ಐಬಿಎಂಗೆ ಮುಂದಿನ ಸಿಇಒ ಅರವಿಂದ್ ಕೃಷ್ಣ; ಅಮೆರಿಕನ್ ಸಂಸ್ಥೆಗಳ ಮೇಲೆ ಮುಂದುವರಿದ ಭಾರತೀಯರ ಪಾರಮ್ಯ

ಭಾರತೀಯ ಮೂಲದವರಾದ ಸತ್ಯ ನಾದೆಲ್ಲಾ, ಸುಂದರ್ ಪಿಚ್ಚೈ ಮತ್ತು ಶಾಂತನು ನಾರಾಯಣ್ ಅವರು ಅಮೆರಿಕದ ಮೈಕ್ರೋಸಾಫ್ಟ್, ಗೂಗಲ್ ಮತ್ತು ಅಡೋಬ್ ಸಂಸ್ಥೆಗಳಿಗೆ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಥವರ ಸಾಲಿಗೆ ಅರವಿಂದ್ ಕೃಷ್ಣ ನಾಲ್ಕನೆಯವರಾಗಿದ್ಧಾರೆ.

news18
Updated:January 31, 2020, 12:15 PM IST
ಐಬಿಎಂಗೆ ಮುಂದಿನ ಸಿಇಒ ಅರವಿಂದ್ ಕೃಷ್ಣ; ಅಮೆರಿಕನ್ ಸಂಸ್ಥೆಗಳ ಮೇಲೆ ಮುಂದುವರಿದ ಭಾರತೀಯರ ಪಾರಮ್ಯ
ಅರವಿಂದ್ ಕೃಷ್ಣ
  • News18
  • Last Updated: January 31, 2020, 12:15 PM IST
  • Share this:
ಬೆಂಗಳೂರು(ಜ. 31): ಅಮೆರಿಕದ ಅಗ್ರಗಣ್ಯ ಸಂಸ್ಥೆಗಳಲ್ಲಿ ಭಾರತೀಯರ ಪಾರಮ್ಯ ಮುಂದುವರಿಯುತ್ತಿರುವಂತಿದೆ. ಅಡೋಬ್, ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಂಸ್ಥೆಗಳಿಗೆ ಭಾರತೀಯರೇ ಸಿಇಒ ಆಗಿದ್ಧಾರೆ. ಈಗ ಈ ಪಟ್ಟಿಗೆ ಐಬಿಎಂ ಸೇರ್ಪಡೆಯಾಗಿದೆ. ನೂರು ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಇಂಟರ್​ನ್ಯಾಷನಲ್ ಬ್ಯುಸಿನೆಸ್ ಮೆಷೀನ್ಸ್ (ಐಬಿಎಂ) ಸಂಸ್ಥೆಗೆ ಭಾರತೀಯ ಮೂಲದ ಅರವಿಂದ್ ಕೃಷ್ಣ ಅವರೇ ಮುಂದಿನ ಸಿಇಒ ಆಗಲಿದ್ಧಾರೆ. ಈಗಿನ ಸಿಇಒ ಗಿನ್ನಿ ರೋಮೆಟ್ಟಿ ಅವರೇ ಸ್ವತಃ ಈ ವಿಚಾರವನ್ನು ತಿಳಿಸಿದ್ಧಾರೆ. ಏಪ್ರಿಲ್ 6ರಿಂದ ಐಬಿಎಂಗೆ ಅರವಿಂದ್ ಕೃಷ್ಣ ಅವರೇ ಸಿಇಓ ಆಗಿ ಕಂಪನಿಯನ್ನು ಮುನ್ನಡೆಸಲಿದ್ಧಾರೆ ಎಂದು ಗಿನ್ನಿ ರೋಮೆಟ್ಟಿ ಹೇಳಿದ್ಧಾರೆ. ಇದರೊಂದಿಗೆ ಅಮೆರಿಕ ಮೂಲದ ನಾಲ್ಕು ಸಂಸ್ಥೆಗಳಿಗೆ ಭಾರತೀಯರೇ ಸಿಇಒ ಆದಂತಾಗುತ್ತದೆ.

57 ವರ್ಷದ ಅರವಿಂದ್ ಕೃಷ್ಣ ಉತ್ತರ ಪ್ರದೇಶದವರಾಗಿದ್ದಾರೆ. ಐಐಟಿ ಕಾನ್​ಪುರದಲ್ಲಿ ಬಿಟೆಕ್ ಪದವಿ ಪಡೆದ ಅವರು ಅಮೆರಿಕದ ಇಲಿನಾಯ್ಸ್ ವಿವಿಯಲ್ಲಿ ಪಿಹೆಚ್​ಡಿ ಮಾಡಿದ್ದಾರೆ. 1990ರಲ್ಲಿ ಐಬಿಎಂ ಸಂಸ್ಥೆ ಸೇರಿದ ಇವರು ಐಬಿಎಂನ ಕ್ಲೌಡ್ ಮತ್ತು ಕಾಗ್ನೈಟಿವ್ ಸಾಫ್ಟ್​​ವೇರ್ ಸೇವೆಗಳ ವಿಭಾಗಕ್ಕೆ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕಾರ್ಯ ನಿರ್ವಹಿಸಿದ್ಧಾರೆ. 2018ರಲ್ಲಿ ಲೈನಕ್ಸ್ ಸೇವೆ ನೀಡುವ ರೆಡ್ ಹ್ಯಾಟ್ ಸಂಸ್ಥೆಯನ್ನು ಖರೀದಿಸುವುದರಲ್ಲಿ ಅರವಿಂದ್ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಸುಧಾರಿಸಲಿದೆ ಭಾರತದ ಆರ್ಥಿಕತೆ?; ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ. 6.5ಕ್ಕೆ ಏರಿಕೆ ಸಾಧ್ಯತೆ

ಅಮೇಜಾನ್, ಮೈಕ್ರೋಸಾಫ್ಟ್ ಸಂಸ್ಥೆಗಳ ಹಿಡಿತದಲ್ಲಿರುವ ಕ್ಲೌಡ್ ಬ್ಯುಸಿನೆಸ್​ಗೆ ಐಬಿಎಂ ಈಗಷ್ಟೇ ಧುಮುಕಿದೆ. ಇದೇ ವ್ಯವಹಾರದಲ್ಲಿ ಅನುಭವ ಹೊಂದಿರುವ ಅರವಿಂದ್ ಕೃಷ್ಣ ಅವರೇ ಐಬಿಎಂ ಅನ್ನು ಭವಿಷ್ಯದತ್ತ ಮುನ್ನಡೆಸುವ ಸರಿಯಾದ ವ್ಯಕ್ತಿ ಎಂದು ಈಗಿನ ಸಿಇಒ ಗಿನ್ನಿ ಅಭಿಪ್ರಾಯಪಟ್ಟಿದ್ದಾರೆ. 62 ವರ್ಷದ ಗಿನ್ನಿ ರೋಮೆಟ್ಟಿ ಅವರು ಈ ವರ್ಷಾಂತ್ಯಕ್ಕೆ ನಿವೃತ್ತರಾಗಲಿದ್ದು ಅಲ್ಲಿಯವರೆಗೆ ಕಾರ್ಯಕಾರಿ ಚೇರ್​ಮನ್ ಆಗಿ ಮುಂದುವರಿಯಲಿದ್ಧಾರೆ.

ಭಾರತೀಯ ಮೂಲದವರಾದ ಸತ್ಯ ನಾದೆಲ್ಲಾ, ಸುಂದರ್ ಪಿಚ್ಚೈ ಮತ್ತು ಶಾಂತನು ನಾರಾಯಣ್ ಅವರು ಅಮೆರಿಕದ ಮೈಕ್ರೋಸಾಫ್ಟ್, ಗೂಗಲ್ ಮತ್ತು ಅಡೋಬ್ ಸಂಸ್ಥೆಗಳಿಗೆ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಇಂಥವರ ಸಾಲಿಗೆ ಅರವಿಂದ್ ಕೃಷ್ಣ ನಾಲ್ಕನೆಯವರಾಗಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: January 31, 2020, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading