ಹಿಂದುತ್ವದ ಕಡೆ ಮತ್ತೆ ವಾಲಿರುವ ಬಿಜೆಪಿಗೆ ಐದು ರಾಜ್ಯಗಳ ಚುನಾವಣೆಯಲ್ಲಿ ಸ್ಟಾರ್​ ಪ್ರಚಾರಕರಾಗಿದ್ದು ಆದಿತ್ಯನಾಥ್​

ಮಧ್ಯಪ್ರದೇಶದಲ್ಲಿ 17, ಛತ್ತೀಸ್​ಗಢ್​ದಲ್ಲಿ 23 ಹಾಗೂ ರಾಜಸ್ಥಾನದಲ್ಲಿ 26 ಸಮಾವೇಶಗಳಲ್ಲಿ ಯೋಗಿ ಪ್ರಚಾರ ನಡೆಸಿದ್ದಾರೆ. ದಕ್ಷಿಣ ಭಾರತದ ಹೊಸ ರಾಜ್ಯವಾಗಿರುವ ತೆಲಂಗಾಣದಲ್ಲಿ ಕೂಡ 8 ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ಪರ ಮತಯಾಚಿಸಿದ್ದಾರೆ.

Seema.R | news18
Updated:December 7, 2018, 2:07 PM IST
ಹಿಂದುತ್ವದ ಕಡೆ ಮತ್ತೆ ವಾಲಿರುವ ಬಿಜೆಪಿಗೆ ಐದು ರಾಜ್ಯಗಳ ಚುನಾವಣೆಯಲ್ಲಿ ಸ್ಟಾರ್​ ಪ್ರಚಾರಕರಾಗಿದ್ದು ಆದಿತ್ಯನಾಥ್​
ಯೋಗಿ ಆದಿತ್ಯನಾಥ್​
Seema.R | news18
Updated: December 7, 2018, 2:07 PM IST
ಪರನ್ಶು ಮಿಶ್ರಾ 

ಲಕ್ನೋ (ಡಿ.7): ಕಳೆದ ಒಂದು ತಿಂಗಳಿನಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಬಿಡುವಿಲ್ಲದ ರಾಜಕೀಯ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಐದೂ ರಾಜ್ಯಗಳಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದ ಆದಿತ್ಯನಾಥ್​ 74 ಸಮಾವೇಶಗಳಲ್ಲಿ ಭಾಗಿಯಾಗಿ ದಾಖಲೆ ಬರೆದಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಣ್ಣಿಸಲಾಗುತ್ತಿರುವ ಈ ಐದು ರಾಜ್ಯಗಳ ಚುನಾವಣೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ.  ಇದಕ್ಕಾಗಿ ಕೇಸರಿ ಪಾಳೆಯದ ರಾಯಭಾರಿ ಎಂದೇ ಕರೆಸಿಕೊಳ್ಳುವ ಯೋಗಿ ಆದಿತ್ಯನಾಥ್​, ಪ್ರಧಾನಿ ನರೇಂದ್ರ ಮೋದಿಗಿಂತ ಅಧಿಕ ಸಂಖ್ಯೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇದಕ್ಕೆ ಮೂಲ ಕಾರಣ ಬಿಜೆಪಿಯ 'ಹಿಂದುತ್ವ' ಅಜೆಂಡಾ. ಈ ಐದು ರಾಜ್ಯಗಳ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಗೆ ಹಿಂದುತ್ವದ ಬಾವುಟವನ್ನೇ ಹಾರಿಸಲು ಬಿಜೆಪಿ ನಿರ್ಧರಿಸಿದಂತೆ ಭಾಸವಾಗುತ್ತಿದೆ. ಅದಕ್ಕಾಗಿಯೇ ಬೂದಿ ಮುಚ್ಚಿದ ಕೆಂಡದಂತಿದ್ದ ರಾಮ ಮಂದಿರ ನಿರ್ಮಾಣ ಮತ್ತೆ ಮುನ್ನಲೆಗೆ ಬಂದಿದೆ.

ಯಾವುದೇ ಸ್ಟಾರ್​ ಪ್ರಚಾರಕರಿಗಿಂತಲೂ ಕಡಿಮೆ ಇಲ್ಲದಂತೆ ಯೋಗಿ ಆದಿತ್ಯನಾಥ್​ ಪ್ರಚಾರ ನಡೆಸಿ ಜನರ ಮತಯಾಚಿಸಿದ್ದಾರೆ. ಈ ಬೆಳವಣಿಗೆ ಯೋಗಿ ಆದಿತ್ಯನಾಥ್​ ​ ಬಿಜೆಪಿಯ ಸ್ಟಾರ್​ ಪ್ರಚಾರಕ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಅದರ ಜೊತೆಜೊತೆಗೆ  ಚುನಾವಣೆ ಹತ್ತಿರವಾಗುತ್ತ ಬಂದಾಗ ಬದಲಾಗುವ ರಾಜಕೀಯ ತಂತ್ರಗಳನ್ನು ತೋರಿಸುತ್ತದೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ್​ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ  ಕಾಂಗ್ರೆಸ್​ ಪ್ರಬಲ ಪೈಪೋಟಿ ನೀಡುತ್ತಿದೆ. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಈ ಮಟ್ಟದ ಪ್ರತಿರೋಧ ಕಾಂಗ್ರೆಸ್​ನಿಂದ ಬಿಜೆಪಿಗೆ ಎದುರಾಗಿದೆ. ಈ ಎಲ್ಲಾ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ, ಜನಸಾಮಾನ್ಯರಿಂದ ವ್ಯಕ್ತವಾಗಿದ್ದಂತೂ ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ಕಟ್ಟರ್​ ಹಿಂದುತ್ವ ಪ್ರದರ್ಶನ ಬಿಜೆಪಿಗೆ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಟ್ಟರ್​ ಹಿಂದುತ್ವದ ಪ್ರಚಾರಕ ಯೋಗಿ ಆದಿತ್ಯನಾಥ್​ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು.

ಮಧ್ಯಪ್ರದೇಶದಲ್ಲಿ 17, ಛತ್ತೀಸ್​ಗಢ್​ದಲ್ಲಿ 23 ಹಾಗೂ ರಾಜಸ್ಥಾನದಲ್ಲಿ 26 ಸಮಾವೇಶಗಳಲ್ಲಿ ಯೋಗಿ ಪ್ರಚಾರ ನಡೆಸಿದ್ದಾರೆ. ದಕ್ಷಿಣ ಭಾರತದ ಹೊಸ ರಾಜ್ಯವಾಗಿರುವ ತೆಲಂಗಾಣದಲ್ಲಿ ಕೂಡ 8 ಸಮಾವೇಶದಲ್ಲಿ ಭಾಗಿಯಾಗಿ ಪಕ್ಷದ ಪರ ಮತಯಾಚಿಸಿದ್ದಾರೆ. ಐದು ರಾಜ್ಯಗಳ ಚುನಾವಣೆಗಾಗಿ ಬಿಜೆಪಿ ಇನ್ಯಾವ ಮುಖಂಡರು ಇಷ್ಟೊಂದು ಸಮಾವೇಶಗಳಲ್ಲಿ ಪ್ರಚಾರ ಕಾರ್ಯ ಮಾಡಿಲ್ಲ.

ಇದನ್ನು ಓದಿ: ರಸ್ತೆ ಗುಣಮಟ್ಟ ಕೆಟ್ಟದಾಗಿದ್ದರೆ, ಗುತ್ತಿಗೆದಾರರ ಮೇಲೆ ಹರಿಯಲಿದೆ ಬುಲ್ಡೋಜರ್​; ನಿತಿನ್​ ಗಡ್ಕರಿ ಎಚ್ಚರಿಕೆ
Loading...

ಪ್ರತಿ ಸಮಾವೇಶದಲ್ಲೂ ಯೋಗಿ ಮಾತನಾಡುವಾಗ ಅದೇ ಹಿಂದುತ್ವದ ಕುರಿತು ಪ್ರಸ್ತಾಪಿಸಿದ್ದು, ರಾಮ ಮಂದಿರದ ಬಗ್ಗೆ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ.

ಯೋಗಿ ಆದಿತ್ಯನಾಥ್​ ಬಿಜೆಪಿಯ ಹಿಂದುತ್ವದ ಮುಖವಾದರೆ, ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಧ್ಯೋತಕವಾಗಿ ಬಿಂಬಿತವಾಗಿದ್ದಾರೆ. ಈ ತಂತ್ರವನ್ನು ಜಾರಿಗೆ ತರುವ ಮೂಲಕ ಅತ್ತ ಕಠೋರ ಹಿಂದುತ್ವವಾದಿಗಳ ಮತಗಳು, ಇತ್ತ ಅಭಿವೃದ್ಧಿ ಅರಸುವ ಮತದಾರರನ್ನು ಸೆಳೆಯುವ ಕಾರ್ಯವನ್ನು ಬಿಜೆಪಿ ಮಾಡಿದೆ ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕರೊಬ್ಬರು.

ಆದರೆ ಈ ಮಾತನ್ನು ಅಲ್ಲಗಳೆದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಮೃತ್ಯುಂಜಯ್​ ಕುಮಾರ್​, ಕರ್ನಾಟಕ ಹಾಗೂ ಗುಜರಾತ್​ನಲ್ಲಿ ಇದಕ್ಕಿಂತ  ಕಟ್ಟರ್​ ಹಿಂದುತ್ವ ಪ್ರಚಾರ ಮಾಡಲಾಗಿತ್ತು. ಈ ಭಾಷಣಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

ರಾಜಸ್ಥಾನದಲ್ಲಿ ಆರ್​ಎಸ್​ಎಸ್​ ಯೋಗಿ ಆದಿತ್ಯನಾಥ್​ ಮೇಲೆ ಹೆಚ್ಚು ಅವಲಂಬಿಸಿತು ಎಂದು ಮೂಲಗಳು ತಿಳಿಸಿವೆ. ಹಿಂದುತ್ವ, ನಾಥ ಸಮುದಾಯ ಮತ್ತು ಗೋರಕ್ಷಕರ ಮೂಲಕ ರಾಜಸ್ಥಾನದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದಲಿತರು ಹಾಗೂ ಹಿಂದುಳಿದ ವರ್ಗಗಳ ಮೇಲೆ ಆದಿತ್ಯನಾಥ್​ ಪ್ರಭಾವ ಬೀರಿದರು ಎನ್ನಲಾಗಿದೆ. ಒಂದೆಡೆ ಐದು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದರೆ, ತಮ್ಮ ತವರಿನಲ್ಲಿ ನಡೆದ  ಬುಲ್ಹಂದ್​ಶಹರ್​ ಹಿಂಸೆ ಹತ್ತಿಕ್ಕುವಲ್ಲಿ ವಿಫಲರಾದರು ಎಂಬ ಟೀಕೆಗಳಿಗೆ ಆಹಾರವಾಗಿದ್ದರು.

ಹಿಂದುತ್ವವನ್ನೇ ಅಜೆಂಡಾವಾಗಿಸಿ ಪ್ರಚಾರ ನಡೆಸಿದ ಅವರು ಮತದಾರರ ಮೇಲೆ ಯಾವ ಪರಿಣಾಮ ಬೀರಿದ್ದಾರೆ ಎಂಬುದನ್ನು ತಿಳಿಯಲು ಡಿ.11ರವರೆಗೆ ಕಾಯಬೇಕಿದೆ

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ