲಾಗಿದೆ.

ಇದನ್ನೂ ಓದಿ: ಮೇ 23ರಂದು ತಿಳಿಯಲಿದೆ ನಿಮ್ಮ ಮತದ ಮೌಲ್ಯ!

ಅತಂತ್ರ ಫಲಿತಾಂಶ ಬಂದಾಗ ಸರಕಾರ ರಚನೆಗೆ ಯಾವ ಪಕ್ಷವನ್ನು ಮೊದಲು ಕರೆಯಬೇಕೆಂಬ ಲಿಖಿತ ನಿಯಮವಿಲ್ಲ. ಅತೀ ಹೆಚ್ಚು ಸ್ಥಾನ ಪಡೆದ ಪಕ್ಷವನ್ನು ಸಾಮಾನ್ಯವಾಗಿ ಕರೆಯಲಾಗುತ್ತದೆ. ಆದರೆ, ಇದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟ ನಿರ್ಧಾರವಾಗಿದೆ. ಒಂದು ವೇಳೆ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದರೆ ರಾಷ್ಟ್ರಪತಿಗಳು ಆ ಪಕ್ಷವನ್ನೇ ಮೊದಲು ಕರೆಯಬಹುದು. ಅಥವಾ, ಎನ್​ಡಿಎಯೇತರ ಪಕ್ಷಗಳ ಸ್ಥಾನಗಳ ಸಂಖ್ಯೆ ಬಹುಮತದ ಗಡಿ ದಾಟಿದ್ದರೆ ವಿಪಕ್ಷಗಳನ್ನೇ ಸರಕಾರ ರಚನೆಗೆ ಮೊದಲು ಕರೆಯಬಹುದು. ಅದು ರಾಷ್ಟ್ರಪತಿಗಳ ತೀರ್ಮಾನಕ್ಕೆ ಬಿಟ್ಟ ವಿಚಾರ. ಆದರೆ, ಇಡೀ ವಿಪಕ್ಷಗಳು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ರಾಷ್ಟ್ರಪತಿಗಳ ಬಳಿ ಹೋಗಿ ಮನವಿ ಮಾಡಿ ಪ್ರಭಾವ ಬೀರಲು ಪ್ರಯತ್ನಿಸಬಹುದು.

ಅತಿ ಹೆಚ್ಚು ಸ್ಥಾನ ಪಡೆದ ಪಕ್ಷವನ್ನು ಬಿಟ್ಟು ಅನ್ಯಪಕ್ಷಗಳಿಗೆ ಸರಕಾರ ರಚಿಸುವ ಅವಕಾಶ ಸಿಕ್ಕ ಉದಾಹರಣೆಗಳು ಈ ಹಿಂದೆ ಕೆಲವಾರು ಇವೆ. ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಪಡೆದಿದ್ದರೂ ಬಿಜೆಪಿಗೆ ಸರಕಾರ ರಚಿಸುವ ಮೊದಲ ಅವಕಾಶ ಸಿಕ್ಕಿತ್ತು. ಕರ್ನಾಟಕದಲ್ಲೂ ಕಾಂಗ್ರೆಸ್  ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಗಿಂತ ಮೊದಲು ಸರಕಾರ ರಚಿಸಲು ಪ್ರಯತ್ನಿಸಿದರೂ, ರಾಜ್ಯಪಾಲರು ಬಿಜೆಪಿಗೆ ಅವಕಾಶ ಕೊಟ್ಟಿದ್ದರು. ಇನ್ನು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ಧಾಗ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರು 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಅವಕಾಶ ಕೊಟ್ಟಿದ್ದರು.

First published: May 8, 2019, 4:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading