• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Arvind Kejriwal: ಸಿಸೋಡಿಯಾ ಬಂಧನದಿಂದ ಸತ್ಯಕ್ಕೆ ಜಯ ಸಿಕ್ಕಿದೆ, ನೆಕ್ಸ್ಟ್​ ಕೇಜ್ರಿವಾಲ್! ಸುಕೇಶ್ ಚಂದ್ರಶೇಖರ್ ಹೊಸ ಬಾಂಬ್!

Arvind Kejriwal: ಸಿಸೋಡಿಯಾ ಬಂಧನದಿಂದ ಸತ್ಯಕ್ಕೆ ಜಯ ಸಿಕ್ಕಿದೆ, ನೆಕ್ಸ್ಟ್​ ಕೇಜ್ರಿವಾಲ್! ಸುಕೇಶ್ ಚಂದ್ರಶೇಖರ್ ಹೊಸ ಬಾಂಬ್!

ಸುಕೇಶ್ ಚಂದ್ರಶೇಖರ್-ಅರವಿಂದ್ ಕೇಜ್ರಿವಾಲ್

ಸುಕೇಶ್ ಚಂದ್ರಶೇಖರ್-ಅರವಿಂದ್ ಕೇಜ್ರಿವಾಲ್

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಮಲ್ವಿಂದರ್ ಬಿಡುಗಡೆ ಮಾಡಿಸುವುದಾಗಿ ಆತನ ಪತ್ನಿಯಿಂದ 200 ಕೋಟಿ ಸುಲಿಗೆ ಮಾಡಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್  ಜೈಲಿನಲ್ಲಿದ್ದಾನೆ. ಅಲ್ಲದೆ ಈತನ ಮೇಲೆ 30 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಮುಂದೆ ಓದಿ ...
  • Share this:

ನವದೆಹಲಿ: ಅಕ್ರಮ ಹಣ ವರ್ಗಾವಣೆ (Money Laundering Case) ಆರೋಪದಲ್ಲಿ ಬಂಧಿತನಾಗಿರುವ ಸುಕೇಶ್​ ಚಂದ್ರಶೇಖರ್​ನನ್ನು (Sukesh Chandrashekhar) ಶುಕ್ರವಾರ ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವೇಳೆ  ಸುಕೇಶ್ ಚಂದ್ರಶೇಖರ್​ಗೆ ಅಕ್ರಮ ಹಣ ವರ್ಗಾವಣೆ  ಹಾಗೂ ಅಬಕಾರಿ ಇಲಾಖೆಯ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ  ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ (Manish Sisodia) ಬಗ್ಗೆ ಕೇಳಿದಾಗ 'ಸತ್ಯ ಜಯಿಸಿದೆ' ಎಂದು ಹೇಳಿದ್ದು, ಶೀಘ್ರದಲ್ಲಿ ಮುಖ್ಯಮಂತ್ರಿ (Delhi CM) ಅರವಿಂದ್ ಕೇಜ್ರಿವಾಲ್ (Arvind Kejriwal) ಬಂಧನವಾಗಲಿದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾನೆ. ಕಳೆದ ವಾರ ಮನೀಶ್ ಸಿಸೋಡಿಯಾ ದೆಹಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


200 ಕೋಟಿ ವಂಚನೆ ಆರೋಪದ ಮೇಲೆ ಬಂಧನ


ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಮಲ್ವಿಂದರ್ ಬಿಡುಗಡೆ ಮಾಡಿಸುವುದಾಗಿ ಆತನ ಪತ್ನಿಯಿಂದ 200 ಕೋಟಿ ಸುಲಿಗೆ ಮಾಡಿದ ಆರೋಪದ ಮೇಲೆ ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದಾನೆ. ಅಲ್ಲದೆ ಈತನ ಮೇಲೆ 30 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.


ಇಲ್ಲಿಯವರೆಗೆ ಸಿಸೋಡಿಯಾ ತಮ್ಮ 18 ಇಲಾಖೆಯಲ್ಲಿ ಕಮಿಷನ್​ ಲೂಟಿ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದ ಚಂದ್ರಶೇಖರ್,​ ಇದೀಗ ಕೇಜ್ರಿವಾಲ್ ಮೇಲೆ ದಾಳಿ ಮಾಡಿದ್ದಾರೆ.


ಇದನ್ನೂ ಓದಿ: Explained: ಜೈಲು ಸೇರಿದ್ದೇಕೆ ಮನೀಶ್ ಸಿಸೋಡಿಯಾ? ಏನಿದು ದೆಹಲಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹಗರಣ?


ನೆಕ್ಸ್ಟ್​ ಕೇಜ್ರಿವಾಲ್ ಎಂದ ಸುಕೇಶ್


ಶುಕ್ರವಾರ ನ್ಯಾಯಾಲಯಕ್ಕೆ ಕರೆತರುವ ವೇಳೆ ಸಿಸೋಡಿಯಾ ಬಂಧನದ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಚಂದ್ರಶೇಖರ್​, ಸತ್ಯಕ್ಕೆ ಜಯ ಸಿಕ್ಕಿದೆ, ಮುಂದೆ ಅರವಿಂದ್ ಕೇಜ್ರಿವಾಲ್ ಬಂಧನವಾಗಲಿದೆ ಎಂದು ಹೇಳಿದ್ದಾನೆ. ಕಳೆದ ಹಲವು ತಿಂಗಳುಗಳಿಂದ ಸುಕೇಶ್ ಎಎಪಿ ವಿರುದ್ಧ ಹಲವಾರು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾನೆ. ಇದೀಗ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಸಿಸೋಡಿಯಾ ಅವರು ದೆಹಲಿಯ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರತಿಯೊಂದು ಇಲಾಖೆಯಲ್ಲಿ ಕಮಿಷನ್ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾನೆ.




ಆಡಳಿತಕ್ಕಿಂತ ಕಮಿಷನ್​ ಮೇಲೆ ಕಾಳಜಿ


ಆಪ್ ನಾಯಕರಾದ ಕೇಜ್ರಿವಾಲ್, ಸಿಸೋಡಿಯಾ ಮತ್ತು ಜೈನ್ ಅವರು ಯಾವಾಗಲೂ ಕಮಿಷನ್ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಕೇಜ್ರಿವಾಲ್ ಸರ್ಕಾರವು 20% ಹೆಚ್ಚಿನ ಕಮಿಷನ್‌ ತೆಗೆದುಕೊಂಡು ಹಲವು ಸಂಸ್ಥೆಗೆ ಟೆಂಡರ್​ಗಳನ್ನು ನೀಡುತ್ತಿದೆ ಎಂದು ಮಂಡೋಲಿ ಜೈಲಿನಲ್ಲಿರುವ ಚಂದ್ರಶೇಖರ್ ಆರೋಪಿಸಿದ್ದಾರೆ.


ಕಳೆದ ವರ್ಷ ನವೆಂಬರ್‌ನಲ್ಲಿ ಎಎಪಿ ನಾಯಕ ಸತ್ಯೇಂದ್ರ ಜೈನ್ (ಆಗ ಆರೋಗ್ಯ ಸಚಿವ, ಈಗ ಜೈಲಿನಲ್ಲಿದ್ದಾರೆ) ಪ್ರೊಟೆಕ್ಷನ್​ ಹಣವಾಗಿ 10 ಕೋಟಿ ರೂಪಾಯಿ ಪಾವತಿಸುವಂತೆ ನನ್ನನ್ನು ಒತ್ತಾಯಿಸಿದ್ದರು. ಜೊತೆಗೆ ರಾಜ್ಯಸಭಾ ಸ್ಥಾನಕ್ಕಾಗಿ ಎಎಪಿಗೆ 50 ಕೋಟಿ ರೂಪಾಯಿ ಪಾವತಿಸಿದ್ದೇನೆ ಎಂದು ಅವರು ಹೇಳಿದ್ದಾರೆ.


ಸಿಸೋಡಿಯಾ ಜಾಮೀನು ಅರ್ಜಿ ಮಾರ್ಚ್​ 21ಕ್ಕೆ ಮುಂದೂಡಿಕೆ


ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದ ಬಂಧನಕ್ಕೊಳಗಾಗಿರುವ ಎಎಪಿ ಹಿರಿಯ ನಾಯಕ ಹಾಗೂ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಮಾರ್ಚ್ 21ಕ್ಕೆ ಮುಂದೂಡಿದೆ. ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಗುರುವಾರ ತನ್ನ ವಶಕ್ಕೆ ಪಡೆದಿರುವ ಜಾರಿ ನಿರ್ದೇಶನಾಲಯ (ಇಡಿ), ಶುಕ್ರವಾರ ನಗರದ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 10 ದಿನಗಳ ಕಾಲ ತನ್ನ ಕಸ್ಟಡಿಗೆ ನೀಡುವಂತೆ ಕೋರಿತ್ತು.

Published by:Rajesha M B
First published: