Covid-19: ಎರಡನೇ ಹಂತದ ಕೊರೋನಾ ಸುಳಿಯಲ್ಲಿ ದೆಹಲಿ; ಅರವಿಂದ್ ಕೇಜ್ರಿವಾಲ್

ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗೆ ಅತಿ ಹೆಚ್ಚು ಜನ ಭಾಗಿಯಾಗಿರುವುದು ಕೂಡ  ಸೋಂಕಿತರ ಸಂಖ್ಯೆ ಏರಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

 • Share this:
  ದೆಹಲಿ (ಸೆ.24): ಇಡೀ ಪ್ರಪಂಚವನ್ನು ಕಾಡುತ್ತಿರುವ ಮಹಾಮಾರಿ ಕೋರೋನಾ ವೈರಸ್​ ಸೋಂಕಿಗೆ ದೇಶ ಕೂಡ ನಲುಗಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 56 ಲಕ್ಷ ಗಡಿದಾಟಿದೆ. ಈ ನಡುವೆ ಕೊವೀಡ್​ ಸೋಂಕು ಎರಡನೇ ಹಂತ ತಲುಪಿದ್ದು, ಪರಿಸ್ಥಿತಿ ಬಿಗಡಾಯಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಈ ತಿಂಗಳಾರಂಭದಲ್ಲಿ ದಿನವೊಂದಕ್ಕೆ ನಾಲ್ಕು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದೆ. ಸೋಂಕು ತೀವ್ರತರದಲ್ಲಿ ಹಬ್ಬುತ್ತಿದ್ದು, ಇದು ಕೋವಿಡ್-19 ಎರಡನೇ ಹಂತ ತಲುಪಿರುವ ಲಕ್ಷಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಯಾವುದೇ ರಾಜ್ಯ ಸೋಂಕು ಎರಡನೇ ಹಂತ ತಲುಪಿದೆ ಎಂದು ತಿಳಿಸಿಲ್ಲ. ಇದೇ ಮೊದಲ ಬಾರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇದನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಕೊರೋನಾ ಸೋಂಕು ಅತಿ ಹೆಚ್ಚು ದಾಖಲುಗೊಳ್ಳುತ್ತಿರುವ ರಾಜ್ಯಗಳಲ್ಲಿ ದೆಹಲಿ ಐದನೇ ಸ್ಥಾನದಲ್ಲಿದೆ.

  ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಜ್ಞರ ಪ್ರಕಾರ ದೆಹಲಿ ಎರಡನೇ ಹಂತದ ಕೊರೋನಾ ಸೋಂಕಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
  ಮಾಹಿತಿ ಪ್ರಕಾರ ಇಳಿಮುಖವಾಗಿದ್ದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಸೆಪ್ಟೆಂಬರ್ 16ರಂದು 4.500 ಪ್ರಕರಣ ದಾಖಲಾಗಿದ್ದವು. 24 ಗಂಟೆ ಬಳಿಕ ಸೋಂಕಿತರ ಸಂಖ್ಯೆ ಇಳಿಮುಖವಾಗಿ 3.700 ಪ್ರಕರಣ ದಾಖಲಾಗಿದೆ ಎಂದರು. ಇದೇ ವೇಳೆ ಮುಂಬರುವ ದಿನಗಳಲ್ಲಿ ಈ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಸೆ.9ರ ಬಳಿಕ ದೆಹಲಿಯಲ್ಲಿ ದಿನವೊಂದಕ್ಕೆ 4000ಕ್ಕೂ ಅಧಿಕ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಸೆ.16ರಂದು ಮಾತ್ರ ಅಧಿಕ ಜನರು ಸೋಂಕಿಗೆ ಒಳಗಾಗಿದ್ದಾರೆ. ಇದರ ಹೊರತಾಗಿ ಸೆ.15-19ರಂದು 4,473 ಹಾಗೂ 4,432 ಪ್ರಕರಣಗಳು ದಾಖಲಾಗಿದೆ.
  ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗೆ ಅತಿ ಹೆಚ್ಚು ಜನ ಭಾಗಿಯಾಗಿರುವುದು ಕೂಡ  ಸೋಂಕಿತರ ಸಂಖ್ಯೆ ಏರಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನು ಓದಿ: ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ ಹೆಚ್ಚಳದ ಬಗ್ಗೆ ಪ್ರಧಾನಿ ಮೋದಿ ಕಳವಳ

  ದೆಹಲಿ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಏರುಮುಖವಾಗುತ್ತಿದೆ. ಇದೇ ಹಿನ್ನಲೆ ಯಾವ ರೀತಿ ಕ್ರಮ ಕೈಗೊಂಡು ನಿಯಂತ್ರಣಕ್ಕೆ ಮುಂದಾಗಬೇಕು ಎಂಬ ಕುರಿತು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದರು. ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಪತ್ತೆ ಪತ್ತೆ ಹಚ್ಚುವುದು, ಪರೀಕ್ಷಿಸುವುದು, ತಪಾಸಣೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು. ಅಲ್ಲದೇ ಚಳಿಗಾಲ ಪ್ರಾರಂಭವಾಗುತ್ತಿದ್ದು, ಇನ್ನಷ್ಟು ಸೋಂಕು ಬಿಗಡಾಯಿಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಗೆ ಗಮನಹರಿಸಿ ಎಂದು ಸಲಹೆ ನೀಡಿದರು.
  Published by:Seema R
  First published: