ದೆಹಲಿಗರೇ 'ಐ ಲವ್​ ಯೂ'; ಇದು ದೇಶದ ಗೆಲುವು: ಫಲಿತಾಂಶದ ಬಳಿಕ ಅರವಿಂದ್ ಕೇಜ್ರಿವಾಲ್ ಭಾವೋದ್ವೇಗ

Delhi Election Result: ದೆಹಲಿಯಲ್ಲಿ ಹೊಸ ರಾಜಕೀಯ ಜನ್ಮ ತಾಳಿದೆ. ಅದುವೇ ಕಾಯಕದ ರಾಜಕೀಯ ಅದುವೇ ಕೆಲಸ. ಇದು ನನ್ನ ಕೆಲಸವನ್ನು. ಇದು ದೆಹಲಿ ಜನರ ಗೆಲುವು.

ಅರವಿಂದ್​ ಕೇಜ್ರಿವಾಲ್​

ಅರವಿಂದ್​ ಕೇಜ್ರಿವಾಲ್​

  • Share this:
ನವದೆಹಲಿ(ಫೆ. 11): ಭರ್ಜರಿ ಗೆಲುವು ದಾಖಲಿಸುವ ಮೂಲಕ ಮೂರನೇ ಬಾರಿ ದೆಹಲಿ ಗದ್ದುಗೆ ಏರಲು ಅರವಿಂದ್​ ಕೇಜ್ರಿವಾಲ್​ ಸಿದ್ಧರಾಗಿದ್ದಾರೆ. ಚುನಾವಣೆಯಲ್ಲಿ ಅಭೂತ ಗೆಲುವು ದಾಖಲಿಸಿದ ಅವರು, ಇದಕ್ಕೆ ಕಾರಣರಾದ ದೆಹಲಿ ಜನರಿಗೆ ಕೃತಜ್ಞತೆ ತಿಳಿಸಿದ್ದು, ದೆಹಲಿಯ ಜನರೇ ನಿಮ್ಮನ್ನು ನಾನು ಪ್ರೀತಿಸುತ್ತೇನೆ. ಈ ಗೆಲುವು ಭಾರತ ಮಾತೆಯ ಜಯ ಎಂದು ಭಾವನಾತ್ಮಕವಾಗಿ ಧನ್ಯವಾದ ತಿಳಿಸಿದರು.

ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಜಯದಿಂದ ಹೊಸ ರಾಜಕೀಯ ಜನ್ಮ ತಾಳಿದೆ. ಅದುವೇ ಕಾಯಕದ ರಾಜಕೀಯ. ಅದುವೇ ಕೆಲಸ. ಇದು ನನ್ನ ಕೆಲಸಕ್ಕೆ ಗೆಲುವಾಗಿದೆ. ಇದು ದೆಹಲಿ ಜನರ ಗೆಲುವು. ದೆಹಲಿಯ ಜನರು ನನ್ನನ್ನು ಮಗನೆಂದು ಭಾವಿಸಿದರು. ಪ್ರತಿ ಕುಟುಂಬಕ್ಕೂ 24 ಗಂಟೆಗಳ ವಿದ್ಯುತ್​, ನೀರು ಮತ್ತು ಶಿಕ್ಷಣ ನೀಡಿದೇವು. ಇದಕ್ಕೆ ಪ್ರತಿಯಾಗಿ ದಿಲ್ಲಿಯ ಜನರು ಹೊಸ ರೀತಿಯ ಉತ್ತರ ನೀಡಿದರು. ಅದುವೇ ಕೆಲಸ ಮಾಡುವವರಿಗೆ ಮತ ನೀಡುವ ರಾಜಕಾರಣ ಎಂದು ಹೇಳಿದರು.

ಇದೇ ವೇಳೆ, ತಮ್ಮ ಗೆಲುವನ್ನು ತಮ್ಮ ಹೆಂಡತಿ ಹಾಗೂ ದೇವರಾದ ಆಂಜನೇಯನಿಗೂ ಅರ್ಪಿಸಿದರು. ಇಂದು ಮಂಗಳವಾರ ಹನುಮಂತನ ದಿನ. ಹನುಮಂತ ನಮಗೆ ಆಶೀರ್ವಾದಿಸಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸುತ್ತಾನೆ. ಮುಂದಿನ ಐದು ವರ್ಷಗಳು ಕೂಡ ನಾವು ಜನ ಸೇವೆ ಮಾಡುತ್ತೇವೆ. ಹನುಮಂತನ ಕೃಪೆ ನಮ್ಮ ಮೇಲಿದೆ ಎಂದರು.

ಈ ಮೊದಲು ಅವರು ಹನುಮಾನ್​ ಚಾಲಿಸ್​ ಪಠಿಸುವ ಮೂಲಕ ಬಿಜೆಪಿ ಹಿಂದುತ್ವಕ್ಕೆ ಸೆಡ್ಡು ಹೊಡೆದು ದೆಹಲಿ ಚುನಾವಣಾ ಪ್ರಚಾರ ನಡೆಸಿದ್ದರು.

ಇದನ್ನು ಓದಿ: ಪ್ರೇಮಿಗಳ ದಿನ ಎಂದರೆ ಅರವಿಂದ್​ ಕೇಜ್ರಿವಾಲ್​ಗೆ ಬಲು ವಿಶೇಷ; ಕಾರಣ ಗೊತ್ತಾ!

ತೀವ್ರ ಹಣಾಹಣಿ ನಡುವೆ ಅಂತಿಮ ಹಂತದಲ್ಲಿ ಗೆಲುವು ದಾಖಲಿಸಿದ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಕೂಡ ಪಟಪರ್​ಗಂಜ್​ ಜನರಿಗೆ ಧನ್ಯವಾದ ತಿಳಿಸಿ ಬದ್ರಿನಾಥ್​ ದೇವಾಲಯಕ್ಕೆ ಭೇಟಿ ನೀಡಿದರು.

ಫೆ.14ರಂದು ಪ್ರಮಾಣವಚನ

ಹೊಸದಾಗಿ ಸರ್ಕಾರ ರಚಿಸಲಿರುವ ಆಪ್​ ಸರ್ಕಾರದ ಸಿಎಂ ಆಗಿ  ಫೆ. 14ರಂದು ಮತ್ತೊಮ್ಮೆ ಅರವಿಂದ್​ ಕೇಜ್ರಿವಾಲ್​ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಳೆದ ಬಾರಿ ಕೂಡ ಇದೇ ಪ್ರೇಮಿಗಳ ದಿನದಂದು ಅವರು ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
First published: