HOME » NEWS » National-international » ARYA RAJENDRAN FROM THIRUVANANTHAPURAM TO BE INDIAS YOUNGEST MAYOR SNVS

ಕೇರಳದಲ್ಲಿ ಮೇಯರ್ ಆದ ಕಾಲೇಜು ವಿದ್ಯಾರ್ಥಿನಿ ಆರ್ಯಾ ರಾಜೇಂದ್ರನ್ ಹೊಸ ದಾಖಲೆ

ಎರಡನೇ ವರ್ಷದ ಬಿಎಸ್ಸಿ ಓದುತ್ತಿರುವ ಆರ್ಯಾ ರಾಜೇಂದ್ರನ್ ಅವರು ತಿರುವನಂತಪುರಂನ ಮೇಯರ್ ಆಗಿ ಆಯ್ಕೆಯಾಗಲಿದ್ದು, ದೇಶದ ಅತ್ಯಂತ ಕಿರಿಯ ಮೇಯರ್ ಎಂಬ ದಾಖಲೆಗೆ ಬಾಜನವಾಗಲಿದ್ದಾರೆ.

news18-kannada
Updated:December 25, 2020, 4:38 PM IST
ಕೇರಳದಲ್ಲಿ ಮೇಯರ್ ಆದ ಕಾಲೇಜು ವಿದ್ಯಾರ್ಥಿನಿ ಆರ್ಯಾ ರಾಜೇಂದ್ರನ್ ಹೊಸ ದಾಖಲೆ
ಆರ್ಯಾ ರಾಜೇಂದ್ರನ್
  • Share this:
ತಿರುವನಂತಪುರಂ(ಡಿ. 25): ಇನ್ನೂ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿರುವ 21 ವರ್ಷದ ಆರ್ಯಾ ರಾಜೇಂದ್ರನ್ ಅವರು ತಿರುವನಂತಪುರಂ ನಗರಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಮೇಯರ್ ಹುದ್ದೆ ಅಲಂಕರಿಸಲಿರುವ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. ಪ್ರಬಲ ಸ್ಪರ್ಧಾಳುಗಳ ನಡುವೆ ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷ ಆರ್ಯಾ ಅವರನ್ನು ಕೇರಳ ರಾಜಧಾನಿಯ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದೆ.

ಚುನಾವಣೆಗೆ ಮುನ್ನ ಸಿಪಿಎಂ ಪಕ್ಷದಲ್ಲಿ ಮೇಯರ್ ಹುದ್ದೆಯ ರೇಸ್​ನಲ್ಲಿದ್ದ ಇಬ್ಬರು ಅಭ್ಯರ್ಥಿಗಳು ಸೋಲಪ್ಪಿದ್ದರು. ಅದಾದ ಬಳಿಕ ಹಿರಿಯ ಸದಸ್ಯ ಜಮೀಲಾ ಶ್ರೀಧರನ್ ಅವರ ಹೆಸರು ಚಾಲನೆಗೆ ಬಂದಿತ್ತು. ಆದರೆ, ಸಿಪಿಎಂನ ತಿರುವನಂತಪುರಂ ವಿಭಾಗದ ಸಮಿತಿ ಚರ್ಚೆ ನಡೆಸಿ ಯುವ ಸಮುದಾಯಕ್ಕೆ ಅವಕಾಶ ನೀಡುವ ಸಲುವಾಗಿ ಅಂತಿಮವಾಗಿ ಆರ್ಯಾ ರಾಜೇಂದ್ರನ್ ಅವರನ್ನ ಆಯ್ಕೆ ಮಾಡಿತು.

ತಿರುವನಂಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್​ಸಿ ಓದುತ್ತಿರುವ ಆರ್ಯಾ ರಾಜೇಂದ್ರನ್ ರಾಜಕೀಯವಾಗಿ ಬಹಳ ಸಕ್ರಿಯವಿದ್ದಾರೆ. ಕಮ್ಯೂನಿಸ್ಟ್ ಪಕ್ಷದ ವಿದ್ಯಾರ್ಥಿ ವಿಭಾಗವಾದ ಎಸ್​ಎಫ್​ಐನ ಕೇರಳ ಸಮಿತಿ ಸದಸ್ಯೆಯಾಗಿ ಹಾಗೂ ಪಕ್ಷದ ಬಾಲ ವಿಭಾಗದ ಬಾಲಸಂಗಮ್​ನ ಕೇರಳ ಅಧ್ಯಕ್ಷೆಯಾಗಿಯೂ ಅವರು ಕರ್ತವ್ಯ ನಿಭಾಯಿಸಿ ಗಮನ ಸೆಳೆದಿದ್ದಾರೆ. ಇದೀಗ ಮೇಯರ್ ಹುದ್ದೆಯ ಜವಾಬ್ದಾರಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು ತಮ್ಮ ಶಿಕ್ಷಣ ಮತ್ತು ರಾಜಕಾರಣ ಎರಡನ್ನೂ ಒಟ್ಟಿಗೆ ಸಮರ್ಥವಾಗಿ ನಿಭಾಯಿಸುವ ಭರವಸೆಯಲ್ಲಿದ್ದಾರೆ.

ಇದನ್ನೂ ಓದಿ: TamilNadu Politics: ನಟ ರಾಜಕಾರಣಿ ಕಮಲಹಾಸನ್​ ಪಕ್ಷದ ಉಪಾಧ್ಯಕ್ಷ ಅರುಣಾಚಲಂ ಬಿಜೆಪಿಗೆ ಸೇರ್ಪಡೆ!

ಕೇರಳದ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್​ಡಿಎಫ್ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಆರು ನಗರಪಾಲಿಕೆಗಳ ಪೈಕಿ ಐದನ್ನು ವಶಪಡಿಸಿಕೊಂಡಿದೆ. ಜಿಲ್ಲಾ ಪಂಚಾಯಿತಿಗಳಲ್ಲೂ ಎಲ್​ಡಿಎಫ್ ಸಾಧನೆ ಉತ್ತಮಗೊಂಡಿದೆ. ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಅಭ್ಯರ್ಥಿ ಎನಿಸಿದ್ದ ಆರ್ಯಾ ರಾಜೇಂದ್ರನ್ ಅವರು ಮೇಯರ್ ಆಗಿ ಗಮನಾರ್ಹವೆನಿಸುವ ಕೆಲಸಗಳನ್ನ ಮಾಡಲು ಉತ್ಸುಕರಾಗಿದ್ದಾರೆ. ತಿರುವನಂತಪುರಣ ಮುದವನ್​ಮುಗಲ್ ವಾರ್ಡ್​ನಿಂದ ಆಯ್ಕೆಯಾಗಿರುವ ಅವರು ಕೆಳ ಪ್ರಾಥಮಿಕ ಶಾಲೆಗಳನ್ನ ಮೇಲ್ದರ್ಜೆಗೇರಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನ ಮಾಡುವುದಾಗಿ ಚುನಾವಣೆಗೆ ಮುನ್ನ ಆಶ್ವಾಸನೆ ನೀಡಿದ್ದರು. ಈಗ ಮೇಯರ್ ಹುದ್ದೆಯೇ ಸಿಕ್ಕಿರುವಾಗ ಅವರು ತಮ್ಮ ಅಭಿವೃದ್ಧಿ ಆಶಯಗಳನ್ನ ಸಾಕಾರಗೊಳಿಸುತ್ತಾರಾ ಎಂದು ಕಾದುನೋಡಬೇಕಷ್ಟೇ.
Published by: Vijayasarthy SN
First published: December 25, 2020, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories