ಫೆ.16ಕ್ಕೆ ದೆಹಲಿ ಸಿಎಂ ಆಗಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ; ಪ್ರಧಾನಿ ಮೋದಿಗೆ ಆಹ್ವಾನ

ರಾಮಲೀಲಾ ಮೈದಾನದಲ್ಲಿ ಸರಳವಾಗಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗಾಗಲಿ ಅಥವಾ ರಾಜಕೀಯ ನಾಯಕರಿಗಾಗಲಿ ಆಮ್​ ಆದ್ಮಿ ಪಕ್ಷ ಆಹ್ವಾನ ನೀಡಿಲ್ಲ. ಆದರೆ, ತನ್ನ ಕಟು ವಿರೋಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವುದು ಇದೀಗ ಕೂತೂಹಲಕ್ಕೆ ಕಾರಣವಾಗಿದೆ. 

MAshok Kumar | news18-kannada
Updated:February 14, 2020, 2:03 PM IST
ಫೆ.16ಕ್ಕೆ ದೆಹಲಿ ಸಿಎಂ ಆಗಿ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ; ಪ್ರಧಾನಿ ಮೋದಿಗೆ ಆಹ್ವಾನ
ಮೋದಿ ಮತ್ತು ಕೇಜ್ರಿವಾಲ್​​
  • Share this:
ನವ ದೆಹಲಿ (ಫೆಬ್ರವರಿ 14); ಸತತ ಮೂರನೇ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್​ ಇದೇ ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. 

ರಾಮಲೀಲಾ ಮೈದಾನದಲ್ಲಿ ಸರಳವಾಗಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗಾಗಲಿ ಅಥವಾ ರಾಜಕೀಯ ನಾಯಕರಿಗಾಗಲಿ ಆಮ್​ ಆದ್ಮಿ ಪಕ್ಷ ಆಹ್ವಾನ ನೀಡಿಲ್ಲ. ಆದರೆ, ತನ್ನ ಕಟು ವಿರೋಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವುದು ಇದೀಗ ಕೂತೂಹಲಕ್ಕೆ ಕಾರಣವಾಗಿದೆ.

70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಮ್ ಆದ್ಮಿ ಪಕ್ಷ ಸತತಲ ಮೂರನೇ ಬಾರಿಗೆ ದೆಹಲಿ ಗದ್ದುಗೆಗೆ ಏರಿದೆ. ದೆಹಲಿ ಗದ್ದುಗೆಗೆ ಏರಲು ಬಿಜೆಪಿ ತನ್ನ ಎಲ್ಲಾ ಬಲಗಳನ್ನೂ ಉಪಯೋಗಿಸಿತ್ತು. 300ಕ್ಕೂ ಹೆಚ್ಚು ಸಂಸದರು ಪ್ರಚಾರಕ್ಕಾಗಿ ರಸ್ತೆಗೆ ಇಳಿದಿದ್ದರು. ಇನ್ನೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಹ ಹಲವೆಡೆ ಪ್ರಚಾರ ರ್ಯಾಲಿ ನಡೆಸಿದ್ದರು.

ಈ ಹೈವೋಲ್ಟೇಜ್ ಅಭಿಯಾನದ ನಡುವೆಯೂ ದೆಹಲಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಆಮ್ ಆದ್ಮಿ ಸಫಲವಾಗಿತ್ತು.ಇಷ್ಟೆಲ್ಲಾ ಪ್ರಚಾರ ನಡೆಸಿದ ಹೊರತಾಗಿಯೂ ಬಿಜೆಪಿ ಕೇವಲ 8 ಸ್ಥಾನಗಳಿಗೆ ಮಾತ್ರ ಸೀಮಿತವಾಗಿದೆ. ದೆಹಲಿಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಹಾಗೂ ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ವೈದ್ಯಕೀಯ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕಡೆಗೆ ಹೆಚ್ಚು ಗಮನವಹಿಸಿದ್ದು ಅರವಿಂದ ಕೇಜ್ರಿವಾಲ್ ಅವರ ಗೆಲುವಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ : ದೆಹಲಿಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದ 24 ಗಂಟೆಯಲ್ಲಿ ಪಕ್ಷಕ್ಕೆ ಹೊಸದಾಗಿ 1 ದಶಲಕ್ಷ ಜನ ಸೇರ್ಪಡೆ
First published:February 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ