Arvind Kejriwal| ಎಎಪಿ ರಾಷ್ಟ್ರೀಯ ಸಂಚಾಲಕರಾಗಿ ಸತತ ಮೂರನೇ ಬಾರಿ ಆಯ್ಕೆಯಾದ ಅರವಿಂದ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್.

ಅರವಿಂದ್ ಕೇಜ್ರಿವಾಲ್.

ರಾಷ್ಟ್ರೀಯ ಮಂಡಳಿಯ ಎಲ್ಲಾ ಹೊಸ ಸದಸ್ಯರಿಗೆ, ನಿಮ್ಮ ಮನಸ್ಸಿನಲ್ಲಿ ಒಂದು ಆಲೋಚನೆ ಇರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಎಎಪಿಯಲ್ಲಿ ಯಾವುದೇ ಹುದ್ದೆಯನ್ನು ಬಯಸಬೇಡಿ ಎಂದು ಶನಿವಾರ ಅರವಿಂದ ಕೇಜ್ರಿವಾಲ್ ಪಕ್ಷದ ಹೊಸ ಕಾರ್ಯಕಾರಿ ಸದಸ್ಯರಿಗೆ ತಿಳಿಸಿದ್ದಾರೆ.

  • Share this:

ನವ ದೆಹಲಿ (ಸೆಪ್ಟೆಂಬರ್​ 12); ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kekriwal) ಮರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಆಮ್‌‌ ಆದ್ಮಿ (Aam Admi) ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಮತ್ತೆ ಆಯ್ಕೆಯಾದರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಪಕ್ಷದ ನಾಯಕರಾದ ಪಂಕಜ್ ಗುಪ್ತಾ ಅವರು ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಎನ್ ಡಿ ಗುಪ್ತಾ ಅವರು ಪಕ್ಷದ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿಯ ಹೊಸ 34 ಸದಸ್ಯರ ಕಾರ್ಯಕಾರಿ ಸದಸ್ಯರನ್ನು ಶನಿವಾರ ಆಯ್ಕೆ ಮಾಡಲಾಗಿದೆ.



"ಭಗತ್ ಸಿಂಗ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಮುಖ್ಯ ವಿಚಾರವಾದಿಗಳಾಗಿದ್ದಾರೆ. ಅವರು ತೋರಿಸಿದ ಮಾರ್ಗದಲ್ಲಿ ನಾವು ನಡೆಯುತ್ತೇವೆ. ಭಗತ್ ಸಿಂಗ್, ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದರು…ಭಗತ್ ಸಿಂಗ್ ಅವರಂತೆ ನಮ್ಮ ಪ್ರತಿಯೊಬ್ಬ ಸ್ವಯಂಸೇವಕರು ಸರ್ವೋಚ್ಚ ತ್ಯಾಗ ಮಾಡಲು ಸಿದ್ಧರಾಗಿರಬೇಕು" ಎಂದು ಕೇಜ್ರಿವಾಲ್ ಶನಿವಾರ ವಿಡಿಯೋ ಭಾಷಣದಲ್ಲಿ ಹೇಳಿದ್ದರು.


"ರಾಷ್ಟ್ರೀಯ ಮಂಡಳಿಯ ಎಲ್ಲಾ ಹೊಸ ಸದಸ್ಯರಿಗೆ, ನಿಮ್ಮ ಮನಸ್ಸಿನಲ್ಲಿ ಒಂದು ಆಲೋಚನೆ ಇರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಎಎಪಿಯಲ್ಲಿ ಯಾವುದೇ ಹುದ್ದೆಯನ್ನು ಬಯಸಬೇಡಿ" ಎಂದು ಶನಿವಾರ ಅರವಿಂದ ಕೇಜ್ರಿವಾಲ್ ಪಕ್ಷದ ಹೊಸ ಕಾರ್ಯಕಾರಿ ಸದಸ್ಯರಿಗೆ ತಿಳಿಸಿದ್ದಾರೆ.


ಏಪ್ರಿಲ್ 2016 ರಲ್ಲಿ, ಕೇಜ್ರಿವಾಲ್ ಎರಡನೇ ಬಾರಿಗೆ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಆಯ್ಕೆಯಾಗಿದ್ದರು. ರಾಷ್ಟ್ರೀಯ ಸಂಚಾಲಕರಾಗಿ ಅವರ ಎರಡನೇ ಅವಧಿಯಲ್ಲಿ, ಅವರು 3 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ 2019 ರಲ್ಲಿ ಲೋಕಸಭಾ ಚುನಾವಣೆ ಮತ್ತು 2020 ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಅರವಿಂದ ಕೇಜ್ರಿವಾಲ್ ಅವರ ಅಧಿಕಾರಾವಧಿಯನ್ನು 2020 ರವರೆಗೆ ವಿಸ್ತರಿಸಲಾಗಿತ್ತು.


2020 ರಲ್ಲಿ, COVID-19 ಕಾರಣದಿಂದಾಗಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿಯ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಜನವರಿ 2021 ರಲ್ಲಿ ನಡೆದ ರಾಷ್ಟ್ರೀಯ ಮಂಡಳಿಯ ಸಭೆಯಲ್ಲಿ, ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು. ಈ ತಿದ್ದುಪಡಿಯಲ್ಲಿ, ರಾಷ್ಟ್ರೀಯ ಸಂಚಾಲಕರ ಅಧಿಕಾರಾವಧಿಯನ್ನು 3 ವರ್ಷದಿಂದ 5 ವರ್ಷಗಳಿಗೆ ಹೆಚ್ಚಿಸಲಾಗಿದೆ. ಆ ಸಮಯದಲ್ಲಿ ಮಾಡಿದ ತಿದ್ದುಪಡಿಯು ಎರಡು ಅವಧಿಯವರೆಗೆ ರಾಷ್ಟ್ರೀಯ ಸಂಚಾಲಕರನ್ನು ನೇಮಿಸುವುದನ್ನೂ ಕಡ್ಡಾಯ ಮಾಡಲಾಗಿತ್ತು.


ರಾಷ್ಟ್ರೀಯ ಕಾರ್ಯಕಾರಿಣಿಯ 34 ಸದಸ್ಯರು ಪಕ್ಷದ ರಾಷ್ಟ್ರೀಯ ಸಂಚಾಲಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆ ಸೆಪ್ಟೆಂಬರ್ 11 ರಂದು ಅಂದರೆ ಹಿಂದಿನ ದಿನ ನಡೆಯಿತು, ಇದರಲ್ಲಿ 34 ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಕಾರಿಣಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಕೇಜ್ರಿವಾಲ್ ಅವರ ಆಯ್ಕೆಯನ್ನು ಅನುಮೋದಿಸಿತು.


ಇದನ್ನೂ ಓದಿ: ಯೋಗಿ ಆದಿತ್ಯನಾಥ್ "ಅಭಿವೃದ್ಧಿ" ಜಾಹೀರಾತಿನಲ್ಲಿ ಕೊಲ್ಕತ್ತದ ಎಂಎಎ ಪ್ಲೈಓವರ್ ಫೋಟೋ; ಟಿಎಂಸಿ ಅಪಹಾಸ್ಯ

top videos


    ಈ ರಾಷ್ಟ್ರೀಯ ಕಾರ್ಯಕಾರಿಣಿ ಇಂದು ಬೆಳಿಗ್ಗೆ ಅರವಿಂದ ಕೇಜ್ರಿವಾಲ್ ಅವರನ್ನು ರಾಷ್ಟ್ರೀಯ ಸಂಚಾಲಕರಾಗಿ ಮರು ಆಯ್ಕೆ ಮಾಡಿದರು. ಈಗ ಅರವಿಂದ ಕೇಜ್ರಿವಾಲ್ ಮುಂದಿನ 5 ವರ್ಷಗಳ ಕಾಲ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿರುತ್ತಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿದೆ.

    First published: