Lucknow: ಅವನೀಶ್ ಅವಸ್ಥಿ ನಿವೃತ್ತಿಯ ಬಳಿಕ ಹೆಚ್ಚುವರಿ ಇಲಾಖೆಗಳ ಜವಾಬ್ದಾರಿ ಹೊತ್ತ ಸಂಜಯ್ ಪ್ರಸಾದ್

ಅವನೀಶ್ ಅವಸ್ಥಿ ನಿವೃತ್ತಿ ವಯಸ್ಸನ್ನು ತಲುಪಿದ್ದರೂ ಅವರಿಗೆ ವಿಸ್ತರಣೆ ನೀಡಬಹುದು ಎಂಬ ಮಾತುಗಳು ಜೋರಾಗಿ ಆರಂಭವಾಗಿದ್ದವು. ಆದರೆ, ಸದ್ಯ ನಡೆಯಲಾದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಜಯ್ ಪ್ರಸಾದ್ ಅವರಿಗೆ ಹೆಚ್ಚುವರಿಯಾಗಿ ಈ ಹಿಂದೆ ಅವನೀಶ್ ಆವಸ್ಥಿ ನಿರ್ವಹಿಸುತ್ತಿದ್ದ ಎಲ್ಲ ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿದೆ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಅವನೀಶ್ ಆವಸ್ಥಿ

ಅವನೀಶ್ ಆವಸ್ಥಿ

  • Share this:
ಲಖನೌ: ಉತ್ತರ ಪ್ರದೇಶ (Uttar Pradesh) ಸರ್ಕಾರದಲ್ಲಿ ಹೆಚ್ಚು ಹಾಗೂ ಪ್ರಮುಖ ಜವಾಬ್ದಾರಿಗಳನ್ನು ಹೊತ್ತು ಅವುಗಳನ್ನು ಸಮರ್ಥವಾಗಿ ನಿಭಾಯಿಸಿರುವ ಅಧಿಕಾರಿಗಳ ಪೈಕಿ ಒಂದು ಹೆಸರು ಅವನೀಶ್ ಅವಸ್ಥಿ (Awanish Awasthi). ಆವಸ್ಥಿ ತಮ್ಮ ಕಾರ್ಯಾವಧಿಯಲ್ಲಿ ಸಾಕಷ್ಟು ಪ್ರಮುಖ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸರ್ಕಾರದ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಹಾಗಾಗಿ ಅವರು ನಿವೃತ್ತಿ (retirement) ವಯಸ್ಸನ್ನು ತಲುಪಿದ್ದರೂ ಅವರಿಗೆ ವಿಸ್ತರಣೆ ನೀಡಬಹುದು ಎಂಬ ಮಾತುಗಳು ಜೋರಾಗಿ ಆರಂಭವಾಗಿದ್ದವು. ಆದರೆ, ಸದ್ಯ ನಡೆಯಲಾದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿಯ (Chief Minister) ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಸಂಜಯ್ ಪ್ರಸಾದ್ (Sanjay Prasad) ಅವರಿಗೆ ಹೆಚ್ಚುವರಿಯಾಗಿ ಈ ಹಿಂದೆ ಅವನೀಶ್ ಅವಸ್ಥಿ ನಿರ್ವಹಿಸುತ್ತಿದ್ದ ಎಲ್ಲ ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿದೆ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಈ ಮುಂಚೆ ಅವಸ್ಥಿಯವರು ಗೃಹ ಇಲಾಖೆಯ ಜೊತೆಗೆ ಉತ್ತರ ಪ್ರದೇಶ್ ಎಕ್ಸ್ ಪ್ರೆಸ್ ವೇ ಇಂಡಸ್ಟ್ರಿಯಲ್ ಡೆವೆಲಪ್ಮೆಂಟ್ ಅಥಾರಿಟಿ (UPEIDA), ಎನರ್ಜಿ, ಧಾರ್ಮಿಕ ಆಚರಣೆಗಳು, ಕಾರಾಗೃಹ ಆಡಳಿತ, ವಿಜಿಲೆನ್ಸ್ ಇಲಾಖೆ, ಗೌಪ್ಯ ಮತ್ತು ವಿಸಾ-ಪಾಸ್ಪೋರ್ಟುಗಳ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದರು.

ಈ ಮೊದಲು ಹೆಚ್ಚುವರಿ ಇಲಾಖೆಗಳ ಜವಾಬ್ದಾರಿ ಹೊತ್ತುಕೊಂಡಿದ್ದ ಅವನೀಶ್ ಅವಸ್ಥಿ
ಏಪ್ರಿಲ್ 2017 ರಲ್ಲಿ ಕೇಂದ್ರ ಡೆಪ್ಯುಟೇಶನ್ ನಿಂದ ಮರಳಿ ಬಂದಿದ್ದ ಅವಸ್ಥಿಯವರನ್ನು ಮಾಹಿತಿ, ಪ್ರವಾಸೋದ್ಯಮ, ಧಾರ್ಮಿಕ ಆಚರಣೆಗಳು ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿಯೂ UPEIDAದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿಯೂ ನೇಮಕ ಮಾಡಲಾಗಿತ್ತು. ತದನಂತರ ಉತ್ತರ ಪ್ರದೇಶದಲ್ಲಿ ಯೋಗಿ ಅವರ ಎರಡನೇ ಬಾರಿಗೆ ಸರ್ಕಾರ ಬಂದ ನಂತರ ಜುಲೈ 2019ರಲ್ಲಿ ಅವರನ್ನು ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕಾತಿ ಮಾಡಲಾಯಿತು. ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮುಂದುವರೆದರು ಜೊತೆಗೆ ಎನರ್ಜಿ ಇಲಾಖೆಗೂ ಅವರನ್ನೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಮಾಡಲಾಯಿತು.

ಸಮರ್ಥ ಹಾಗೂ ಫಲಿತಾಂಶ ಕೇಂದ್ರಿತ ವ್ಯಕ್ತಿ 
ಈ ನಡುವೆ, ಆಡಳಿತ ವಲಯದಲ್ಲಿ, ಆವಸ್ಥಿಯವರಿಗೆ ನಿವೃತ್ತಿ ವಿಸ್ತರಣೆ ಸಿಗಬಹುದೆಂದು ಮಾತುಗಳು ಕೇಳಿ ಬರುತ್ತಿದ್ದವು. ಅವರನ್ನು ಒಬ್ಬ ಸಮರ್ಥ ಹಾಗೂ ಫಲಿತಾಂಶ ಕೇಂದ್ರಿತ ವ್ಯಕ್ತಿಯನ್ನಾಗಿಯೇ ಕಾಣಲಾಗುತ್ತಿತ್ತು.

ಇದನ್ನೂ ಓದಿ:  Cervical Cancer Vaccine: ಹೆಣ್ಮಕ್ಕಳಿಗೆ ಗುಡ್ ನ್ಯೂಸ್, ದೇಶದ ಮೊದಲ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಿಡುಗಡೆ

ಅವರು ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ತೋರಿದ ಪರಿಣಾಮಕಾರಿ ನಿರ್ವಹಣೆ, ಆಮ್ಲಜನಕಗಳ ಕೊರತೆಯಿರುವೆಡೆ ಅದನ್ನು ತ್ವರಿತವಾಗಿ ಪೂರೈಸಲು ತೆಗೆದುಕೊಂಡ ಕ್ರಮಗಳು, ಹಲವು ಜಿಲ್ಲೆಗಳಲ್ಲಿ ಮಾಫಿಯಾ ಮತ್ತು ರೌಡಿಗಳ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳು, ಯಶಸ್ವಿಪೂರ್ವಕ ಲಾಂಚ್ ಮಾಡಿದ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್, ಹಾಗೂ ಎರಡು ಎಕ್ಸ್ ಪ್ರೆಸ್ ಮಾರ್ಗಗಳಾದ ಪೂರಾಂಚಲ್ ಮತ್ತು ಬುಂದೇಲ್ಖಂಡ್ ಗಳ ಅವಧಿಗೂ ಮುನ್ನ ಪೂರ್ಣಗೊಳಿಸುವಿಕೆಯಂತಹ ಸಕ್ಷಮ ನಿರ್ವಹಣೆಗಳು ಸರ್ಕಾರಕ್ಕೆ ಅವರ ಮೇಲೆ ಹೆಚ್ಚಿನ ವಿಶ್ವಾಸ ಮೂಡಿಸಿತ್ತು.

ಅವನೀಶ್ ಅವಸ್ಥಿಯವರ ನಿವೃತ್ತಿ 
ಹೀಗೆ ತಮಗೆ ಕೊಡಲಾದ ಎಲ್ಲ ಕರ್ತವ್ಯಗಳನ್ನು ಸಮರ್ಥವಾಗಿ ನಿರ್ವಹಿಸಿದ್ದ ಕಾರಣ ಆವಸ್ಥಿಯವರಿಗೆ ನಿವೃತ್ತಿ ವಿಸ್ತರಣೆ ಸಿಗುವ ಸಾಧ್ಯತೆಯಿದೆ ಎಂದೇ ಆಡಳಿತಾತ್ಮಕವಾಗಿ ಚರ್ಚೆಗಳಾಗುತ್ತಿದ್ದವು. ಆದರೆ, ಸಂಜೆಯವರೆಗೆ ಈ ಅನುಮಾನಗಳಿಗೆ ತೆರೆ ಬಿದ್ದವು ಹಾಗೂ ಆವಸ್ಥಿಯವರಿಗೆ ಯಾವುದೇ ವಿಸ್ತರಣೆ ನೀಡಲಾಗುತ್ತಿಲ್ಲ ಎಂಬುದು ಸ್ಪಷ್ಟವಾಯಿತು.

ಇದನ್ನೂ ಓದಿ:  Dawood Ibrahim: ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದರೆ 25 ಲಕ್ಷ ಬಹುಮಾನ; ಡಿ ಕಂಪನಿ ಮಟ್ಟಹಾಕಲು ಯೋಜನೆ

ಈ ನಡುವೆ ಗೃಹ ಇಲಾಖೆಯ ವತಿಯಿಂದ ಆವಸ್ಥಿಯವರನ್ನು ಹೃತ್ಪೂರ್ವಕವಾಗಿ ಬಿಳ್ಕೊಡಲು ಲೋಕ ಭವನದಲ್ಲಿ ಅಧಿಕಾರಿಗಳು ಸಮಾರಂಭವನ್ನು ಆಯೋಜಿಸಿದ್ದರು. ಇನ್ನು ಯುಪಿ ಪೊಲೀಸರು ತಮ್ಮ ಪೊಲೀಸ್ ಅಧಿಕಾರಿಗಳ ಮೆಸ್ ನಲ್ಲಿ ಆವಸ್ಥಿಯವರಿಗೆ ನಿವೃತ್ತಿ ವಿದಾಯ ಹೇಳಲು ರಾತ್ರಿಯ ಭೋಜನ ಏರ್ಪಡಿಸಿದ್ದರು.

ಹೆಚ್ಚುವರಿ ಇಲಾಖೆಗಳ ಜವಾಬ್ದಾರಿ ಹೊತ್ತ ಸಂಜಯ್ ಪ್ರಸಾದ್ 
ಈ ಒಟ್ಟಾರೆ ಬೆಳವಣಿಗೆಯಿಂದಾಗಿ ಈಗ ಅವನೀಶ್ ಆವಸ್ಥಿಯವರು ಯಾವುದೇ ನಿವೃತ್ತಿ ವಿಸ್ತರಣೆ ಪಡೆಯದೆ ಸೂಸುತ್ರವಾಗಿ ನಿವೃತ್ತಿಯಾಗಿರುವುದು ಸ್ಪಷ್ಟವಾಗಿದೆ. ಅಷ್ಟಕ್ಕೂ ಅವರು ನಿರ್ವಹಿಸಿದ ಎಲ್ಲ ಕರ್ತವ್ಯಗಳ ಬಗ್ಗೆ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳೆಲ್ಲರೂ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇನ್ನು, ಮೊದಲೇ ತಿಳಿಸಿರುವಂತೆ ಆವಸ್ಥಿಯವರು ನಿರ್ವಹಿಸುತ್ತಿದ್ದ ಎಲ್ಲ ಹೆಚ್ಚುವರಿ ಇಲಾಖೆಗಳ ಹೊಣೆಗಾರಿಕೆ ಈಗ ಸಂಜಯ್ ಪ್ರಸಾದ್ ಅವರ ಮೇಲೆ ಹೊರಿಸಲಾಗಿದೆ. ಪ್ರಸ್ತುತ, ಸಂಜಯ್ ಅವರು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Published by:Ashwini Prabhu
First published: