• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Hunger Strike: ಮಹಿಳಾ ಮೀಸಲಾತಿಗಾಗಿ ರಾ‍ಷ್ಟ್ರ ರಾಜಧಾನಿಯಲ್ಲಿ ಕೆಸಿಆರ್‌ ಪುತ್ರಿ ಉಪವಾಸ ಸತ್ಯಾಗ್ರಹ; 12 ವಿಪಕ್ಷಗಳ ಬೆಂಬಲ

Hunger Strike: ಮಹಿಳಾ ಮೀಸಲಾತಿಗಾಗಿ ರಾ‍ಷ್ಟ್ರ ರಾಜಧಾನಿಯಲ್ಲಿ ಕೆಸಿಆರ್‌ ಪುತ್ರಿ ಉಪವಾಸ ಸತ್ಯಾಗ್ರಹ; 12 ವಿಪಕ್ಷಗಳ ಬೆಂಬಲ

ಕೆ ಕವಿತಾ

ಕೆ ಕವಿತಾ

ಮಹಿಳಾ ಮೀಸಲಾತಿ ವಿಧೇಯಕಕ್ಕಾಗಿ ತಾವು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವಂತೆ ಕವಿತಾ ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದು, ವೀಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರಿಗೆ ಆಹ್ವಾನ ನೀಡಿದ್ದಾರೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • New Delhi, India
  • Share this:

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಪುತ್ರಿ ಮತ್ತು ಭಾರತ ರಾಷ್ಟ್ರೀಯ ಸಮಿತಿ (BRS) ಪಕ್ಷದ ನಾಯಕಿ ಕೆ ಕವಿತಾ (K Kavitha) ಅವರು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ (Hunger Strike) ನಡೆಸುತ್ತಿದ್ದಾರೆ. ಕವಿತಾ ಅವರ ಸತ್ಯಾಗ್ರಹಕ್ಕೆ ಈಗಾಗಲೇ 12 ರಾಜಕೀಯ ಪಕ್ಷಗಳು ಮತ್ತು ಮಹಿಳಾ ಸಂಘಟನೆಗಳು ಬೆಂಬಲ ಘೋಷಿಸಿದ್ದು, ಈ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ಪಕ್ಷಗಳು ಘೋಷಿಸಿವೆ.


ಈ ಮಧ್ಯೆ ಮಹಿಳಾ ಮೀಸಲಾತಿ ವಿಧೇಯಕಕ್ಕಾಗಿ ತಾವು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವಂತೆ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ನಾಯಕಿ ಕವಿತಾ ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರಿಗೆ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. 2024 ಮತ್ತು 2019ರ ಲೋಕಸಭೆ ಚುನಾವಣೆಗಳ ಪ್ರಚಾರದ ವೇಳೆ ಬಿಜೆಪಿಯು ಸಂಸತ್‌ನಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವುದಾಗಿ ಭರವಸೆಗಳನ್ನು ನೀಡಿತ್ತು. ಆದರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ ಅದು ತನ್ನ ಮಾತಿಗೆ ಬದ್ಧವಾಗಿ ನಡೆದುಕೊಂಡಿಲ್ಲ ಎಂದು ಕೆ. ಕವಿತಾ ಆರೋಪಿಸಿದ್ದಾರೆ.


ಇದನ್ನೂ ಓದಿ: Fraud Thing: ದೆಹಲಿಯಿಂದ ದುಬೈಗೆ ಉಚಿತ ಪ್ರಯಾಣವಂತೆ! ಟ್ರಾವೆಲ್ ಕಂಪನಿಗೆ ಮೋಸ ಮಾಡಿದ್ರಾ?


ಕಾಂಗ್ರೆಸ್‌ ಬೆಂಬಲ ಕೋರಿದ ಕವಿತಾ


ಮಹಿಳಾ ಮೀಸಲಾತಿ ವಿಧೇಯಕಕ್ಕಾಗಿ ತಾವು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುವಂತೆ ಕವಿತಾ ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದು, ವೀಶೇಷವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರಿಗೆ ಆಹ್ವಾನ ನೀಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನೂ ಕವಿತಾ ಅವರು ಶ್ಲಾಘಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಕವಿತಾ, ‘ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸುವುದು ಮಾತ್ರವಲ್ಲದೆ, ಅದಕ್ಕೆ ಬೆಂಬಲ ನೀಡುವಂತೆ ಎಲ್ಲ ಪಕ್ಷಗಳನ್ನೂ ಜತೆಗೂಡಿಸಿದ ಮತ್ತು ಅದನ್ನು ಅಂಗೀಕರಿಸಲು ಮಾಡಿದ ಪ್ರಯತ್ನಕ್ಕಾಗಿ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಜತೆಗೆ ಈ ಸಂಬಂಧ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನಗಳನ್ನು ಕೂಡ ಶ್ಲಾಘಿಸಿದ್ದಾರೆ.


ಇದನ್ನೂ ಓದಿ: Flower Pots Theft: ದೆಹಲಿಯ G 20 ಸಭೆಗಾಗಿ ಇರಿಸಲಾಗಿದ್ದ ಹೂ ಕುಂಡಗಳನ್ನೇ ಕದ್ದೊಯ್ದ ಐಷಾರಾಮಿ ಕಳ್ಳರು! ವಿಡಿಯೋ ವೈರಲ್


ಮಹತ್ವ ಪಡೆದ ಕವಿತಾ ನಡೆ


ಇನ್ನು ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ನಾಯಕಿ ಕವಿತಾ ಅವರ ಹೇಳಿಕೆಯು ರಾಷ್ಟ್ರಾದ್ಯಂತ ರಾಜಕೀಯ ಮಹತ್ವ ಪಡೆದುಕೊಂಡಿದ್ದು, ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಎಲ್ಲ ವಿರೋಧ ಪಕ್ಷಗಳನ್ನು ಜತೆಗೂಡಿಸಬೇಕು ಎಂದು 2019ರಿಂದಲೇ ಪ್ರಯತ್ನ ಆರಂಭಿಸಿರುವ ಕೆ ಚಂದ್ರಶೇಖರ್ ರಾವ್, ಅದರಿಂದ ಕಾಂಗ್ರೆಸ್ ಅನ್ನು ದೂರವೇ ಇರಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ದೇಶಕ್ಕೆ ವಿಫಲ ಆಡಳಿತ ನೀಡಿವೆ ಎಂದು ಅವರು ಆರೋಪಿಸಿದ್ದಾರೆ.


ಇನ್ನೊಂದು ಕಡೆ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ನಾಯಕಿ ಕವಿತಾ ಅವರಿಗೆ ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಾರ್ಚ್ 9 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿತ್ತು. ಇಡಿ ಸೂಚನೆಯನ್ನು ತಿರಸ್ಕರಿಸಿದ ಕವಿತಾ, ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ಕೋರಿದ್ದರು. ಇ.ಡಿ ಈ ಮನವಿಯನ್ನು ನಿರಾಕರಿಸಿದ ಬೆನ್ನಲ್ಲೇ, ಮತ್ತೊಂದು ಪತ್ರ ಬರೆದ ಕವಿತಾ, ಕಾನೂನಿಗೆ ಗೌರವಿಸುವ ಹಾಗು ದೇಶದ ಜವಾಬ್ದಾರಿಯುತ ಪ್ರಜೆಯಾಗಿ ನಾನು ಮಾರ್ಚ್ 11ರಂದು ವಿಚಾರಣೆಗೆ ಹಾಜರಾಗುತ್ತೇನೆಂದು ಪತ್ರದಲ್ಲಿ ತಿಳಿಸಿದ್ದರು.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು