Arvind Kejriwal: ಅಗ್ನಿಪರೀಕ್ಷೆ ಗೆದ್ದ ಅರವಿಂದ; 62 ರಲ್ಲಿ 58 ಶಾಸಕರ ಮತ ಕೇಜ್ರಿವಾಲ್​ಗೆ

ಬಿಜೆಪಿಯ ‘ಆಪರೇಷನ್ ಕಮಲ ದೆಹಲಿ’ ‘ಆಪರೇಷನ್ ಕಿಚಡ್’ ಆಗಿ ಮಾರ್ಪಟ್ಟಿದೆ ಎಂಬುದನ್ನು ದೆಹಲಿ ಜನತೆಯ ಮುಂದೆ ಸಾಬೀತುಪಡಿಸಲು ನಾನು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ತರಲು ಬಯಸುತ್ತೇನೆ ಎಂದು ಅವರು ಈ ಮುನ್ನ ಹೇಳಿದ್ದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

 • Share this:
  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ವಿಶ್ವಾಸಮತ ಗೆದ್ದಿದ್ದಾರೆ. 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಈ ಪೈಕಿ 58 ಶಾಸಕರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (AAP) ಪರವಾಗಿ ಮತ ಚಲಾಯಿಸಿದ್ದಾರೆ. ತಮ್ಮ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿಯ 'ಆಪರೇಷನ್ ಕಮಲ' ವಿಫಲವಾಗಿದೆ ಎಂದು ಆರೋಪಿಸಿ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು(Trust Vote In Delhi Assembly) ಪ್ರಸ್ತಾಪಿಸಿದ್ದರು.

  ಬಿಜೆಪಿ ದೆಹಲಿಯಲ್ಲಿ ಒಬ್ಬ ಎಎಪಿ ಶಾಸಕರನ್ನೂ ಖರೀದಿಸಲು ವಿಫಲರಾಗಿದೆ. ನಮ್ಮಲ್ಲಿ 62 ಶಾಸಕರಿದ್ದಾರೆ. ಇಬ್ಬರು ಸದ್ಯ ವಿದೇಶದಲ್ಲಿದ್ದಾರೆ. ಒಬ್ಬರು ಜೈಲಿನಲ್ಲಿದ್ದಾರೆ. ನಾಲ್ಕನೇ ಸದಸ್ಯರು ಸದನದ ಸ್ಪೀಕರ್ ಆಗಿದ್ದಾರೆ ಎಂದು ವಿಶ್ವಾಸಮತ ಯಾಚನೆಯನ್ನು ಅಂಗೀಕರಿಸಿದ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.

  20 ಕೋಟಿ ರೂಪಾಯಿ ಆಮಿಷ?
  ಕಳೆದ ವಾರ ಬಿಜೆಪಿಯು 40 ಎಎಪಿ ಶಾಸಕರನ್ನು ಗುರಿಯಾಗಿಸಿಕೊಂಡು ಆಪರೇಷನ್ ಕಮಲ ನಡೆಸಲು ಯತ್ನಿಸಿತ್ತು. ಪಕ್ಷವನ್ನು ಬದಲಾಯಿಸಲು ಪ್ರತಿಯೊಬ್ಬರಿಗೂ 20 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದರು.

  ಆಪರೇಷನ್ ಕಮಲದ ಆರೋಪ ಮಾಡಿದ್ದ ಕೇಜ್ರಿವಾಲ್
  ಬಿಜೆಪಿಯ ‘ಆಪರೇಷನ್ ಕಮಲ ದೆಹಲಿಯಲ್ಲಿ ‘ಆಪರೇಷನ್ ಕಿಚಡಿ’ ಆಗಿ ಮಾರ್ಪಟ್ಟಿದೆ ಎಂಬುದನ್ನು ದೆಹಲಿ ಜನತೆಯ ಮುಂದೆ ಸಾಬೀತುಪಡಿಸಲು ನಾನು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ತರಲು ಬಯಸುತ್ತೇನೆ ಎಂದು ಅವರು ಈ ಮುನ್ನ ಹೇಳಿದ್ದರು.

  ಇದನ್ನೂ ಓದಿ: Giridih Jain Temple: 500 ಕೋಟಿ ಹಣ, 10 ವರ್ಷದಿಂದ ಕೆಲಸ! ಇನ್ನೂ ಮುಗಿದಿಲ್ಲ ಈ ದೇಗುಲದ ನಿರ್ಮಾಣ!

  ಶಿಷ್ಯನ ವಿರುದ್ಧ ಗುರು ಗರಂ
  ಭ್ರಷ್ಟಾಚಾರದ ಪ್ರಕರಣದ ನಂತರ ಜುಲೈನಲ್ಲಿ ಹಿಂತೆಗೆದುಕೊಳ್ಳಲಾದ ಕೇಜ್ರಿವಾಲ್ ಸರ್ಕಾರದ ಮದ್ಯ ಪರವಾನಗಿ ನೀತಿಯ ಕುರಿತು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪಕ್ಷದ ಮಾಜಿ ಮಾರ್ಗದರ್ಶಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಪತ್ರ ಬರೆದಿದ್ದಾರೆ.

  ನನಗೆ ನೋವಾಗಿದೆ ಎಂದ ಅಣ್ಣಾ ಹಜಾರೆ
  ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನಿಮಗೆ ಅಧಿಕಾರದ ಅಮಲು ಏರಿದೆ ಎಂದು ತೋರುತ್ತಿದೆ ಎಂಬಂತಹ ಕಟುಸಾಲುಗಳಲ್ಲಿ ಅಣ್ಣಾ ಹಜಾರೆ ಕೇಜ್ರಿವಾಲ್ ಸರಕಾರವನ್ನು ಟೀಕಿಸಿದ್ದಾರೆ. ನೀವು ಮುಖ್ಯಮಂತ್ರಿಗಳಾದ ನಂತರ ನಾನು ನಿಮಗೆ ಇದೇ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ. ಇದಕ್ಕೆ ಕಾರಣವೇನೆಂದರೆ ನಿಮ್ಮದೇ ಸರಕಾರದ ಮದ್ಯ ನೀತಿಯ ಕುರಿತು ಇತ್ತೀಚಿನ ಸುದ್ದಿ ವರದಿಗಳಿಂದ ನನಗೆ ನೋವುಂಟಾಗಿದೆ ಎಂದು ಹಿಂದಿ ಭಾಷೆಯಲ್ಲಿರುವ ಪತ್ರವು ತಿಳಿಸಿದೆ.

  ಇದನ್ನೂ ಓದಿ: Dawood Ibrahim: ದಾವೂದ್ ಇಬ್ರಾಹಿಂ ಬಗ್ಗೆ ಮಾಹಿತಿ ನೀಡಿದರೆ 25 ಲಕ್ಷ ಬಹುಮಾನ; ಡಿ ಕಂಪನಿ ಮಟ್ಟಹಾಕಲು ಯೋಜನೆ

  ಅಣ್ಣಾ ಹಜಾರೆ ಪತ್ರದಲ್ಲಿ ಏನಿದೆ?
  ನನ್ನ ಬಳಿಗೆ ಮುನ್ನುಡಿ ಬರೆಯುವಂತೆ ತಂದಿದ್ದ ನಿಮ್ಮ ಪುಸ್ತಕ ಸ್ವರಾಜ್‌ನಲ್ಲಿ ಮದ್ಯ ನೀತಿಗಳ ಕುರಿತು ನೀವು ಆದರ್ಶಪ್ರಾಯವಾದ ವಿಚಾರಗಳನ್ನು ಬರೆದಿದ್ದೀರಿ ಎಂದು ಪತ್ರದಲ್ಲಿ ತಿಳಿಸಿರುವ ಹಜಾರೆಯವರು, ಪುಸ್ತಕದಲ್ಲಿರುವ ಸಾಲುಗಳನ್ನು ಉಲ್ಲೇಖಿಸುತ್ತಾ ಪ್ರದೇಶದಲ್ಲಿರುವ ನಿವಾಸಿಗಳ ಒಪ್ಪಿಗೆಯಿಲ್ಲದೇ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಬೇಡಿ ಎಂದಿದ್ದಿರಿ ಆದರೆ ಮುಖ್ಯಮಂತ್ರಿಗಳಾದ ಬಳಿಕ ನೀವು ಆ ಆದರ್ಶಗಳನ್ನು ಮರೆತಿದ್ದೀರಿ ಎಂದು ಪತ್ರದ ಮೂಲಕ ನೇರವಾದ ವಾಗ್ದಾಳಿ ನಡೆಸಿದ್ದಾರೆ
  Published by:guruganesh bhat
  First published: