ದೆಹಲಿಯಲ್ಲಿ ಮತ್ತೆ ಆಪ್​​ ಸರ್ಕಾರ: ಇಂದು ಮೂರನೇ ಬಾರಿಗೆ ಸಿಎಂ ಆಗಿ ಅರವಿಂದ್​ ಕೇಜ್ರಿವಾಲ್​​ ಪ್ರಮಾಣವಚನ

ಹೌದು, ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​ ನೇತೃತ್ವದ ಆಪ್​​ ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಆಪ್​​​​ ಗೆಲುವಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್​​ ನಾಯಕರು ಅಭಿನಂದನೆಗಳು ತಿಳಿಸಿದ್ದಾರೆ. ಅಲ್ಲದೇ ಸಮಾಜವನ್ನು ಹೊಡೆಯಲೊರಟ ಬಿಜೆಪಿಗೆ ದೆಹಲಿಗರು ತಕ್ಕಪಾಠ ಕಲಿಸಿದ್ದಾರೆ ಎನ್ನುವ ಮೂಲಕ ಆಪ್​​​ ಗೆಲುವನ್ನು ಕೊಂಡಾಡಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್​​

ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್​​

  • Share this:
ನವದೆಹಲಿ(ಫೆ.16): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇಂದು ನಗರದ ರಾಮಲೀಲಾ ಮೈದಾನದಲ್ಲಿ ಅರವಿಂದ್​​ ಕೇಜ್ರಿವಾಲ್​​​ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಲ್​ ಪ್ರಮಾಣವಚನ ಬೋಧಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಲಿದ್ಧಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರಿಗೂ ಅರವಿಂದ್​​ ಕೇಜ್ರಿವಾಲ್​ ಆಹ್ವಾನ ನೀಡಿದ್ದು, ಸಿಎಂ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ಧಾರಾ? ಎಂದು ನೋಡಬೇಕಿದೆ.

ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಿದೆ. ಸಿಎಂ ಅರವಿಂದ್​​​ ಕೇಜ್ರಿವಾಲ್​​ ನೇತೃತ್ವದ ಆಮ್ ಆದ್ಮಿ ಪಕ್ಷ 62 ಕ್ಷೇತ್ರಗಳಲ್ಲಿ ಗೆದ್ದಿದೆ. ಉಳಿದ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಆರಂಭದ ಹಂತದಲ್ಲಿ ಒಂದು ಕ್ಷೇತ್ರದಲ್ಲಿ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್ ಪಕ್ಷ ಅಂತಿಮವಾಗಿ ಶೂನ್ಯ ಸಂಪಾದನೆ ಮಾಡಿದೆ. ಚುನಾವಣೆ ಘೋಷಣೆಯಾದಾಗಿನಿಂದಲೂ ಕಾಂಗ್ರೆಸ್ ಯಾವ ಹಂತದಲ್ಲೂ ಗೆಲುವಿನ ನಿರೀಕ್ಷೆ ಮೂಡಿಸಿರಲಿಲ್ಲ. ಕಾಂಗ್ರೆಸ್ ಒಂದು ರೀತಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅಂತೆಯೀಗ ಈ ಚುನಾವಣೆಯಲ್ಲಿ ಕಾಂಗ್ರೆಸ್​​ ಆಟಕಿತ್ತು, ಲೆಕ್ಕಕಿಲ್ಲ ಎನ್ನುವುದು ಸಾಬೀತಾಗಿದೆ.

ಸತತ ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಎರಡನೇ ಬಾರಿಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಆರಂಭದಿಂದಲೂ ದೆಹಲಿ ಗದ್ದುಗೆಗಾಗಿ ಆಪ್​​ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದರೂ, ಕಾಂಗ್ರೆಸ್​​ ಮಾತ್ರ ಒಂದೆಜ್ಜೆ ಹಿಂದೆ ಇತ್ತು. ಚುನಾವಣಾ ಪ್ರಚಾರದ ಸಮಯದಿಂದಲೂ ಹಿಂದೆ ಇದ್ದ ಕಾಂಗ್ರೆಸ್ ಕೊನೆಗೂ ಚುನಾವಣೆಯಲ್ಲೀಗ 1 ಸ್ಥಾನವೂ ಗೆಲ್ಲದೆ ಹಿನ್ನಡೆ ಅನುಭವಿಸಿದೆ.

ಇದನ್ನೂ ಓದಿ: ‘ಟೋಕ್ಯೋ ಒಲಂಪಿಕ್ಸ್​ಗೆ ಕಂಬಳ ಹೀರೊ ಶ್ರೀನಿವಾಸ ಗೌಡ ಕಳಿಸಿ‘- ಕರ್ನಾಟಕ ಒಲಂಪಿಕ್ಸ್ ಬೇಡಿಕೆ

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಆಮ್‌ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಗೆ ಮುಖಭಂಗವಾಗಿದ್ದು, ಎರಡು ಅಂಕಿಗಳಷ್ಟು ಸ್ಥಾನವನ್ನು ಗೆದ್ದಿಲ್ಲ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 60ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರ ಹಿಡಿದಿದೆ.

ಹೌದು, ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​ ನೇತೃತ್ವದ ಆಪ್​​ ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಆಪ್​​​​ ಗೆಲುವಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್​​ ನಾಯಕರು ಅಭಿನಂದನೆಗಳು ತಿಳಿಸಿದ್ದಾರೆ. ಅಲ್ಲದೇ ಸಮಾಜವನ್ನು ಹೊಡೆಯಲೊರಟ ಬಿಜೆಪಿಗೆ ದೆಹಲಿಗರು ತಕ್ಕಪಾಠ ಕಲಿಸಿದ್ದಾರೆ ಎನ್ನುವ ಮೂಲಕ ಆಪ್​​​ ಗೆಲುವನ್ನು ಕೊಂಡಾಡಿದ್ದಾರೆ.
First published: