ಮುಂಬೈ: ಅಕ್ಟೋಬರ್ 21ರಂದುನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸಾಧಿಸಿದ್ದು, ಶುಕ್ರವಾರ ಸೀಟು ಹಂಚಿಕೆ ಮಾಡಿಕೊಂಡಿವೆ.
ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, 288 ವಿಧಾನಸಭೆ ಕ್ಷೇತ್ರಗಳಲ್ಲಿ ಶಿವಸೇನಾ 124ರಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು. ಎರಡು ಪಕ್ಷಗಳು ಈ ವಾರಕ್ಕೂ ಮುನ್ನ ಚರ್ಚಿಸಿ, ಸೀಟು ಹಂಚಿಕೆ ಅಂತಿಮಗೊಳಿಸಿದ್ದವು.
ಬಿಜೆಪಿ 152 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ವಕ್ತಾರ ಸುರೇಶ್ ನಖುವಾ ಟ್ವೀಟ್ ಮಾಡಿದ್ದಾರೆ. ಇತರೆ ಮೈತ್ರಿ ಪಕ್ಷಗಳು 12 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿವೆ ಎಂದು ತಿಳಿಸಿದ್ದಾರೆ.
Final Seat Distribution of MahaYuti@BJP4India: 152 @ShivSena : 124
Allies : 12 ( On BJP Tickets)
Count: BJP 164 Tickets & Shiv Sena 124 Seats.
Share your prediction how many seats alliance will win in Maharashtra on 24th October with the hashtag
My number is 229.#महायुती
— Suresh Nakhua 🇮🇳 ( सुरेश नाखुआ ) (@SureshNakhua) October 4, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ