ಸಿಎಂ ಕೇಜ್ರಿವಾಲ್​​​-ಅಮಿತ್​​ ಶಾ ಮೊದಲ ಭೇಟಿ: ದೆಹಲಿ ಅಭಿವೃದ್ದಿಗೆ ಒಟ್ಟಾಗಿ ಕೆಲಸ ಮಾಡುವ ಶಪಥ

ಇದೊಂದು ಸೌಹಾರ್ದಯುತ ಭೇಟಿ. ದೆಹಲಿ ಅಭಿವೃದ್ದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜನರಿಗಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರ ಒಟ್ಟಿಗೆ ಕೆಲಸ ಮಾಡುವ ಎಂದು ಮಾತಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದರು ಅರವಿಂದ್​ ಕೇಜ್ರಿವಾಲ್​​.

ಅಮಿತ್​​ ಶಾ ಭೇಟಿಯಾದ ಕೇಜ್ರಿವಾಲ್​​

ಅಮಿತ್​​ ಶಾ ಭೇಟಿಯಾದ ಕೇಜ್ರಿವಾಲ್​​

 • Share this:
  ನವದೆಹಲಿ(ಫೆ.19): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಆರಂಭದಿಂದಲೂ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಲೇ ಬಂದಿದ್ದ ಸಿಎಂ ಅರವಿಂದ್​​ ಕೇಜ್ರಿವಾಲ್ ಇತ್ತೀಚೆಗೆ ಯಾಕೋ ಮೃದು ಧೋರಣೆ ಅನುಸರಿಸುತ್ತಿದ್ದಾರೆ. ಅಧಿಕಾರ ಹಂಚಿಕೆ ಮತ್ತು ಕೇಂದ್ರದ ಹಸ್ತಕ್ಷೇಪ ಕುರಿತು ಬಹಿರಂಗವಾಗಿಯೇ ಮಾತಾಡುತ್ತಿದ್ದ ಕೇಜ್ರಿವಾಲ್​​ ಮೂರನೇ ಬಾರಿಗೆ ಗದ್ದುಗೆ ಹಿಡಿದ ಬಳಿಕ ಹಳೆಯದ್ದನ್ನು ಮರೆತು ದೆಹಲಿ ಅಭಿವೃದ್ದಿಗಾಗಿ ಬಿಜೆಪಿಯೊಂದಿಗೆ ಕೈಜೋಡಿಸುವ ಮುನ್ಸೂಚನೆ ನೀಡಿದ್ದಾರೆ. ಹಾಗಾಗಿಯೇ ಇಂದು ಮಧ್ಯಾಹ್ನ ಮೊದಲ ಬಾರಿಗೆ ಅಮಿತ್​​ ಶಾರನ್ನು ಭೇಟಿಯಾಗಿ ದೆಹಲಿ ಅಭಿವೃದ್ದಿ ವಿಚಾರವಾಗಿ ಚರ್ಚಿಸಿದ್ಧಾರೆ.

  ಕೇಂದ್ರ ಗೃಹ ಸಚಿವ ಅಮಿತ್​​ ಶಾರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಅರವಿಂದ್​​ ಕೇಜ್ರಿವಾಲ್​​, ಇದೊಂದು ಸೌಹಾರ್ದಯುತ ಭೇಟಿ. ದೆಹಲಿ ಅಭಿವೃದ್ದಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಜನರಿಗಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರ ಒಟ್ಟಿಗೆ ಕೆಲಸ ಮಾಡುವ ಎಂದು ಶಪಥ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಜೊತೆಯಾಗಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಈ ಹಿಂದೆಯೇ ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇದಕ್ಕಾಗಿ ಸಿಎಂ ಅರವಿಂದ್​​ ಕೇಜ್ರಿವಾಲ್​​ ಗೃಹ ಸಚಿವಾಲಯದ ಬಳಿ ಸಮಯ ಕೇಳಿದ್ದರು. ಅದರತೆಯೇ ಈಗ ಭೇಟಿ ಮಾಡಿ ಉಭಯ ನಾಯಕರು ಮಾತುಕತೆ ನಡೆಸಿದ್ಧಾರೆ. ಇದು ಇಬ್ಬರು ನಾಯಕರ ನಡುವಿನ ಮೊದಲ ಭೇಟಿಯಾಗಿದೆ. ಇಲ್ಲಿಯವರೆಗೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಾ ಬಂದಿದ್ದ ಇವರು ಈಗ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

  ಇದನ್ನೂ ಓದಿ: ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಿಎಂ ಆಗಿ ಅರವಿಂದ್ ಕೇಜ್ರಿವಾಲ್ ಪದಗ್ರಹಣ

  ಕೇಂದ್ರಾಡಳಿತ ಪ್ರದೇಶಗಳ ಮೇಲೆ ಕೇಂದ್ರ ಗೃಹ ಸಚಿವಾಲಯ ನೇರ ನಿಯಂತ್ರಣ ಹೊಂದಿದೆ. ಅಲ್ಲಿನ ಆಡಳಿತ ಪ್ರಾದೇಶಿಕ ಸರ್ಕಾರಕ್ಕೆ ನೀಡಿದ್ದರೂ, ಕಾನೂನು ಸುವ್ಯವಸ್ಥೆ ರಕ್ಷಣೆ ಮೊದಲಾದವು ಕೇಂದ್ರ ಗೃಹಸಚಿವಾಲಯದ ಆಧೀನಕ್ಕೆ ಒಳಪಡುತ್ತವೆ. ಜತೆಗೆ ದೆಹಲಿ ಎದುರಿಸುತ್ತಿರುವ ವಾಯು ಮಾಲಿನ್ಯ, ಟ್ರಾಫಿಕ್‌ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ನೆರವನ್ನು ಅರವಿಂದ್​​ ಕೇಜ್ರಿವಾಲ್​​​​​ ಕೇಳಿಕೊಂಡಿದ್ಧಾರೆ ಎನ್ನುತ್ತಿವೆ ಮೂಲಗಳು.

  ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಭಿನ್ನ ಕಾರ್ಯಕ್ರಮದಲ್ಲಿ ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕರಿಸಿದರು. ಆಗ “ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಅವರಿಗೆ ಬರಲಾಗಿಲ್ಲ. ಬಹುಶಃ ಅವರು ಬೇರೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರಬಹುದು. ಈ ವೇದಿಕೆ ಮೂಲಕ ದೆಹಲಿಯಲ್ಲಿ ಸುಗಮ ಆಡಳಿತ ಮತ್ತು ಅಭಿವೃದ್ಧಿಗೆ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಆಶೀರ್ವಾದ ಪಡೆಯಬಯಸುತ್ತೇನೆ” ಎಂದು ಕೇಜ್ರಿವಾಲ್ ಹೇಳಿದ್ದರು. ಈ ಬೆನ್ನಲ್ಲೇ ಹೀಗೆ ಅಮಿತ್​​ ಶಾರನ್ನು ಭೇಟಿಯಾಗಿರುವುದು ಭಾರೀ ಚರ್ಚಗೆ ಗ್ರಾಸವಾಗಿದೆ.
  First published: