• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಎಂಎಸ್​ಪಿ ಎಂದರೇನು? ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ರೈತರ ಭಯಕ್ಕೆ ಮತ್ತು ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಎಂಎಸ್​ಪಿ ಎಂದರೇನು? ಕೇಂದ್ರ ಕೃಷಿ ಕಾಯ್ದೆಯ ವಿರುದ್ಧ ರೈತರ ಭಯಕ್ಕೆ ಮತ್ತು ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಎಂಎಸ್​ಪಿ ಮೂಲಭೂತವಾಗಿ ಬೆಲೆ ಕುಸಿತದ ಸಂದರ್ಭದಲ್ಲಿ ರೈತರಿಗೆ ಸುರಕ್ಷತಾ ಜಾಲವನ್ನು ಒದಗಿಸಲು ಸರ್ಕಾರವು ಕೈಗೊಂಡ ಮಾರುಕಟ್ಟೆ ಹಸ್ತಕ್ಷೇಪದ ಒಂದು ರೂಪವಾಗಿದೆ. ಇದು ಬೆಳೆಗಳಿಗೆ ಒಂದು ಬೆಲೆಯಾಗಿದ್ದು, ಸರ್ಕಾರವು ರೈತರಿಗೆ ಎಲ್ಲಾ ವೆಚ್ಚದಲ್ಲಿ ಮತ್ತು ಎಲ್ಲಾ ಸಂದರ್ಭಗಳಲ್ಲೂ ಖಾತರಿ ನೀಡುತ್ತದೆ. 

ಮುಂದೆ ಓದಿ ...
  • Share this:

ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯ ವಿರುದ್ಧ ಇಡೀ ದೇಶದ ರೈತರು ಇದೀಗ ಸಿಡಿದೆದ್ದಿದ್ದಾರೆ. ಕಳೆದ ಒಂದು ವಾರದಿಂದ ರಾಷ್ಟ್ರವ್ಯಾಪಿ ಚಳುವಳಿಗಳು ನಡೆಯುತ್ತಿವೆ. ದೆಹಲಿ ಚಲೋ ಚಳುವಳಿ ನಡೆಸುತ್ತಿರುವ ರೈತರು ಕೇಂದ್ರ ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿದ್ದಾರೆ. ಅಸಲಿಗೆ ಕೇಂದ್ರದ ಕೃಷಿ ಕಾನೂನುಗಳಾದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ, ರೈತರ ಬೆಲೆ ಖಾತರಿಯ ಒಪ್ಪಂದ ಕಾಯ್ದೆ ಮತ್ತು ಕೃಷಿ ಸೇವೆಗಳು ಮತ್ತು ಅಗತ್ಯ ಸರಕುಗಳ ಕಾಯ್ದೆಗಳು ರೈತರ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಮತ್ತು ಈ ಮೂಲಕ ಕಾರ್ಪೊರೇಟ್​ ಸಂಸ್ಥೆಗಳ ಪರವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.


ಪಂಜಾಬ್, ಹರಿಯಾಣ ಉತ್ತರ ಪ್ರದೇಶದಿಂದ ಲಕ್ಷಾಂತರ ರೈತರು ಇದೇ ಕಾರಣಕ್ಕೆ ದೆಹಲಿಯಲ್ಲಿನ ಹೋರಾಟದ ಕಣಕ್ಕೆ ಧುಮುಕಿದ್ದಾರೆ. ಇವರನ್ನು ಗಡಿಯಲ್ಲೇ ತಡೆದು ನಿಲ್ಲಿಸಲು ಸರ್ಕಾರ ಮುಂದಾದರೂ ಸಹ ಅದು ಫಲ ನೀಡಿಲ್ಲ. ಕೊನೆಗೂ ಕೇಂದ್ರ ಸರ್ಕಾರ ದೆಹಲಿಯಲ್ಲಿ ರೈತರಿಗೆ ಪ್ರತಿಭಟಿಸಲು ಅವಕಾಶ ನೀಡಿದೆ. ಅಲ್ಲದೆ, ಮಂಗಳವಾರ ಮಾತುಕತೆಗೂ ಕರೆದಿದೆ.


ಈ ನಡುವೆ ಕನಿಷ್ಟ ಬೆಂಬಲ ಬೆಲೆ ಮೂಲಕ ರೈತರಿಗೆ ನ್ಯಾಯಯುತ ಬೆಲೆ ನೀಡಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಸರ್ಕಾರದ ಖರೀದಿ ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರಾದರೂ ಅದು ಕಾನೂನಾಗುವ ವರೆಗೆ ರೈತರು ಪಟ್ಟು ಸಡಿಲಿಸುವಂತೆ ಕಾಣುತ್ತಿಲ್ಲ. ಅಸಲಿಗೆ ಕನಿಷ್ಟ ಬೆಂಬಲ ಬೆಲೆ ಎಂಬುದು ರೈತರಿಗೆ ಏಕೆ ಅಷ್ಟು ಅವಶ್ಯಕ ವಿಚಾರವಾಗಿದೆ? ರೈತರಲ್ಲಿನ ಭಯ ಯಾವುದು? ಇಲ್ಲಿದೆ ಮಾಹಿತಿ.


ರೈತರನ್ನು ಕಾಡುತ್ತಿರುವ ಭಯ ಯಾವುದು?


ಸೆಪ್ಟೆಂಬರ್ 27 ರಂದು ಕೇಂದ್ರವು ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರೈತರು ವಿರೋಧಿಸಿದ್ದಾರೆ. ಅವರು ಕಾನೂನುಗಳನ್ನು ಜಾರಿಗೆ ತರುವ ಮೊದಲು ಯಾವುದೇ ಪಾಲುದಾರರನ್ನು ಸಂಪರ್ಕಿಸಿಲ್ಲ ಎಂದು ಆರೋಪಿಸಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಕಾನೂನುಗಳ ಕಾರಣದಿಂದಾಗಿ ಕನಿಷ್ಠ ಬೆಂಬಲ ಬೆಲೆಗಳ (ಎಂಎಸ್‌ಪಿ) ಸಂಗ್ರಹಣೆಯ ಅಂತ್ಯವಾಗಲಿದೆ ಎಂಬುದು ರೈತರ ದೊಡ್ಡ ಭಯ.


ಆದರೆ, ಎಂಎಸ್‌ಪಿ ಬಗ್ಗೆ ಯಾವುದೇ ಅನಿಶ್ಚಿತತೆಯನ್ನು ಕೇಂದ್ರ ನಿರಾಕರಿಸಿದೆ. ಕಾನೂನುಗಳು ಭಾರತದಲ್ಲಿನ ಕೃಷಿ ವ್ಯವಸ್ಥೆಯನ್ನು ಪರಿವರ್ತಿಸುತ್ತದೆ ಮತ್ತು ರೈತರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಅವಕಾಶ ನೀಡುತ್ತದೆ ಎಂದು ಕೇಂದ್ರವು ಮತ್ತೆ ಮತ್ತೆ ಪ್ರತಿಪಾದಿಸಿದೆ. ಆದರೆ, ಇದು ರೈತರಿಗೆ ತೃಪ್ತಿ ತಂದಿಲ್ಲ.


ಕನಿಷ್ಟ ಬೆಂಬಲ ಬೆಲೆ (ಎಂಎಸ್​ಪಿ) ಎಂದರೇನು?


ಎಂಎಸ್​ಪಿ ಮೂಲಭೂತವಾಗಿ ಬೆಲೆ ಕುಸಿತದ ಸಂದರ್ಭದಲ್ಲಿ ರೈತರಿಗೆ ಸುರಕ್ಷತಾ ಜಾಲವನ್ನು ಒದಗಿಸಲು ಸರ್ಕಾರವು ಕೈಗೊಂಡ ಮಾರುಕಟ್ಟೆ ಹಸ್ತಕ್ಷೇಪದ ಒಂದು ರೂಪವಾಗಿದೆ. ಇದು ಬೆಳೆಗಳಿಗೆ ಒಂದು ಬೆಲೆಯಾಗಿದ್ದು, ಸರ್ಕಾರವು ರೈತರಿಗೆ ಎಲ್ಲಾ ವೆಚ್ಚದಲ್ಲಿ ಮತ್ತು ಎಲ್ಲಾ ಸಂದರ್ಭಗಳಲ್ಲೂ ಖಾತರಿ ನೀಡುತ್ತದೆ.


ಇತ್ತೀಚಿನ ದಿನಗಳಲ್ಲಿ ರೈತರ ಲಾಭದ ಪ್ರಮಾಣವು ಕುಸಿಯುತ್ತಿರುವ ಕಾರಣದಿಂದಾಗಿ ಕನಿಷ್ಟ ಬೆಂಬಲ ಬೆಲೆ ಎಂಬುದು ತೀರಾ ಅಗತ್ಯವಾದ ವಿಚಾರವಾಗಿದೆ ಎಂದು ವರದಿಯೊಂದು ತಿಳಿಸಿದೆ ಎಂದರೆ ಇದರ ಅನಿವಾರ್ಯತೆಯನ್ನು ತಿಳಿದುಕೊಳ್ಳಬಹುದು.  ಹೊಸ ಕಾನೂನುಗಳಲ್ಲಿ  2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಕೇಂದ್ರ ಹೊಂದಿದೆಯಾದರೂ, ಇದರಿಂದ ಕನಿಷ್ಟ ಬೆಂಬಲ ಬೆಲೆ ಪದ್ಧತಿ ರದ್ದಾದರೆ ತಮಗೆ ನಷ್ಟವೇ ಹೆಚ್ಚಲಿದೆ ಎಂಬುದು ರೈತರ ವಾದ.


ಕನಿಷ್ಟ ಬೆಂಬಲ ಬೆಲೆಯನ್ನು ಯಾರು ನಿಗದಿಪಡಿಸುತ್ತಾರೆ?


ಸ್ವಾಮಿನಾಥನ್ ಸಮಿತಿಯ ಮೂಲ ಶಿಫಾರಸು ಎಂಎಸ್​ಪಿಯನ್ನು "ತೂಕದ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50 ಶೇಕಡಾ ಹೆಚ್ಚು ಹಣ ನೀಡಬೇಕು" ಎನ್ನುತ್ತದೆ. ಆದಾಗ್ಯೂ, ಉತ್ಪಾದನೆಯ ಸರಾಸರಿ ವೆಚ್ಚವನ್ನು ಏನೆಂದು ವ್ಯಾಖ್ಯಾನಿಸಲು ಸಮಿತಿ ವಿಫಲವಾಗಿದೆ.


ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸಿನ ಆಧಾರದ ಮೇಲೆ ಸರ್ಕಾರವು 22 ಕಡ್ಡಾಯ ಕೃಷಿ ಬೆಳೆಗಳ ಎಂಎಸ್‌ಪಿಯನ್ನು ನಿಗದಿಪಡಿಸುತ್ತದೆ. ಬೆಲೆ ಏರಿಳಿತಗಳಿಂದ ರಕ್ಷಿಸಲ್ಪಟ್ಟ ಬೆಳೆಗಳ ಪಟ್ಟಿಯಲ್ಲಿ 14 ಖಾರಿಫ್ ಬೆಳೆಗಳು, ಆರು ರಬಿ ಬೆಳೆಗಳು ಮತ್ತು ಎರಡು ವಾಣಿಜ್ಯ ಬೆಳೆಗಳು ಸೇರಿವೆ. ಕಬ್ಬಿನ ನ್ಯಾಯಯುತ ಮತ್ತು ಸಂಭಾವನೆ ದರವನ್ನು (ಎಫ್‌ಆರ್‌ಪಿ) ನಿಗದಿಪಡಿಸುವ ಜವಾಬ್ದಾರಿಯೂ ಸಿಸಿಎಪಿಗೆ ಇದೆ. ಸಿಎಸಿಪಿ ದೇಶೀಯ ಮತ್ತು ಅಂತರರಾಷ್ಟ್ರೀಯ ಬೆಲೆಗಳು, ಅಂತರ ಬೆಳೆ ಬೆಲೆ ಸಮಾನತೆ, ಒಟ್ಟಾರೆ ಬೇಡಿಕೆ-ಪೂರೈಕೆ ಪರಿಸ್ಥಿತಿ ಮತ್ತು ಹಣದುಬ್ಬರದ ಮೇಲೆ ಎಂಎಸ್​ಪಿಯ ಪರಿಣಾಮದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ : ರೈತ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ರೈತರ ಹೋರಾಟಕ್ಕೆ ನಮ್ಮ ಬೆಂಬಲವಿದೆ; ಸಿದ್ದರಾಮಯ್ಯ


ಎಂಎಸ್​ಪಿ ಏಕೆ ಬೇಕು?


1960 ರ ದಶಕದಲ್ಲಿ, ಭಾರತವು ಅನೇಕ ವರ್ಷಗಳ ಬರಗಾಲದಿಂದಾಗಿ ಆಹಾರದ ಕೊರತೆಯನ್ನು ಎದುರಿಸಿದ ಸಂದರ್ಭದಲ್ಲಿ, ಆಹಾರದ ಮೀಸಲು ದಾಸ್ತಾನುಗಳನ್ನು ಕಾಪಾಡಿಕೊಳ್ಳಲು, ಘೋಷಿಸುವ ಮೂಲಕ ರೈತರಿಗೆ ಬೆಲೆ ಬೆಂಬಲವನ್ನು ಒದಗಿಸಲು, ವಿವಿಧ ಸರಕುಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಂಗ್ರಹಿಸಲು ಮತ್ತು ಧಾನ್ಯವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ.


ಸರ್ಕಾರ ಎಷ್ಟು ಖರೀದಿಸುತ್ತದೆ?


ಎಲ್ಲಾ 24 ಸರಕುಗಳಲ್ಲಿ, ಗೋಧಿ ಮತ್ತು ಅಕ್ಕಿಗೆ ಸರ್ಕಾರದ ಸಂಗ್ರಹವು ಹೆಚ್ಚು. ದೇಶದಲ್ಲಿ ಉತ್ಪಾದನೆಯಾಗುವ ಎಲ್ಲಾ ಗೋಧಿ ಮತ್ತು ಅಕ್ಕಿಗಳಲ್ಲಿ ಶೇ.30 ರಷ್ಟು ಮತ್ತು ಇತರ ಸರಕುಗಳಲ್ಲಿ ಶೇ 6-7ರಷ್ಟು ದಾಸ್ತಾನನ್ನು ಕೇಂದ್ರ ಸರ್ಕಾರ ಸಂಗ್ರಹಿಸುತ್ತದೆ.

First published: